
ಕೋಲಾರ,ಸೆ,೧೯:ನಿವೇಶದ ವಿಷಯವಾಗಿ ದಾಯಾದಿಗಳ ನಡುವೆ ಕಲಹವುಂಟಾಗಿ ಡ್ರಾಗನ್‌ನಿಂದ ಯುವಕನಿಗೆ ಇರಿದ ಪರಿಣಾಮ ಆಸ್ಪತ್ರೆ ಮಾರ್ಗದಲ್ಲಿ ಸಾವನ್ನಾಪ್ಪಿರುವ ಪ್ರಕರಣ ನಗರದ ಕ್ಲಾಕ್ ಟವರ್ ಸಮೀಪದ ಷಾಹೀನ್ ಷಾ ನಗರದ ಚಹ ಅಂಗಡಿವೊಂದರ ಬಳಿ ಸೋಮವಾರ ಮಧ್ಯಾಹ್ನ ನಡೆದಿದೆ.
ಮೃತ ಪಟ್ಟಿರುವ ಯುವಕನನ್ನು ಮುಜಬೀಲ್ ಪಾಷ(೧೯) ಎಂದು ಗುರುತಿಸಲಾಗಿದೆ. ಈತನನ್ನು ಹತ್ಯೆ ಮಾಡಿದವರು ಅತ್ತೆ ಮಕ್ಕಳಾದ ರೋಷನ್ ಜಮೀರ್ ಹಾಗೂ ನಬೀವುಲ್ಲಾ ಎಂದು ಹೇಳಲಾಗಿದೆ.
ನಿವೇಶನವೊಂದರಲ್ಲಿ ೯ ಇಂಚು ಜಾಗದ ವಿಷಯವಾಗಿ ಎರಡು ಕುಟುಂಬಗಳ ನಡುವೆ ವಿವಾದವು ದ್ವೇಷಕ್ಕೆ ತಿರುಗಿತ್ತು ಕಳೆದ ಮೂರು ತಿಂಗಳ ಹಿಂದೆಯೇ ಜಗಳವಾಗಿತ್ತು ಈ ಸಂದರ್ಭದಲ್ಲಿ ಮುಜಬೀಲ್ ಒಂದ ವಾರ ಶಿಕ್ಷೆಗೆ ಒಳಗಾಗಿದ್ದನು ಎನ್ನಲಾಗಿದೆ.
ಸೋಮವಾರ ಇದೇ ವಿಷಯವಾಗಿ ಮುಜಬೀಲ್ ಬಳಿ ಅತ್ತೆ ಮಗನಾದ ರೋಷನ್ ಜಮೀರ್ ಹಾಗೂ ಅತನ ಸಹಚರರು ದಾಳಿ ಮಾರಕ ಯುಧದಿಂದ ಅಟ್ಟಾಡಿಸಿ ಕೊಂಡು ಬಂದು ಷಾಹೀನ್ ಷಾ ನಗರದ ಬಳಿ ಟೀ ಅಂಗಡಿಯಲ್ಲಿ ಅವಿತು ಕೊಂಡಿದ್ದ ಮುಜಬೀಲ್ ಪಾಷನನ್ನು ರಸ್ತೆ ಎಳೆದು ಡ್ರಾಗನ್ ನಿಂದ ತಿವಿದು ಹತ್ಯೆ ಮಾಡಿದ್ದಾರೆ.
ತೀವ್ರವಾಗಿ ಗಾಯಗೊಂಡಿದ್ದ ಮುಜಬೀಲ್ ಪಾಷನನ್ನು ನಗರದ ಎಸ್.ಎನ್ ಆರ್. ಆಸ್ಪತ್ರೆಗೆ ದಾಖಲು ಮಾಡಲು ಹೋದಾಗ ವೈದ್ಯರು ದಾಖಲು ಮಾಡಿಕೊಳ್ಳಲು ನಿರಾಕರಿಸಿ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ಹೋಗಲು ತಿಳಿಸಿದರು, ಅದರೆ ಮಾರ್ಗ ಮಾಧ್ಯದಲ್ಲಿಯೇ ಮುಜಬೀಲ್ ಪಾಷ ಕೊನೆಯುಸಿರೆಳೆದನು,
ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದು ತಲೆಮರೆಸಿ ಕೊಂಡಿರುವ ಅರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.