ಇಬ್ಬರು ವಿದ್ಯಾರ್ಥಿನಿಯರಿಗೆ ತಲಾ 7 ಚಿನ್ನದ ಪದಕ

ಚಾಮರಾಜನಗರ.ಜೂ.4- ನಗರದ ಡಾ. ಬಿ.ಆರ್ ಅಂಬೇಡ್ಕರ್ ಸ್ನಾತಕೋತ್ತರ ಅಧ್ಯಯನ ಕೇಂದ್ರ ವಿದ್ಯಾರ್ಥಿನಿಯರಿಬ್ಬರು ತಲಾ ಏಳು ಚಿನ್ನದ ಪದಕ ಪಡೆದುಕೊಳ್ಳುವ ಮೂಲಕ ಟಾಪರ್ ಆಗಿದ್ದಾರೆ
ಮೈಸೂರು ವಿಶ್ವವಿದ್ಯಾನಿಲಯ ವ್ಯಾಪ್ತಿಗೆ ಒಳಪಡುವ ಡಾ ಬಿ.ಆರ್ ಅಂಬೇಡ್ಕರ್ ಸ್ನಾತಕೋತ್ತರ ಅದ್ಯಾಯನ ಕೇಂದ್ರದ ಕಾವ್ಯ ಮತ್ತು ಕವಿತಾ ವಿದ್ಯಾರ್ಥಿಗಳು ಗ್ರಂಥಾಲಯ ಮತ್ತು ಮಾಹಿತಿ ವಿಭಾಗದಲ್ಲಿ ಸಮಾನ ಅಂಕ ಪಡೆದು ಕೊಂಡು ತಲಾ ಏಳು ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಚಾಮರಾಜನಗರ ಡಾ.ಬಿ. ಆರ್ ಅಂಬೇಡ್ಕರ್ ಸ್ನಾತಕೋತ್ತರ ಅದ್ಯಾಯನ ಕೇಂದ್ರದಲ್ಲಿ ಶಿಕ್ಷಣ ಪಡೆಯುತ್ತಿರುವ ಕಾವ್ಯ ಮತ್ತು ಕವಿತರವರು ಡಾ.ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಅದ್ಯಾಯನ ಕೇಂದ್ರದ ನಿರ್ಧೇಶಕ ಫೆÇ್ರೀ. ಶಿವಬಸವಯ್ಯ, ಗ್ರಂಥಾಲಯ ಮತ್ತು ಮಾಹಿತಿ ವಿಭಾಗದ ಮುಖ್ಯಸ್ಥೆ ಶ್ವೇತಾ, ಡಾ. ಮಹದೇವಮೂರ್ತಿ, ಹೆಚ್.ಎನ್. ರವಿ, ಸವಿತಾ ಇ.ಹೆಚ್. ರವರ ಮಾರ್ಗದರ್ಶನದಲ್ಲಿ ಶಿಕ್ಷಣಾಭ್ಯಾಸ ಮಾಡಿದ್ದು, ಚಿನ್ನದ ಪದಕ ಗಳಿಸಲು ಕಾರಣವಾಯಿತು ಎಂದು ಕಾವ್ಯ ಮತ್ತು ಕವಿತಾ ಸಂತಸ ವ್ಯಕ್ತಪಡಿಸಿದ್ದಾರೆ.