ಇಬ್ರಾಹಿಂಪುರ ಕಾಲನಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕ ಯತ್ನಾಳ ಭೂಮಿಪೂಜೆ

ವಿಜಯಪುರ,ಮಾ. 7:2022-23 ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ನಗರದ ವಾರ್ಡ್ ನಂ.21 ರಲ್ಲಿ ಬರುವ ಇಬ್ರಾಹಿಂಪುರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ ನಗರ ಶಾಸಕ ಬಸನಗೌಡ ಪಾಟೀಲ (ಯತ್ನಾಳ) ಅವರು ಬುಧವಾರ ಸಂಜೆ ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಸಮುದಾಯ ಭವನಕ್ಕೆ ಐದು ಲಕ್ಷ ರೂ. ಅನುದಾನ ಮಂಜೂರು ಮಾಡಲಾಗಿದ್ದು, ನಿರ್ಮಿತಿ ಕೇಂದ್ರವು ಈ ಕಟ್ಟಡ ನಿರ್ಮಾಣ ಮಾಡಲಿದೆ. ಅಗತ್ಯಬಿದ್ದರೆ ತಾವು ಇದಕ್ಕೆ ಇನ್ನೂ ಹೆಚ್ಚಿನ ಅನುದಾನ ನೀಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಸೇವಾ ಸಮಿತಿ ಪರವಾಗಿ ಗ್ರಾಮದ ಹಿರಿಯ ಮುಖಂಡ ಗಿರಮಲ್ಲಪ್ಪ ನುಚ್ಚಿ ಅವರು ಶಾಸಕ ಯತ್ನಾಳ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು.
ಪ್ರಭು ಹಿರೇಮಠ ಸ್ವಾಮಿಗಳು ಪೂಜಾ ಕಾರ್ಯಕ್ರಮ ನಡೆಸಿಕೊಟ್ಟರು.
ಮಹಾನಗರ ಪಾಲಿಕೆ ಸದಸ್ಯರಾದ ಕುಮಾರ ಗಡಗಿ, ಪ್ರೇಮಾನಂದ ಬಿರಾದಾರ, ಗ್ರಾಮದ ಹಿರಿಯರಾದ ಮೇಲಪ್ಪ ಗಲಗಲಿ, ಸೂರ್ಯಕಾಂತ ಗಡಗಿ, ಶಿವಸಂಗಪ್ಹ ಹಳ್ಳಿ, ಮಲ್ಲಿಕಾರ್ಜುನ ದೇವಸ್ಥಾನ ಸಮಿತಿ ಅಧ್ಯಕ್ಷ ಗುರುಪಾದಪ್ಪ(ಸುನೀಲ) ನುಚ್ಚಿ, ರೇವಣಕುಮಾರ ಬಗಲಿ, ಶಂಕರ ಡಂಬಳ, ಸಂತೋಷ ಪಾಟೀಲ, ಮಲ್ಲಿಕಾರ್ಜುನ ನುಚ್ಚಿ, ರಮೇಶ ಜುಮನಾಳ, ವಿನೋದ ನುಚ್ಚಿ, ಗಿರೀಶ ಕವಟಗಿ, ಪ್ರಕಾಶ ಗಡಗಿ, ಶಾಂತವೀರ ಗಲಗಲಿ, ಶರಣು ಗಡಗಿ, ಶಿವು ವಾಲೀಕಾರ, ಅಶೋಕ ಭಜಂತ್ರಿ ಸೇರಿದಂತೆ ನೂರಾರು ಜನ ಗ್ರಾಮಸ್ಥರು ಉಪಸ್ಥಿತರಿದ್ದರು.