ಇಬ್ರಾಹಿಂಪುರಶಾಲಾ ಕೊಠಡಿಗಳಿಗೆ ಭೂಮಿ ಪೂಜೆ

ಬಳ್ಳಾರಿ, ನ.06: ಜಿಲ್ಲಾ ಖನಿಜ ನಿಧಿಯಡಿ ತಾಲೂಕಿನ ಇಬ್ರಾಹಿಂಪುರ ಗ್ರಾಮದಲ್ಲಿ 80 ಲಕ್ಷ ರೂ.ವೆಚ್ಚದಲ್ಲಿ ಎಂಟು ಶಾಲಾ ಕೊಠಡಿಗಳ ನಿರ್ಮಾಣಕ್ಕೆ ನಿನ್ನೆ ಭೂಮಿ ಪೂಜೆ ನೆರವೇರಿಸಲಾಯಿತು.
ಗ್ರಾಮೀಣ ಶಾಸಕರ ಸಹೋದರ ವೆಂಕಟೇಶ್ ಪ್ರಸಾದ್, ತಾಲೂಕು ಪಂಚಾಯತ್ ಅಧ್ಯಕ್ಷೆ ಲೀಲಾವತಿ ಗಾದಿಲಿಂಗಪ್ಪ, ಮುಖಂಡರಾದ ಗೋವರ್ಧನರೆಡ್ಡಿ, ಅಸುಂಡಿ ನಾಗರಾಜಗೌಡ, ಶಾಲಾ ಎಸ್‍ಡಿಎಂಸಿ ಅದ್ಯಕ್ಷ ಎಚ್.ತಿಪ್ಪೇಸ್ವಾಮಿ, ಉಪಾಧ್ಯಕ್ಷ ತಿಮ್ಮಪ್ಪ ಶಾಲೆಯ ಮುಖ್ಯೋಪಾಧ್ಯಾಯರಾದ ಸಿ.ಕೊಟ್ರಪ್ಪ, ಊರಿನ ಮುಖಂಡರು ಹಾಗೂ ಭೂದಾನಿಗಳಾದ ಬಿ.ಉಮೇಶ್, ಕೋಟೆ ನಾಗರಾಜ್, ಟಿ.ನಾಗರಾಜ್, ಕಿರಣ್, ಗ್ರಾಮದ ರಾಮಣ್ಣ ಹಾಗೂ ಶಾಲೆಯ ಸಹ ಶಿಕ್ಷಕರು ಮತ್ತು ಇತರರು ಇದ್ದರು.