ಇಬ್ಬರು ಸರಗಳ್ಳತನ ಆರೋಪಿಗಳ ಬಂಧನ

ವಿಜಯಪುರ: ಜೂ.14:ನಗರದಲ್ಲಿ ಇತ್ತೀಚಿಗೆ ಘಟಿಸುತ್ತಿದ್ದ ಸರಗಳ್ಳತನ ಪ್ರಕರಣಗಳ ತಪಾಸಣೆ ಕುರಿತು ಜಿಲ್ಲಾ ಪೆÇಲೀಸ್ ಅಧೀಕ್ಷಕ
ಎಚ್.ಡಿ.ಆನಂದಕುಮಾರ, ಜಿಲ್ಲಾ ಹೆಚ್ಚುವರಿ ಪೆÇಲೀಸ್ ಅಧೀಕ್ಷಕಎಸ್ ಕೆ ಮಾರಿಹಾಳ ಮತ್ತು ಪೆÇಲೀಸ್ ಉಪ-ಅಧೀಕ್ಷಕ ಸಿದ್ದೇಶ್ವರ ಬಿ ಕೃಷ್ಣಾಪೂರ ರವರ ಮಾರ್ಗದರ್ಶನದಲ್ಲಿ ಹಾಗೂ ವಿಜಯಮಹಾಂತೇಶ ಮಠಪತಿ ಸಿಪಿಐ ಗೋಳಗುಂಬಜ ವೃತ್ತ ರವರ ನೇತೃತ್ವದಲ್ಲಿ, ಮಲ್ಲಿಕಾರ್ಜುನ ತಳವಾರ ಪಿಎಸ್‍ಐ ಜಲನಗರ ಠಾಣಿ, ಶ್ರೀಮತಿ ಜೊತಿ ಕೋತ ಮ.ಪಿ.ಎಸ್.ಐ. ಜಲನಗರ ಠಾಣಿ, . ಯತೀಶ ಕೆ. ಎನ್ ಪಿಎಸ್‍ಐ ಆದರ್ಶನಗರ ಠಾಣೆ, ಶ್ರೀಮತಿ ಎಸ್.ಪಿ.ಗುರುಬೇಟ್ಟಿ, ಮ.ಪಿ.ಎಸ್.ಐ. ಆದರ್ಶನಗರ ಠಾಣೆ ಮತ್ತು ಸಿಬ್ಬಂದಿಗಳಾದ ಎಸ್.ಎಸ್.ಮಾಳೇಗಾಂವ್’ ಎಎಸ್‍ಐ, ಬಿ ಎಮ್ ಪವಾರ, ಎಎಸ್‍ಐ, ಪಿ. ಆರ್. ಹಿಪ್ಪರಗಿ ಎಎಸ್‍ಐ, ಸಿ ಎಚ್‍ಸಿ – ವೈ.ಪಿ.ಕಬಾಡೆ , ವಾಯ್ ಆರ್ ಮಂಕಣಿ, ಸಿಪಿಸಿ-ಪುಂಡಲೀಕ್ ಬಿರಾದಾರ, ಲಕ್ಷ್ಮಣ ಬಿರಾದಾರ, ಸಚೀನ ನಂದೇಶ, ಮಹೇಶ ಸಾಲಗೇರಿ, ಎಸ್ ಜಿ ಗಾಯನ್ನವರ, ಜೆ ಎಸ್ ವನಂಜಕರ, ಜಂಗ್ಲಿ ನಧಾಪ, ಆನಂದ ಕಂಬಾರ ಇವರನ್ನು ಒಳಗೊಂಡ ಒಂದು ತನಿಖಾ ತಂಡವನ್ನು ರಚನೆ ಮಾಡಲಾಗಿದ್ದು, ಇಬ್ಬರು ಸರಗಳ್ಳತನ ಆರೋಪಿತರನ್ನು ಬಂಧಿಸಿ ಅವರಿಂದ ಒಟ್ಟು 03 ಪ್ರಕರಣಗಳಿಗೆ ಸಂಬಂಧಪಟ್ಟ ಒಟ್ಟು 144 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ ಒಂದು ಪಲ್ಸರ್ ಮೋಟರ ಸೈಕಲ್ ಹೀಗೆ ಒಟ್ಟು 9,28,000 ರೂ. ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳಲಾಗಿದೆ.
ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಕಾರ್ಯನಿರ್ವಹಿಸಿದ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಗಳ ಕರ್ತವ್ಯವನ್ನು ಜಿಲ್ಲಾ ಜೋಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ.