ಇಬ್ಬರು ಯುವಕರು ಮೃತ ಪಟ್ಟ ಸ್ಥಳಕ್ಕೆ ಕಾರ್ಖಾನೆಗೆ ಶಾಸಕ ಪಾಟೀಲ್ ಭೇಟಿ

ಸಂಜೆವಾಣಿ ವಾರ್ತೆ
ಹುಮನಾಬಾದ್: ಜ.24:ರಾಯನಿಕ ಅನಿಲ ಸೋರಿಕೆಯಿಂದ ಇಬ್ಬರು ಕಾರ್ಮಿಕರು ಮೃತಪಟ್ಟ ಹಿನ್ನೆಲೆ ಪಟ್ಟಣದ ಕೈಗಾರಿಕಾ ಪ್ರದೇಶದ ಪ್ರಸನ್ನ ಪೆÇ್ರೀ ಪೆÇೀಸಶಿಂಗ್ ಕಾರ್ಖಾನೆಗೆ ಮಂಗಳ ವಾರ ಶಾಸಕ ಡಾ. ಸಿದ್ದು ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರವಾನಿಗೆ ರಹಿತವಾಗಿ ಪಟ್ಟಣದಲ್ಲಿ ಬಹುತೇಕ ರಾಸಾಯನಿಕ ಕಾರ್ಖಾನೆಗಳು ಚಾಲ್ತಿಯಲ್ಲಿವೆ. ನ್ಯೂ ಕಾನೂನು ಬಾಹಿರವಾಗಿ ನಡೆಯುತ್ತಿರುವ ಕಾರ್ಖಾನೆಗಳ ಸಂಪೂರ್ಣ ಮಾಹಿತಿ ಪಡೆದ ಅಂತಹ ಕಾರ್ಖಾನೆಗಳ ವಿರುದ್ಧ ಕಾನೂನು ಚೌಕಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು.
ಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿ ಪ್ರಸನ್ ಪ್ರೇ ಪೆÇ್ರೀಸೆಸಿಂಗ್ ಕಂಪನಿಯಲ್ಲಿ ಅವಘಡ ಸಂಭವಿಸಿ ಇಬ್ಬರು ಯುವಕರು ಮೃತಪಟ್ಟ ಹಿನ್ನೆಲೆಯಲ್ಲಿಮಂಗಳವಾರಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಕಾರ್ಖಾನೆಯಲ್ಲಿ ದುರ್ವಾಸನೆ ಹೆಚ್ಚಿದೆ. ಮೂಗು ಮುಚ್ಚಿಕೊಂಡು ಸುತ್ತಾಡುವ ಅನಿವಾರ್ಯತೆ ಇಲ್ಲಿದೆ. ಕೆಲ ಇಲಾಖೆಗಳಿಂದ ಪರವಾನಗಿ ಪಡೆಯದೆ ಕಾರ್ಖಾನೆ ನಡೆಸುತ್ತಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪರಿಸರ ಮಾಲಿನ್ಯ ನಿಯಂತ್ರ ಅಧಿಕಾರಿ ವಿರುದ್ಧವೂ ಕೂಡ ಪ್ರಕರಣ ದಾಖಲಾಗಿದೆ.
ಕೈಗಾರಿಕಾ ಪ್ರದೇಶದಲ್ಲಿ ದುರ್ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿರುವ ಕಾರಣಕ್ಕೆ ಸಂಬಂಧಿ ಸಿದ ಇಲಾಖೆಗಳು ಎಲ್ಲಾ ಘಟಕಗಳ ಪರಿಶೀಲನೆ ನಡೆಸಬೇಕು. ಯಾವು ಕಾನೂನು ನಿಯಮಗಳು ಪಾಲನೆ ಮಾಡುತ್ತಿವೆ. ಯಾವ ಕಾರ್ಖಾನೆಗಳು ನಿಯಮ ಮೀರಿ, ಪರವಾನಗಿ ರಹಿತ ಕೆಲಸ ಮಾಡುತ್ತಿವೆ ಎಂಬುವುದು ಪತ್ತೆಮಾಡಿ ಅವುಗಳು ಬಂದ್ ಮಾಡಿಸುವ ನಿಟ್ಟಿನಲ್ಲಿ ಅಧಿಕಾರಿಗಳು ದಿಟ್ಟ ನಿರ್ಧಾರ ಕೈಗೊಳ್ಳಬೇಕು ಎಂದು ತಿಳಿಸಿದ್ದೇನೆ.
ಈ ಸಂದರ್ಭದಲ್ಲಿ ಪಿಎಸ್‍ಐ ತಿಮ್ಮಯ್ಯ ಬಿ.ಕೆ., ಸಿಬ್ಬಂದಿ ಆಕಾಶ್ ಸಿಂಧೆ, ಸಂತೋಷ್ ನಾವದಗಿ, ಪ್ರಭಾಕರ್ ನಾಗರಾಳೆ, ರಮೇಶ ಖೇರೋಜಿ, ರಾಜು ಭಂಡಾರಿ, ಸಂಜು ವಾಡೇಕರ್, ಶ್ರೀನಾಥ್ ದೇವಣಿ, ಸುನೀಲ ಪತ್ರಿ, ರವಿ ಹೊಸಳ್ಳಿ, ಸೇರಿದಂತೆ ಇನ್ನಿತರರು ಇದ್ದರು.