
ಇಸ್ಲಾಮಾಬಾದ್, ಮೇ.೧೯-ಮೂರು ಭಯೋತ್ಪಾದನೆ ಪ್ರಕರಣಗಳಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಮಧ್ಯಂತರ ಜಾಮೀನು ಅವಧಿಯನ್ನು ಲಾಹೋರ್ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ಜೂನ್ ೨ರವರೆಗೆ ವಿಸ್ತರಿಸಿದೆ.
ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಅಧ್ಯಕ್ಷ ಖಾನ್ ಅವರು ಮೂರು ಪ್ರಕರಣಗಳಲ್ಲಿ ಮಧ್ಯಂತರ ಜಾಮೀನು ಕೋರಿ ಲಾಹೋರಿನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದ ಮೊರೆ ಹೋಗಿದ್ದರು. ಅದರಲ್ಲಿ ಒಂದು ಪ್ರಕರಣ ಲಾಹೋರ್ ಕಾರ್ಪ್ಸ್ ಕಮಾಂಡರ್ ಹೌಸ್ ಮೇಲೆ ನಡೆದ ದಾಳಿಗೆ ಸಂಬಂಧಿಸಿದೆ.
ಪಿಟಿಐ ಮುಖ್ಯಸ್ಥರ ಪರವಾಗಿ ವಕೀಲ ಸಲ್ಮಾನ್ ಸಫ್ದರ್ ಅವರು ಅರ್ಜಿ ಸಲ್ಲಿಸಿದ್ದರು. ಖಾನ್ ಅವರು ವಿಚಾರಣೆಗೆ ಹಾಜರಾಗಲು ಅನುಕೂಲವಾಗುವಂತೆ ಜಾಮೀನು ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿತ್ತು.
ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಖಾನ್, ಕಳೆದ ೩೫ ವರ್ಷಗಳಲ್ಲಿ ನಾನು ಈ ರೀತಿಯ ದೌರ್ಜನ್ಯವನ್ನು ಕಂಡಿಲ್ಲ, ನಾನು ಕೊನೆಯ ಎಸೆತತವರೆಗೂ ಹೋರಾಡುವ ನಾಯಕ ಎಂದರು.