
ರಾವಲ್ಪಿಂಡಿ, ಮೇ.೧೭- ಅಲ್-ಖಾದಿರ್ ಟ್ರಸ್ಟ್ ಆರೋಪ ಪ್ರಕರಣದಲ್ಲಿ ಪಾಕಿಸ್ತಾನದ ತೆಹ್ರೀಕ್-ಇ-ಇನ್ಸಾಫ್ ಮುಖ್ಯಸ್ಥ ಹಾಗೂ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಭ್ರಷ್ಟಾಚಾರ ನಿಗ್ರಹ ದಳ ಸಮನ್ಸ್ ಜಾರಿ ಮಾಡಿದೆ.
ಜಾಮೀನು ಅವಧಿ ಇಂದು ಮುಕ್ತಾಯವಾಗಲಿರುವ ಹಿನ್ನೆಲೆಯಲ್ಲಿ ನಾಳೆ ಭ್ರಷ್ಟಾಚಾರ ನಿಗ್ರಹ ದಳದ ಕಚೇರಿ ಎದುರು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನಲ್ಲಿ ತಿಳಿಸಲಾಗಿದೆ.
ಲಾಹೋರ್ ಹೈಕೋರ್ಟ್ ವಿಭಾಗೀಯ ಪೀಠ ಈ ಪ್ರಕರಣದಲ್ಲಿ ಇಮ್ರಾನ್ ಖಾನ್ ಪತ್ನಿ ಹಾಗು ಮಾಜಿ ಪ್ರಥಮ ಮಹಿಳೆ ಬುಶ್ರಾ ಬೀಬಿಗೆ ಮೇ ೨೩ ರವರೆಗೆ ರಕ್ಷಣಾತ್ಮಕ ಜಾಮೀನು ನೀಡಿದೆ.
ಮೇ ೯ ರಂದು ಇದೇ ಪ್ರಕರಣದಲ್ಲಿ ಇಮ್ರಾನ್ ಖಾನ್ ಅವರನ್ನು ಬಂಧಿಸಲಾಯಿತು ಆದರೆ ನಂತರ ಅವರ ಬಂಧನವನ್ನು ಸುಪ್ರೀಂ ಕೋರ್ಟ್ ಕಾನೂನುಬಾಹಿರವೆಂದು ಘೋಷಿಸಿತು ನಂತರ ಇಸ್ಲಾಮಾಬಾದ್ ಹೈಕೋರ್ಟ್ ಇಂದಿನವರೆಗೆ ಈ ಪ್ರಕರಣದಲ್ಲಿ ಜಾಮೀನು ನೀಡಿದೆ.
ಇಂಗ್ಲೆಂಡ್‌ನ ರಾಷ್ಟ್ರೀಯ ಅಪರಾಧ ಸಂಸ್ಥೆ ೨೦೧೯ ರ ತನಿಖೆಯ ವಿವರಗಳನ್ನು ಇಮ್ರಾನ್ ಖಾನ್‌ನಿಂದ ೧೯೦ ಮಿಲಿಯನ್ ಪೌಂಡ್ ಮೌಲ್ಯದ ಆಸ್ತಿಯ ವಿವರ ಕೇಳಿದೆ ಎನ್ನಲಾಗಿದೆ.
ಭೂ ದಾಖಲೆಗಳು, ಟ್ರಸ್ಟ್ ಡೀಡ್‌ಗಳು ಮತ್ತು ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು ಸೇರಿದಂತೆ ಅಲ್-ಖಾದಿರ್ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ನಾಳೆ ವಿಚಾರಣೆ ಸಮಯದಲ್ಲಿ ಹಾಜರುಪಡಿಸುವಂತೆ ಸೂಚಿಸಲಾಗಿದೆ.
ನಿಧಿಯ ವಾಪಸಾತಿಯ ಕುರಿತು ಚರ್ಚಿಸುವುದು ಸಮನ್ಸ್ ಉದ್ದೇಶವಾಗಿದ್ದು ಪಾಕಿಸ್ತಾನದ ಸುಪ್ರೀಂಕೋರ್ಟ್‌ನ ರಿಜಿಸ್ಟ್ರಾರ್‌ನ ಮೇಲ್ವಿಚಾರಣೆಯ ಖಾತೆಗೆ ವರ್ಗಾಯಿಸಿದೆ. ಈ ನಿರ್ದಿಷ್ಟ ಖಾತೆ ಮೂಲಕ ೪೬೦ ಶತಕೋಟಿ ರೂ.ಗಳ ಮರುಪಡೆಯುವಿಕೆಗೆ ಸಂಬಂಧಿಸಿದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.
ಈ ನಿರ್ದಿಷ್ಟ ಖಾತೆ ಮೂಲಕ ಕರಾಚಿಯಲ್ಲಿ ವಸತಿ ಯೋಜನೆಗೆ ವಿಧಿಸಲಾದ ದಂಡಕ್ಕೆ ಸಂಬಂಧಿಸಿದಂತೆ ಅದೇ ಆಸ್ತಿ ಉದ್ಯಮಿಯಿಂದ ೪೬೦ ಶತಕೋಟಿ ರೂ.ಗಳ ಮರುಪಡೆಯುವಿಕೆಯೊಂದಿಗೆ ಸಂಬಂಧಿಸಿದೆ ಎಂದು ತಿಳಿಸಲಾಗಿದೆ.