
ಇಸ್ಲಮಾಬಾದ್,ಮೇ.11- ಮಾಜಿ ಪ್ರಧಾನಿ ಹಾಗು ಪಾಕಿಸ್ತಾನ ತೆಹರಿಕ್ ಇನ್ಸಫ್ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಬಂಧನ ಕಾನೂನು ಬಾಹೀರ, ತಕ್ಷಣ ಜೈಲಿನಿಂದ ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದೆ.ಪಾಕಿಸ್ತಾನದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಉಮರ್ ಅತಾ ಬಂಡಿಯಾಲ್, ನ್ಯಾಯಮೂರ್ತಿ ಮುಹಮ್ಮದ್ ಅಲಿ ಮಜರ್ ಮತ್ತು ನ್ಯಾಯಮೂರ್ತಿ ಅಥರ್ ಮಿನಲ್ಲಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ, ಇಸ್ಲಾಮಾಬಾದ್ ಹೈಕೋರ್ಟ್ ಆವರಣದಿಂದ ಇಮ್ರಾನ್ ಖಾನ್ ಅವರನ್ನು ಕಸ್ಟಡಿಗೆ ತೆಗೆದುಕೊಂಡ ರೀತಿಗೆ ಪಾಕಿಸ್ತಾನದ ಸರ್ಕಾರದ ಆಕ್ರೋಶ ವ್ಯಕ್ತಪಡಿಸಿದೆ.ಹೈಕೋರ್ಟ್ ನ್ಯಾಯಾಲಯದ ಆವರಣದಿಂದ ಖಾನ್ ಇಮ್ರಾನ್ ಖಾನ್ ಅವರನ್ನು ಬಂಧಿಸಿರುವುದು ದೇಶದ ನ್ಯಾಯಾಂಗ ವ್ಯವಸ್ಥೆಗೆ ನಾಚಿಕೆಗೇಡಿನ ಸಂಗತಿ ಮುಖ್ಯನ್ಯಾಯಮೂರ್ತಿ ಹೇಳಿದ್ದಾರೆ ಎಂದು ವರದಿಯಾಗಿದೆ.ಇಮ್ರಾನ್ ಖಾನ್ ಅವರ ಬಂಧನದ ಬಳಿಕ ಪಾಕಿಸ್ತಾನದಾದ್ಯಂತ ವ್ಯಾಪಕ ಹಿಂಸಾತ್ಮಕ ಪ್ರತಿಭಟನೆಗೆ ಕಾರಣವಾಗಿದೆ.ಆಡಳಿತಾರೂಡ ಷೆಹಬಾಜ್ ಷರೀಫಗ ನೇತೃತ್ವದ, ಸರ್ಕಾರ ಕಾನೂನು ಸುವ್ಯವಸ್ಥೆ ಪುನಃಸ್ಥಾಪಿಸಲು ಸಹಾಯ ಮಾಡಲು ಸೇನೆ ನಿಯೋಜಿಸುವಂತೆ ಸೂಚಿಸಿದೆ.

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬಂಧನ ದೇಶದ ಉನ್ನತ ನ್ಯಾಯಾಲಯ “ಕಾನೂನುಬಾಹಿರ” ಎಂದು ಘೋಷಿಸಿದೆ., ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಮುಖ್ಯಸ್ಥರನ್ನು ತಕ್ಷಣ ಬಿಡುಗಡೆ ಸೂಚಿಸಿದೆ.ಇಮ್ರಾನ್ ಖಾನ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಕೆಲವೇ ದಿನಗಳಲ್ಲಿ ನ್ಯಾಯಾಲಯದ ಆದೇಶ ಬಂದಿದೆ. ಪ ಬಿಗಿ ಭದ್ರತೆಯ ನಡುವೆ ಅವರನ್ನು 15 ವಾಹನಗಳ ಬೆಂಗಾವಲು ಪಡೆಯಲ್ಲಿ ಹೈಕೊರ್ಟ್ ಗೆ ಕರೆತಂದಾಗ ಬಂಧಿಸಲಾಗಿತ್ತು.ಇಸ್ಲಾಮಾಬಾದ್ ಹೈಕೋರ್ಟ್ ಆವರಣದಿಂದ “ಅಪಹರಿಸಲಾಗಿದೆ” ಮತ್ತು ಲಾಠಿಗಳಿಂದ ಥಳಿಸಲಾಗಿದೆ ಎಂದು ಇಮ್ರಾನ್ ಖಾನ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.