ಇಬ್ಬರು ಕೋವಿಡ್ ಸೋಂಕಿತರ ಸಾವು

ವಿಜಯಪುರ, ಏ.24-ಜಿಲ್ಲೆಯಲ್ಲಿ ಇಬ್ಬರು ಕೋವಿಡ್ ಸೋಂಕಿತ ಪುರುಷರು ಮೃತ ಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಅವರು ತಿಳಿಸಿದ್ದಾರೆ.
ಕೋವಿಡ್ ಸೋಂಕಿತ 57 ವರ್ಷ ವಯೋಮಾನದ ಪುರುಷ ರೋಗಿ ಸಂಖ್ಯೆ 1143931 ಅವರು ಮೃತಪಟ್ಟಿದ್ದಾರೆ. ಅವರು ಸಾರಿ, ಕೆಮ್ಮು, ತೀವ್ರ ಶ್ವಾಸಕೋಶ ತೊಂದರೆ, ಸಕ್ಕರೆ ಖಾಯಿಲೆ ಯಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಅದರಂತೆ 66 ವರ್ಷದ ವೃದ್ಧ ರೋಗಿ ಸಂಖ್ಯೆ 1072422 ಮೃತ ಪಟ್ಟಿದ್ದು,ಇವರು ಸಾರಿ, ತೀವ್ರ ಶ್ವಾಸಕೋಶ ತೊಂದರೆ, ರಕ್ತದೊತ್ತಡ, ಸಕ್ಕರೆ ಖಾಯಿಲೆಯಿಂದ ಬಳಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇವರು ಮೃತಪಟ್ಟಿದ್ದಾರೆ.
ಇವರಿಬ್ಬರ ಅಂತ್ಯ ಸಂಸ್ಕಾರವನ್ನು ಶಿಷ್ಟಾಚಾರದಂತೆ ನೆರವೇರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.