ಇಬ್ಬರು ಮೊಬೈಲ್ ಕಳ್ಳರ ಬಂಧನ: ಬೆಲೆಬಾಳುವ ಮೊಬೈಲ್ ವಶ..


ಸಂಜೆವಾಣಿ ವಾರ್ತೆ
ಹೊಸಪೇಟೆ, ಜು.17: ಇಬ್ಬರು ಮೊಬೈಲ್ ಕಳ್ಳರನ್ನು ಬಂಧಿಸಿರುವ ಇಲ್ಲಿನ ಪಟ್ಟಣ ಠಾಣೆ ಪೊಲೀಸರು. 1,68,000 ರೂ ಮೌಲ್ಯದ ವಿವಿಧ ಕಂಪನಿಯ 13 ಮೊಬೈಲ್‍ಗಳನ್ನು ವಶ ಪಡಿಸಿಕೊಂಡಿದ್ದಾರೆ.
ನಗರದ ಬಾಣದಕೇರಿ ನಿವಾಸಿ ಯಶವಂತ (20) ಹಾಗೂ ನಗರದ ಗುರುಭವನದ ಹಿಂಭಾಗದ ನಿವಾಸಿ ಮಂಜುನಾಥ ಅಲಿಯಾಸ್ ಕೊಳಕ ಮಂಜ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ ಬೆಲೆಬಾಳುವ 13 ಮೊಬೈಲ್ ಪೋನ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಬಸ್‍ನಲ್ಲಿ ಹತ್ತುವ ಸಂದರ್ಭದಲ್ಲಿ ಅವರ ಜೇಬಿನಲ್ಲಿದ್ದ ಮೊಬೈಲ್‍ಗಳನ್ನು ಇಬ್ಬರು ಆರೋಪಿಗಳು ಕಳ್ಳತನ ಮಾಡಿ ಪರಾರಿಯಾಗುತ್ತಿದ್ದರು. 
ಡಿವೈಎಸ್‍ಪಿ ವಿಶ್ವನಾಥ ಕುಲಕರ್ಣಿ ಅವರ ಮಾರ್ಗದರ್ಶನ ಹಾಗೂ ಪಿಐ ಶ್ರೀನಿವಾಸ್ ರಾವ್ ಅವರ ನೇತೃತ್ವದಲ್ಲಿ ಈ ಕೋದಂಡಪಾಣಿ, ಎ.ಎಸ್.ಐ ಸಿಬ್ಬಂದಿಯವರಾದ ನಾಗರಾಜ್, ಬಿ.ರಾಘವೇಂದ್ರ, ಶ್ರೀರಾಮರೆಡ್ಡಿ, ಸಂಜೀವಪ್ಪ, ಪರಶುನಾಯ್ಕ, ಲಿಂಗರಾಜ್, ಪಕ್ಕೀರಪ್ಪ ಗುರುಬಸವರಾಜ್, ದೇವೇಂದ್ರ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಸೆರೆ ಹಿಡಿವಲ್ಲಿ ಯಶ್ವಸಿಯಾಗಿದ್ದಾರೆ.

Attachments area