ಇಬ್ಬರು ನಕಲಿ ಪತ್ರಕರ್ತರ ಬಂಧನ

ವಿಜಯಪುರ, ಮಾ 27: ಇಬ್ಬರು ನಕಲಿ ಪತ್ರಕರ್ತರನ್ನು ಪೆÇಲೀಸರು ಬಂಧಿಸಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದಿದೆ.
ವಿಶ್ವನಾಥ ಹಿರೇಮಠ ಹಾಗೂ ಶ್ರೀಶೈಲ ಹೊಸಮನಿ ಬಂಧಿತ ನಕಲಿ ಪತ್ರಕರ್ತರು.ಆರೋಪಿಗಳು ಲಾರಿಗೆ ಅಡ್ಡಗಟ್ಟಿ ಲಾರಿಯಲ್ಲಿ ಅಕ್ರಮವಾಗಿ ಖಡಿ, ಮಣ್ಣು ಸಾಗಾಟ ಮಾಡುವ ಆರೋಪ ಬಂದಿದೆ. ನಾವು ಕ್ರೈಂ ವರದಿಗಾರರು ಎಂದು ಲಾರಿ ಚಾಲಕನಿಗೆ ಬ್ಲಾಕ್‍ಮೇಲ್ ಮಾಡಿದ ಹಿನ್ನೆಲೆಯ ದೂರಿನ ಮೇರೆಗೆ ಬಂಧನ ಮಾಡಲಾಗಿದೆ. ಈ ಕುರಿತು ಇಂಡಿ ಶಹರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.