
ಇಸ್ಲಮಾಬಾದ್,ಮೇ.೧೦- ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬಂಧಿಸಿದ ನಂತರ ಪಾಕಿಸ್ತಾನದಲ್ಲಿ ಭದ್ರತಾ ಪಡೆಗಳು ಮತ್ತು ಬೆಂಬಲಿಗರ ನಡುವೆ ಹಿಂಸಾತ್ಮಕ ಘರ್ಷಣೆ ನಡೆದಿವೆ. ರಾಷ್ಟ್ರವ್ಯಾಪಿ ಪ್ರತಿಭಟನೆಗಳು ಭುಗಿಲೆದ್ದಿದ್ದು, ಕ್ವೆಟ್ಟಾ ನಗರದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಭ್ರಷ್ಟಾಚಾರದ ಆರೋಪದ ಮೇಲೆ ರಾಜಧಾನಿ ಇಸ್ಲಾಮಾಬಾದ್‌ನಲ್ಲಿರುವ ಹೈಕೋರ್ಟ್‌ನಲ್ಲಿ ಭದ್ರತಾ ಪಡೆಗಳು ಇಮ್ರಾನ್ ಖಾನ್ ಅವರನ್ನು ಬಂಧಿಸಿದ ನಂತರ ದೇಶದಲ್ಲಿ ಹಿಂಸಾತ್ಮಕ ಘಟನೆಗಳಿಗೆ ಕಾರಣವಾಗಿದ್ದು ಎಲ್ಲೆಲ್ಲಿಯೂ ಜ್ವಾಲೆಯಾಗಿ ಪರಿವರ್ತನೆಯಾಗಿದೆ.ಪಾಕಿಸ್ತಾನದಲ್ಲಿ ಹಿಂಸಾಚಾರ,ಪ್ರತಿಭಟನೆಗಳು ಹೆಚ್ಚಾಗುತ್ತಿದ್ದಂತೆ ಆಂತರಿಕ ಸಚಿವಾಲಯದ ಸೂಚನೆಗಳ ಮೇರೆಗೆ ದೇಶದಲ್ಲಿ ಮೊಬೈಲ್ ಡೇಟಾ ಸೇವೆ ಸ್ಥಗಿತಗೊಳಿಸಲಾಗಿದೆ.
ಪಾಕಿಸ್ತಾನದ ಸೇನೆ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ, ಕೆಲವೊಮ್ಮೆ ಮಿಲಿಟರಿ ದಂಗೆಗಳಲ್ಲಿ ಅಧಿಕಾರ ವಶಪಡಿಸಿಕೊಂಡಿದೆ.೨೦೧೮ ರಲ್ಲಿ ಇಮ್ರಾನ್ ಖಾನ್ ಅವರ ಚುನಾವಣಾ ಗೆಲುವು ಮಿಲಿಟರಿಯ ಸಹಾಯದಿಂದ ಸಂಭವಿಸಿದೆ ಎಂದು ಅನೇಕ ವಿಶ್ಲೇಷಕರು ನಂಬಿದ್ದಾರೆ.
ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾದ ಲಾಹೋರ್‌ನ ದೃಶ್ಯಾವಳಿಗಳು ಮಿಲಿಟರಿ ಕಾಪ್ರ್ಸ್ ಕಮಾಂಡರ್‍ನ ಮನೆಗೆ ನುಗ್ಗುತ್ತಿರುವ ಜನಸಮೂಹ ಪೀಠೋಪಕರಣಗಳು ಮತ್ತು ಸಾಮಾನುಗಳನ್ನು ನಾಶಪಡಿಸುವುದನ್ನು ಕಂಡುಬಂದಿದೆ. ಅಮೇರಿಕಾದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಪ್ರತಿಕ್ರಿಯಿಸಿ “ಪಾಕಿಸ್ತಾನದಲ್ಲಿ ಏನಾಗುತ್ತಿದೆ. ಕಾನೂನಿನ ನಿಯಮಕ್ಕೆ, ಸಂವಿಧಾನಕ್ಕೆ ಅನುಗುಣವಾಗಿರುತ್ತದೆ” ಎಂದು ಖಚಿತಪಡಿಸಿಕೊಳ್ಳಲು ಬಯಸುತ್ತೇನೆ ಎಂದು ಹೇಳಿದ್ಧಾರೆ. ಇಂಗ್ಲೆಂಡ್ ವಿದೇಶಾಂಗ ಕಾರ್ಯದರ್ಶಿ ಜೇಮ್ಸ್ ಕ್ಲೆವರ್ಲಿ, ಪ್ರತಿಕ್ರಿಯೆ ನೀಡಿಬ್ರಿಟನ್ ಕಾಮನ್‌ವೆಲ್ತ್ ಸದಸ್ಯ ಪಾಕಿಸ್ತಾನದೊಂದಿಗೆ “ದೀರ್ಘಕಾಲದ ಮತ್ತು ನಿಕಟ ಸಂಬಂಧ ಹೊಂದಿದೆ. “ಕಾನೂನಿನ ನಿಯಮವನ್ನು ಅನುಸರಿಸಲು” ಬಯಸಿದೆ ಎಂದು ಹೇಳಿದೆ,
ಬಿಡುಗಡೆ ತನಕ ಪ್ರತಿಭಟನೆ
ಮಾಜಿ ಪ್ರಧಾನಿ ಹಾಗು , ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ ಅಧ್ಯಕ್ಷ ಇಮ್ರಾನ್ ಖಾನ್ ಅವರನ್ನು ಬಿಡುಗಡೆಯಾಗುವವರೆಗೂ ದೇಶಾದ್ಯಂತ ನಡೆಯುತ್ತಿರುವ ಧರಣಿ ಮತ್ತು ಪ್ರತಿಭಟನೆಗಳನ್ನು ನಡೆಸಲು ಪಿಟಿಐ ಕಾರ್ಯಕರ್ತರು ದೇಶವ್ಯಾಪಿ ಕರೆ ನೀಡಿದ್ದಾರೆ. ಇಮ್ರಾನ್ ಖಾನ್ ಬಂಧನವನ್ನು ಇಸ್ಲಾಮಾಬಾದ್ ಹೈಕೋರ್ಟ್ ಎತ್ತಿ ಹಿಡಿದಿರುವುದನ್ನು ಪ್ರಶ್ನಿಸಿ ಪಿಟಿಐ ಇಂದು ಬೆಳಿಗ್ಗೆ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಲಿದೆ ಎಂದು ಪಕ್ಷದ ಹಿರಿಯ ಉಪಾಧ್ಯಕ್ಷ ಫವಾದ್ ಚೌಧರಿ ಹೇಳಿದ್ದಾರೆ.