ಇರಾನ್ ದೇಶದ ವಿ.ವಿಯಿಂದ ಬಳ್ಳಾರಿಯ ವರದ್ ಕುಲಕರ್ಣಿ ಲೇಖನ ಪ್ರಕಟ

ಬಳ್ಳಾರಿ, ಅ.30: ಇರಾನ್ ದೇಶದ ಲೋರೆಸ್ಟಾನ ವಿಶ್ವವಿದ್ಯಾಲಯವು ಪ್ರಾಣಿಗಳ ವೈವಿಧ್ಯತೆಯ ಕುರಿತು ಪ್ರಕಟಿಸಿದ ಲೇಖನಗಳಲ್ಲಿ ಅನಯಿಕ ತಳಿಶಾಸ್ತ್ರದಲ್ಲಿ “ಸಿಸಿಲಿಯನ್” ನ ಗುಣಲಕ್ಷಣಗಳ ಕುರಿತು ಪ್ರಪ್ರಥಮ ಬಾರಿಗೆ ಕಂಡುಹಿಡಿದಿರುವ 22ನೇ ವಯಸ್ಸಿನ ವರದ್ ಕುಲಕರ್ಣಿಯವರನ್ನು ಯುವ ವಿಜ್ಞಾನಿಯೆಂದು ಪ್ರೋತ್ಸಾಹಿಸಿ, ಆ ಪತ್ರಿಕೆಯಲ್ಲಿ ಅವರ ಲೇಖನವನ್ನು ಪ್ರಕಟಿಸಿದ್ದಾರೆ.
ಇವರು Long-headed Caecilian, lchthyophis longicephalus (ಉದ್ದನೆಯ ತಲೆಯ ಸಿಸಿಲಿಯನ್ ಏರಿಯೋಫಿಸ್ ಲಾಂಗಿಸೆಫಾಲಸ್) ಎಂಬ ಉಭಯಚರದ ಬಗ್ಗೆ ಡಾ.ಗೋವಿಂದಪ್ಪ (ಅನ್ವಯಿಕ ತಳಿಶಾಸ್ತ್ರ ವಿಭಾಗ, ಜ್ಞಾನಭಾರತಿ ಆವರಣ, ಬೆಂಗಳೂರು ವಿಶ್ವ ವಿದ್ಯಾಲಯ) ಅವರ ಮೇಲ್ವಿಚಾರಣೆಯಲ್ಲಿ ಈ ಸಂಶೋಧನೆಯನ್ನು ಮಾಡಿದ್ದಾರೆ.
ಪ್ರಸ್ತುತ ಸಂಶೋಧನೆಗೆ ಇವರು ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಕೇರಳ, ತಮಿಳುನಾಡಿನ ಘಟ್ಟಗಳಲ್ಲಿ ಸಂಚರಿಸಿ ‘ಸಿಸಿಲಿಯನ್’ಗಳನ್ನು ತಂದು ಸಂಶೋಧಿಸಿ ಮೊದಲ ಬಾರಿಗೆ ಅವುಗಳ ಗುಣಲಕ್ಷಣಗಳನ್ನು ಕಂಡುಹಿಡಿದಿದ್ದಾರೆ. ವರದ್ ಕುಲಕರ್ಣಿಯ ಈ ಸಾಧನೆಗೆ ಮೊದಲು ಅಡಿಪಾಯ ಹಾಕಿದ್ದು ಬಳ್ಳಾರಿಯ “ಬೆಸ್ಟ್ ಶಿಕ್ಷಣ ಸಂಸ್ಥೆ” ಎಂದರೆ ತಪ್ಪಾಗಲಾರದು. ಏಕೆಂದರೆ ಇವರ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಪದವಿಪೂರ್ವ ಶಿಕ್ಷಣದವರೆಗೂ ಇದೇ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ.
ಪ್ರಸ್ತುತ ಇವರು ತಳಿಶಾಸ್ತ್ರಿದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಇವರ ಸಾಧನೆಗೆ ಬಳ್ಳಾರಿಯ ಬೆಸ್ಟ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು, ಉಪನ್ಯಾಸಕರು, ಶಿಕ್ಷಕ ವರ್ಗ ಮತ್ತು ಎಲ್ಲ ಸಿಬ್ಬಂದಿವರ್ಗದವರು ಹರ್ಷವ್ಯಕ್ತಪಡಿಸಿದ್ದಾರೆ. ಜೊತೆಗೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಸಂಶೋಧನೆಗಳನ್ನು ಮಾಡಿ ಶ್ರೇಷ್ಠ ವಿಜ್ಞಾನಿಯಾಗಿ, ಜಗದ್ವಿಖ್ಯಾತಿಯಾಗಿ ಜಗತ್ ಕಲ್ಯಾಣ ಕಾರ್ಯಗಳನ್ನು ಮಾಡಲೆಂದು ಹಾರೈಸಿದ್ದಾರೆ.