ಇಬ್ಬರ ಬಂಧನ: ವಿವಿಧೆಡೆ ಕಳವು ಮಾಡಿದ್ದ 8 ಬೈಕ್ ಜಪ್ತಿ

ಕಲಬುರಗಿ,ಜೂ.8-ನಗರದ ವಿವಿಧ ಕಡೆ ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಮಿಲ್ಲತ್ ನಗರದ ಶೇಖ್ ಖಾಜಾಪಾಶ ಅಲಿಯಾಸ್ ಸೋಹೆಲ್ (22) ಮತ್ತು ಬುಲಂದ್ ಪರ್ವೇಜ್ ಕಾಲೋನಿಯ ರೆಹಾನ್ ಪಟೇಲ್ (19) ಎಂಬುವವರನ್ನು ಬಂಧಿಸಿ 4.10 ಲಕ್ಷ ರೂ.ಮೌಲ್ಯದ ವಿವಿಧ ಕಂಪನಿಯ 8 ಬೈಕ್ ಜಪ್ತಿ ಮಾಡಿದ್ದಾರೆ.
ಸಿದ್ಧಾರ್ಥ ನಗರದ ಪ್ರಕಾಶ ಪೂಜಾರಿ ಎಂಬುವವರು ಆಳಂದ್ ಚೆಕ್ ಪೋಸ್ಟ್ ಹತ್ತಿರದ ಉಡುಪಿ ಹೋಟೆಲ್ ಎದರುಗಡೆ ನಿಲ್ಲಿಸಿದ ಬೈಕ್ ಕಳವಾದ ಬಗ್ಗೆ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಈ ದೂರಿನ ಅನ್ವಯ ಡಿಸಿಪಿಗಳಾದ ಅಡ್ಡೂರು ಶ್ರೀನಿವಾಸಲು, ಐ.ಎ.ಚಂದ್ರಪ್ಪ, ಸಬ್ ಅರ್ಬನ್ ಉಪ ವಿಭಾಗದ ಎಸಿಪಿ ಗೀತಾ ಬೇನಾಳ ಅವರ ಮಾರ್ಗದರ್ಶನದಲ್ಲಿ ಪಿಐ ಬಸವರಾಜು ಅವರ ನೇತೃತ್ವದಲ್ಲಿ ಪಿಎಸ್‍ಐ ಸುರೇಶ ಬಿಜ್ಜರಗಿ ಅವರ ನೇತೃತ್ವದಲ್ಲಿ ಎಎಸ್‍ಐ ಹುಸೇನ ಭಾಷಾ, ಅಶೋಕ, ಸಿರಾಜ್ ಪಟೇಲ್, ಮಲ್ಲಿಕಾರ್ಜುನ, ಅನೀಲ, ನಾಗೇಂದ್ರ, ಪ್ರಕಾಶ, ಅನೀಲ ರಾಠೋಡ್ ಅವರನ್ನೊಳಗೊಂಡ ಪ್ರತ್ಯೇಕ ತಂಡ ತನಿಖೆ ನಡೆಸಿ ಬೈಕ್ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.