ಇರಾನ್ ಮೇಲೆ ಇಸ್ರೇಲ್ ದಾಳಿ

ನವದೆಹಲಿ/ ಟೆಹರಾನ್.ಏ.೧೯- ಸಿರಿಯಾದಲ್ಲಿ ಇರಾನ್ ರಾಯಭಾರಿ ಕಚೇರಿಯ ಮೇಲೆ ದಾಳಿಗೆ ಪ್ರತೀಕಾರವಾಗಿ ಇಸ್ರೇಲಿ ಕ್ಷಿಪಣಿಗಳು ತಡರಾತ್ರಿ ಇರಾನ್ ಮೇಲೆ ಡ್ರೋಣ್ ದಾಳಿ ನಡೆಸಿದ್ದು ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.
ಇರಾನ್ ವಾಯುಪ್ರದೇಶದ ಮೇಲೆ ಅನೇಕ ವಿಮಾನಗಳನ್ನು ತಿರುಗಿಸಿದ ಕಾರಣ ಇಸ್ಫಹಾನ್ ಪ್ರಾಂತ್ಯದಲ್ಲಿ ’ಜೋರಾಗಿ ಶಬ್ದ ಕೇಳಿಸಿದ್ದು ಎರಡೂ ದೇಶಗಳ ನಡುವೆ ಯುದ್ಧದ ಭೀತಿಯ ವಾತಾವರಣ ನಿರ್ಮಾಣವಾಗಿದೆ.
ಇರಾನ್‌ನ ರಾಜಧಾನಿ ಇಸ್ಫಹಾನ್‌ನಲ್ಲಿನ ಪರಮಾಣು ಸ್ಥಾವರದ ಬಳಿ ಸ್ಫೋಟದ ವರದಿಯಾಗಿದ್ದು ಪರಮಾಣು ಸ್ಥಾವರಕ್ಕೆ ಯಾವುದೇ ಹಾನಿಯಾಗಿಲ್ಲ. ಸಂಪೂರ್ಣವಾಗಿ ಸುರಕ್ಷಿತವಾಗಿವೆ’ ಎಂದು ಹೇಳಲಾಗಿದೆ..
ಇಸ್ಫಹಾನ್ ಪ್ರಾಂತ್ಯದಲ್ಲಿ ಹಲವಾರು ಇರಾನಿನ ಪರಮಾಣು ಸೌಲಭ್ಯಗಳಿಗೆ ನೆಲೆಯಾಗಿದೆ, ಇದರಲ್ಲಿ ನಟಾಂಜ್ ಯುರೇನಿಯಂ ಪುಷ್ಟೀಕರಣ ಕೇಂದ್ರವೂ ಸೇರಿದೆ. ಸ್ಫೋಟದ ಸದ್ದು ಕೇಳಿಸುತ್ತಿದ್ದಂತೆ ವಿಮಾನಗಳ ಮಾರ್ಗ ಬದಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಸುದ್ದಿ ಸಂಸ್ಥೆಯು ಇಸ್ಫಹಾನ್ ನಗರದ ಬಳಿ ‘ಸ್ಫೋಟ’ ಕೇಳುತ್ತಿದೆ ಎಂದು ವರದಿ ಮಾಡಿದ ನಂತರ ವಾಣಿಜ್ಯ ವಿಮಾನಗಳು ಇಂದು ಬೆಳಗ್ಗೆ ಪಶ್ಚಿಮ ಇರಾನ್‌ನ ಮೇಲೆ ಪ್ರಯಾಣ ಬೆಳೆಸಲು ಹಿಂದೇಟು ಹಾಕಿವೆ.
ಇಸ್ರೇಲ್‌ನ ಮೇಲೆ ಇರಾನ್‌ನ ವಿನಾಶಕಾರಿ ಕ್ಷಿಪಣಿ ಮತ್ತು ಡ್ರೋನ್ ದಾಳಿಯ ನಂತರ ಮಧ್ಯಪ್ರಾಚ್ಯ ಉದ್ವಿಗ್ನತೆ ಇನ್ನೂ ಹೆಚ್ಚಿರುವ ಸಮಯದಲ್ಲಿ ಈ ಘಟನೆ ಸಂಭವಿಸಿದೆ.
ಸ್ಥಳೀಯ ಸಮಯ ಮುಂಜಾನೆ ೪.೩೦ ಕ್ಕೆ, ದುಬೈ ಮೂಲದ ಎಮಿರೇಟ್ಸ್ ಮತ್ತು ಫ್ಲೈ ದುಬೈ ವಿಮಾನಯಾನ ಸಂಸ್ಥೆಗಳು ಪಶ್ಚಿಮ ಇರಾನ್‌ನ ಮೇಲೆ ಸುತ್ತು ಹಾಕಲು ಪ್ರಾರಂಭಿಸಿದವು. ಪೈಲಟ್‌ಗಳಿಗೆ ಸ್ಥಳೀಯ ಸಲಹೆಗಳು ವಾಯುಪ್ರದೇಶವನ್ನು ನಿರ್ಬಂಧಿಸಿರಬಹುದು ಎಂದು ಸೂಚಿಸಿದರೂ, ಅವರು ಯಾವುದೇ ವಿವರಣೆ ನೀಡಿಲ್ಲ ಎನ್ನಲಾಗಿದೆ.