(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.05: ತಾಲೂಕಿನ ಅಂದ್ರಾಳ್ ಬೈ ಪಾಸ್ ರಸ್ತೆಯಿಂದ ಇಬ್ರಾಹಿಂಪುರಕ್ಕೆ ತೆರಳುವ ರಸ್ತೆಯನ್ನು ಡಾಂಬರೀಕರಣ ಮಾಡಿದ್ದು ಅದರಲ್ಲಿ ಹಾಳಾಗಿರುವ ಇನ್ನೂ ಎರೆಡು ಕಿಲೋ ಮೀಟರ್ ರಸ್ತೆಯನ್ನು ಹಾಗೆ ಬಿಡಲಾಗಿದೆ. ಇದನ್ನು ಸಹ ಡಾಂಬರೀಕರಣ ಮಾಡುವಂತೆ ಜನತೆ ಒತ್ತಾಯಿಸಿದ್ದಾರೆ.
ಸಾಮನ್ಯವಾಗಿ ಲೋಕೋಪಯೋಗಿ ಇಲಾಖೆಯ ನಿಯಮಗಳ ಪ್ರಕಾರ ಆರು ವರ್ಷಗಳಿಗೆ ಒಮ್ಮೆ ರಸ್ತೆಗಳಿಗೆ ಡಾಂಬರೀಕರಣ ಮಾಡಬೇಕು. ಆದರೆ ಈ ರಸ್ತೆಗೆ ಕಳೆದ 15 ವರ್ಷಗಳಿಂದ ಮಾಡಿರಲಿಲ್ಲ. ಈಗ ಮಾಡಿದರೂ ಅದರಲ್ಲಿ 2 ಕಿಲೋ ಮೀಟರ್ ಬಿಟ್ಟಿದೆ. ಇದನ್ನು ಮಾಡುವುದರಲ್ಲಿ. ಈಗ ಮಾಡಿದ್ದು ಕೆಟ್ಟು ಹೋಗುತ್ತೆ. ಯಾವುದೇ ಒಂದು ರಸ್ತೆಯನ್ನು ಪೂರ್ಣ ಪ್ರಮಾಣದಲ್ಲಿ ಮಾಡಿದರೆ ವಾಹನಗಳ ಓಡಾಟ ಕ್ಕೆ ಅನಯಕೂಲ ಆಗುತ್ತೆ. ಅದಕ್ಕಾಗಿ ಉಳಿದಿದ್ದನ್ನೂ ಡಾಂಬರೀಕರಣ ಮಾಡಿ ಎಂದು ಸಾಮಾಜಿಕ ಕಾರ್ಯಕರ್ತ ಆರ್.ವೆಂಕಟರೆಡ್ಡಿ ಇಲಾಖೆಗೆ ದೂರಿನ ಮನವಿ ಮಾಡಿದ್ದಾರೆ.
One attachment • Scanned by Gmail