ಇಬ್ಬರು ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಂದೆ

ಕಲಬುರಗಿ;ಜೂ.18: ಚಿಂಚೋಳಿ ತಾಲೂಕಿನ ಕುಂಚಾವರಂ ಗ್ರಾಮದ ತಂದೆಯೊಬ್ಬ ತನ್ನ ಇಬ್ಬರು ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು ಬಾವಿಗೆ ಹಾರಿದ ತಂದೆ ಸೇರಿ ಇಬ್ಬರು ಮಕ್ಕಳು ಮೃತಪಟ್ಟ ಘಟನೆ ನಡೆದಿದೆ.
ಚಿಂಚೋಳಿ ತಾಲೂಕಿನ ಕುಂಚಾವರಂ ಗ್ರಾಮದ ಹಣಮಂತ ಸಂಜಪ್ಪ ವಡ್ಡರ್ (40), ಮಗ ಓಂಕಾರ (9) ಹಾಗೂ ಮಗಳು ಅಕ್ಷರಾ (6) ಮೃತ ದುರ್ದೈವಿಗಳು.
ಮೃತಪಟ್ಟ ಹಣಮಂತ ಕುಂಚಾವರಂ ಅವರು ಕೆಲ ವರ್ಷದ ಹಿಂದೆ ತೆಲಂಗಾಣದ ತಾಂಡೂರಿನಲ್ಲಿ ಮನೆ ಕಟ್ಟಿಕೊಂಡು ಅಲ್ಲಿಯೇ ನೆಲೆಸಿದ್ದರು. ಈಚೆಗೆ ಹೈದರಾಬಾದ ಗೆ ತೆರಳಿದ್ದ ಹಣಮಂತ ಮಕ್ಕಳೊಂದಿಗೆ ಕುಂಚಾವರಂಗೆ ಬಂದಿದ್ದಾರೆ. ಶುಕ್ರವಾರ ತನ್ನ ಸಹೋದರ ಗ್ರಾಮ ಪಂಚಾಯತ ಸದಸ್ಯರಾದ ಗೋಪಾಲ ಎಂಬುವವರಿಗೆ ಕರೆ ಮಾಡಿ ನಾನು ಮಕ್ಕಳೊಂದಿಗೆ ಬಾವಿದ್ದು ಬಿದ್ದು ಸಾಯುತ್ತಿದ್ದೇನೆ ನನ್ನ ಶವ ತೆಗೆದು ಅಂತ್ಯಕ್ರಿಯೆ ನಡೆಸುವಂತೆ ಕೋರಿಕೊಂಡಿದ್ದಾನೆ ಎಂದಾಗ ಗೋಪಾಲ, ಅವರು ಕುಂಚಾವರಂ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಕರ್ನಾಟಕ ಮತ್ತು ತೆಲಂಗಾಣ ಪೊಲೀಸರು, ಅಗ್ನಿಶಾಮಕ ಠಾಣೆಯವರು ಹುಡುಕಿದರೂ ಪತ್ತೆಯಾಗಿಲ್ಲ ಆದರೆ ಇಂದು ಭಾನುವಾರ ಕುಂಚಾವರಂ ಬಳಿಯ ಪೋಚಾವರಂ ಗ್ರಾಮದ ತೋಟದ ಬಾವಿಯಲ್ಲಿ ಮೂವರ ಶವ ಪತ್ತೆಯಾಗಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ.
ಈ ಕುರಿತು ಕುಂಚಾವರಂ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಶವ ಹೊರ ತೆಗೆದಿದ್ದಾರೆ. ಸ್ಥಳಕ್ಕೆ ಚಿಂಚೋಳಿ ಡಿಎಸ್ಪಿಗಳಾದ ಕೆ ಬಸವರಾಜ, ಚಿಂಚೋಳಿ ಸಿಪಿಐ ಅಂಬಾರಾಯ ಕಮಾಲಮನಿ, ಕುಂಚಾವರಂ ಪಿಎಸ್ಐ ಉದಂಡಪ್ಪ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.