ಇಬ್ಬರು ಕುಖ್ಯಾತ ರೌಡಿಗಳಿಗೆ ಗುಂಡಿಕ್ಕಿ ಸೆರೆ

ಬೆಂಗಳೂರು,ನ.೧೮- ಅಪರಾಧ ಕೃತ್ಯಗಳನ್ನು ನಡೆಸುತ್ತ ಭಯಭೀತಿ ಉಂಟುಮಾಡುತ್ತಿದ್ದ ಇಬ್ಬರು ಕುಖ್ಯಾತ ರೌಡಿಗಳಿಗೆ ನಗರ ಪೊಲೀಸರು ಗುಂಡು ಹೊಡೆದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೋಣನಕುಂಟೆಯ ನಾರಾಯಣ ನಗರದಲ್ಲಿರೌಡಿ ಮಂಜ ಅಲಿಯಾಸ್ ಬೊಂಡಮಂಜ ನಿಗೆ ಸಿಸಿಬಿ ಪೊಲೀಸರು ಗುಂಡು ಹೊಡೆದರೆ, ಬ್ಯಾಡರಹಳ್ಳಿಯ ಬ್ರಹ್ಮದೇವ ಬಳಿ ಮತ್ತೊಬ್ಬ ರೌಡಿ ವಿಶ್ವ ಅಲಿಯಾಸ್ ಸೈಕೋ ನಿಗೆ ಬ್ಯಾಡರಹಳ್ಳಿ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ.
ಕಾಲುಗಳಿಗೆ ಗುಂಡೇಟು ತಗುಲಿರುವ ಇಬ್ಬರು ರೌಡಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
೨೩ಕ್ಕೂ ಹೆಚ್ಚು ಕೇಸ್
ತಲಘಟ್ಟಪುರ ಠಾಣೆ ರೌಡಿ ಮಂಜ ಅಲಿಯಾಸ್ ಬೊಂಡ ಮಂಜನ ವಿರುದ್ಧ ೨೩ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಕಳೆದ ಒಂದು ತಿಂಗಳಿನಿಂದ ಆತನ ಪತ್ತೆಗಾಗಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದರು.
ಕೋಣನಕುಂಟೆಯಲ್ಲಿ ರೌಡಿಶೀಟರ್???ನ ಚಲನವಲನದ ಬಗ್ಗೆ ಇಂದು ಮುಂಜಾನೆ ಖಚಿತ ಮಾಹಿತಿ ಪಡೆದ ಇನ್ಸ್??ಪೆಕ್ಟರ್ ಪುನೀತ್ ಮತ್ತು ತಂಡ ಬಂಧಿಸಲು
ತೆರಳಿತ್ತು.
ಪೇದೆಗೆ ಇರಿತ :
ಪೊಲೀಸರನ್ನು ಕಂಡ ರೌಡಿ ಮಂಜ ಬೈಕ್?ನಲ್ಲಿ ನಾರಾಯಣನಗರ ಬಳಿ ಪರಾರಿಯಾಗುತ್ತಿದ್ದಂತೆ ಪೊಲೀಸರು ಅಡ್ಡಗಟ್ಟಿದ್ದಾರೆ. ಈ ವೇಳೆ ಏಕಾಏಕಿ ಸಿಸಿಬಿ ಹೆಡ್? ಕಾನ್ಸ್?ಟೇಬಲ್? ನಾಗರಾಜ್ ಕೈಗೆ ಡ್ರ್ಯಾಗರ್?ನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ.
ಪುನೀತ್ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಕೆ ನೀಡಿದರೂ ಪ್ರತಿರೋಧವೊಡ್ಡಿ, ಅವರ ಮೇಲೂ ಹಲ್ಲೆಗೆ ಮುಂದಾಗಿದ್ದ. ಹಾಗಾಗಿ ಇನ್ಸ್??ಪೆಕ್ಟರ್?? ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ಗಾಯಾಳು ಹೆಚ್ ಸಿ ನಾಗರಾಜ್ ಮತ್ತು ರೌಡಿಶೀಟರ್ ಮಂಜ ಸ್ಥಳೀಯ ಆಸ್ಪತ್ರೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದು ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೈಕೋಗೆ ಗುಂಡು:
