ಇಬ್ಬರು ಕುಖ್ಯಾತ ಬೈಕ್ ಕಳ್ಳರ ಬಂಧನ: 9 ಬೈಕ್ ಜಪ್ತಿ

ಕಲಬುರಗಿ,ಮಾ.27-ಇಬ್ಬರು ಕುಖ್ಯಾತ ಬೈಕ್ ಕಳ್ಳರನ್ನು ಬಂಧಿಸಿರುವ ರೋಜಾ ಪೊಲೀಸರು 9 ಬೈಕ್ ಜಪ್ತಿ ಮಾಡಿದ್ದಾರೆ.
ಅಂಬೇಡ್ಕರ್ ಆಶ್ರಯ ಕಾಲೋನಿಯ ಗುಂಡಪ್ಪ ತಂದೆ ಶಿವಶರಣಪ್ಪ ಮತ್ತು ಬುಲಂದ್ ಪರ್ವೇಜ್ ಕಾಲೋನಿಯ ಮದಾರ್ ಅಲಿ ತಂದೆ ಮಹ್ಮದ್ ಮಸ್ತಾನ್ ಸಾಬ್ ಎಂಬವವರನ್ನು ