
ಚಂಡೀಗಢ ,ಜು.೩೧- ಉಕ್ಕಿ ಹರಿಯುತ್ತಿರುವ ಸಟ್ಲೆಜ್ ನದಿ ನೀರಿನಲ್ಲಿ ಪಂಜಾಬ್‌ನ ಇಬ್ಬರು ಕೊಚ್ಚಿಕೊಂಡು ಹೋಗಿ ಪಾಕಿಸ್ತಾನಕ್ಕೆ ತಲುಪಿದ್ದಾರೆ. ಈ ಇಬ್ಬರನ್ನು ಪಾಕಿಸ್ತಾನದ ಸೈನಿಕರು ಬಂಧಿಸಿದ್ದಾರೆ ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.
ಲೂಧಿಯಾನದ ಸಿಧ್ವಾನ್ ಬೆಟ್ ಗ್ರಾಮದ ರತನ್‌ಪಾಲ್ ಸಿಂಗ್ ಮತ್ತು ಹವೀಂದರ್ ಸಿಂಗ್ ಎಂಬುವವರೇ ಕೊಚ್ಚಿ ಹೋದವರು ಎಂದು ತಿಳಿದು ಬಂದಿದೆ.
ರತನ್‌ಪಾಲ್ ಸಿಂಗ್ ಹಾಗೂ ಹವೀಂದರ್ ಸಿಂಗ್ ಅವರನ್ನು ಪಾಕಿಸ್ತಾನಿ ಸೈನಿಕರು ಬಂಧಿಸಿದ್ದಾರೆ. ಈ ಕುರಿತು ಗಡಿ ಭದ್ರತಾ ಪಡೆಗೂ ಮಾಹಿತಿ ನೀಡಲಾಗಿದೆ. ಇಬ್ಬರನ್ನೂ ಬಿಎಸ್‌ಎಫ್‌ಗೆ ಪಾಕಿಸ್ತಾನ ಹಸ್ತಾಂತರಿಸುವುದಕ್ಕೆ ಕಾಯಲಾಗುತ್ತಿದೆ.ಇಬ್ಬರು ತವರು ನೆಲಕ್ಕೆ ಮರಳಿದ ನಂತರವಷ್ಟೇ ಅವರು ಪಾಕಿಸ್ತಾನ ದಾಟಲು ನಿಖರವಾದ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.