ಕಾಮಾಕ್ಷಿ ಪಾಳ್ಯ ಕೊಲೆ ಪ್ರಕರಣದ ಆರೋಪಿ ಜಯನಗರದ ೭ನೇ ಬ್ಲಾಕ್ ನ ವಿಶ್ವ ಅಲಿಯಾಸ್? ಸೈಕೋ ಕೆಲ ದಿನಗಳ ಹಿಂದೆ ಕಾಮಾಕ್ಷಿಪಾಳ್ಯದಲ್ಲಿ ಬನಶಂಕರಿಯ ಮಂಜುನಾಥ್?ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಕಾಮಾಕ್ಷಿಪಾಳ್ಯ ಪೊಲೀಸರು ನಿನ್ನೆ ರಾತ್ರಿ ಬ್ಯಾಡರಹಳ್ಳಿಯ ಬ್ರಹ್ಮದೇವರ ಗುಡ್ಡದ ಬಳಿ ಆರೋಪಿ ಇರುವ ಖಚಿತ ಮಾಹಿತಿ ಆಧರಿಸಿ ಬಂಧಿಸಲು ತೆರಳಿದ್ದರು.
ಬಂಧನದ ವೇಳೆ ಹೆಡ್ ?ಕಾನ್ಸ್?ಟೇಬಲ್ ಮಂಜುನಾಥ್ ಮೇಲೆ ಡ್ರ್ಯಾಗರ್?ನಿಂದ ಆರೋಪಿ ಸೈಕೋ ಹಲ್ಲೆ ಮಾಡಿದ್ದಾನೆ. ತಕ್ಷಣವೇ ಪೊಲೀಸರು ಆತ್ಮರಕ್ಷಣೆಗಾಗಿ ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಹೆಡ್? ಕಾನ್ಸ್?ಟೇಬಲ್ ಮತ್ತು ಆರೋಪಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
೧೧ಕ್ಕೂ ಹೆಚ್ಚು ಕೇಸ್
ಎಸಿಪಿ ವಿಜಯನಗರ ನಂಜುಂಡೇಗೌಡ ಮತ್ತು ಕಾಮಾಕ್ಷಿಪಾಳ್ಯ ಇನ್ಸ್‌ಪೆಕ್ಟರ್ ಪ್ರಶಾಂತ್ ಅವರು ಆತ್ಮರಕ್ಷಣೆಗಾಗಿ ಆರೋಪಿ ಮೇಲೆ ಗುಂಡು ಮಾಡಿದ್ದಾರೆ. ಆರೋಪಿ ವಿಶ್ವ ಅಲಿಯಾಸ್? ಸೈಕೋ ಮೇಲೆ ೧೧ಕ್ಕೂ ಹೆಚ್ಚು ಪ್ರಕರಣಗಳಿವೆ.
ಕಾಮಕ್ಷಿಪಾಳ್ಯದಲ್ಲಿ ನ. ೮ರಂದು ಮಂಜುನಾಥ್ ಶವ ಸುಮನಹಳ್ಳಿ ಬ್ರಿಡ್ಜ್ ಬಳಿ ಪತ್ತೆಯಾಗಿತ್ತು. ದುಷ್ಕರ್ಮಿಗಳು ಕೊಲೆಮಾಡಿ ಶವ ಎಸೆದಿರುವ ಶಂಕೆ ವ್ಯಕ್ತಪಡಿಸಿ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು ಎಂದು ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.

ಬಾಕ್ಸ್
*ಇಬ್ಬರು ಕುಖ್ಯಾತ ರೌಡಿಗಳಿಗೆ ಗುಂಡಿಕ್ಕಿ ಸೆರೆ

  • ವಿಶ್ವ ಅಲಿಯಾಸ್ ಸೈಕೋ ಮಂಜ ಅಲಿಯಾಸ್ ಬೊಂಡನಿಗೆ ಗುಂಡೇಟು
    *ಸಿಸಿಬಿ ಪಶ್ಚಿಮ ವಿಭಾಗದ ಪೊಲೀಸರ ಕಾರ್ಯಾಚರಣೆ
    *ಬಂಧಿಸಲು ಬಂದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯತ್ನ
    *ಬೊಂಡನ ೨೩ಕೇಸ್ ಸೈಕೋ ವಿರುದ್ಧ ೧೧ಕೇಸ್