ಇಬ್ಬರು ಸುಲಿಗೆಕೋರರ ಬಂಧನ

ಕಲಬುರಗಿ,ಏ.8: ನಗರದ ಚೌಕ್ ಪೊಲೀಸ್ ಠಾಣೆಯವ್ಯಾಪ್ತಿಯಲ್ಲಿ ಜನರಿಂದ ಸುಲಿಗೆ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಇಟ್ಟಂಗಿ ಭಟ್ಟಿ ಕಾರ್ಮಿಕ ಚನ್ನವೀರ ನಗರ ನಿವಾಸಿ ಪ್ರಶಾಂತ ಶಂಕರ ( 21) ಮತ್ತು ಕಟ್ಟಿಗೆಅಡ್ಡೆ ಕಾರ್ಮಿಕ ಶಿವಶಕ್ತಿ ನಗರ ನಿವಾಸಿ ಸುಭಾಷ್ ಹಣಮಂತರಾಯ ( 20) ಬಂಧಿತರು.
ಏ.4 ರಂದು ರಾತ್ರಿ ಚನ್ನವೀರ ನಗರ ನಿವಾಸಿ ಮೋಹನಲಾಲ್ ಗಣೇಶಕರ ಎಂಬುವವರನ್ನು ಅಡ್ಡಗಟ್ಟಿದ ಮೂವರು 8 ಸಾವಿರ ಮೌಲ್ಯದ ಮೊಬೈಲ್ ಹಾಗೂ 500 ರೂ.ನಗದು ಹಣ ದೋಚಿ ಪರಾರಿಯಾಗಿದ್ದರು.
ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.ಬಂಧಿತರಿಂದ ಮೊಬೈಲ್ ಹಾಗೂ ನಗದು ಹಣ ವಶಪಡಿಸಿಕೊಳ್ಳಲಾಗಿದೆ.