ಇಬ್ಬರು ಮಹಿಳೆಯರು ಸೇರಿ ಹನಿಟ್ರ್ಯಾಫ್ ಗ್ಯಾಂಗ್ ಸೆರೆ

ಬೆಂಗಳೂರು, ಮಾ.9- ಅಮಾಯಕರನ್ನು ಹನಿಟ್ರ್ಯಾಫ್ ಬಲೆಗೆ ಬೀಳಿಸಿ ಬೆದರಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ಇಬ್ಬರು ಮಹಿಳೆಯರು ಸೇರಿ 6 ಮಂದಿಯ ಹನಿಟ್ರ್ಯಾಫ್ ಗ್ಯಾಂಗ್ ನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ.
ಕಳೆದ ಮಾ.8 ರಂದು ಶ್ರೀನಿವಾಸ ರೆಡ್ಡಿ ಬೇಗೂರು ಪೊಲೀಸ್ ಠಾಣೆಗೆ ದೂರು ನೀಡಿ ಕಳೆದ ಡಿ.3ರಂದು ಸಂಜೆ 4.30 ಗಂಟೆಯಿಂದ 7.30 ಗಂಟೆ ನಡುವೆ ದೇವರಚಿಕ್ಕನಹಳ್ಳಿಯ ಸೋಮೇಶ್ವರ ಲೇಔಟ್, ವೇಮನ ಚಾರಿಟಲ್ ಟ್ರಸ್ಟ್ ರೋಡ್ ಹತ್ತಿರ ಆರೋಪಿಗಳು ವೆಬ್ ಸೈಟ್ ಮೂಲಕ ಸಂಪರ್ಕ ಮಾಡಿ, ಅದರಲ್ಲಿ ಹುಡುಗಿಯರ ಚಿತ್ರಗಳನ್ನು ಪೋಸ್ಟ್ ಮಾಡಿ, ಆಸೆ ಹುಟ್ಟಿಸಿರುತ್ತಾರೆ ಎಂದಿದ್ದಾರೆ.
ವೆಬ್ ಸೈಟ್ ನಲ್ಲಿ ನೀಡಿದಂತ ವಿಳಾಸಕ್ಕೆ ತೆರಳಿದಾಗ ಆರೋಪಿ ಹುಡುಗಿಯರೊಂದಿಗೆ ದೈಹಿಕ ಸಂಬಂಧ ಬೆಳೆಸಲು ಕರೆಸಿಕೊಂಡು, ತಮ್ಮನ್ನು ಅರೆನಗ್ನ ಮಾಡಿ, ವೀಡಿಯೋ, ಪೋಟೋ ತೆಗೆದುಕೊಂಡಿರುತ್ತಾರೆ. ಈ ಬಳಿಕ ತಮ್ಮಿಂದ 10 ಲಕ್ಷ ರೂ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ ಎಂದು ತಿಳಿಸಿದ್ದಾರೆ.
ತಾನು ಮಾನ ಮರ್ಯಾದೆಗೆ ಅಂಜಿ 3 ಲಕ್ಷಕ್ಕೆ ಒಪ್ಪಿಕೊಂಡು 3 ಲಕ್ಷ ನೀಡಿದ ಮೇಲೆ ತಮ್ಮನ್ನು ಕಳುಹಿಸಿಕೊಟ್ಟಿರುತ್ತಾರೆ. ಈ ಬಳಿಕ ಮತ್ತೆ ವೀಡಿಯೋ ಕಳುಹಿಸಿ ಬ್ಲಾಕ್ ಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಅವರನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿರುತ್ತಾರೆ ಎಂದಿದೆ.
ಈ ದೂರು ದಾಖಲಾದಂತ 24 ಗಂಟೆಯಲ್ಲಿ ಆಗ್ನೇಯ ವಿಭಾಗದ ಉಪ ಪೊಲೀಸ್ ಕಮೀಷನರ್ ಡಾ.ಸಿಕೆ ಬಾಬಾ ಅವರ ಮಾರ್ಗದರ್ಶನದಲ್ಲಿ, ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ರವಿಶಂಕರ್ ಸಿ ಆರ್ ನೇತೃತ್ವದಲ್ಲಿ ಬೇಗೂರು ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಅನಿಲ್ ಕುಮಾರ್ ಹೆಚ್ ಡಿ, ಪಿಎಸ್‌ಐ ಸವಿನಯ ಬಿಜೆ, ಹಾಗೂ ಎಎಸ್‌ಐ ಚಿದಾನಂದ, ಪಿಸಿ ನಾಗರಾಜಪ್ಪ, ಅರುಣ್, ಇಸ್ಮಾಯಿಲ್ ನದಾಫ್ ಒಳಗೊಂಡು ತಂಡವನ್ನು ರಚಿಸಲಾಗಿತ್ತು.
ಈ ತಂಡದಿಂದ ದೂರು ನೀಡಿದ 24 ಗಂಟೆಯಲ್ಲೇ ಇಬ್ಬರು ಮಹಿಳೆಯರು ಸೇರಿದಂತೆ 6 ಜನ ಕುಖ್ಯಾತ ಹನಿಟ್ರ್ಯಾಫ್ ಗ್ಯಾಂಗ್ ಬಂಧಿಸಲಾಗಿದೆ.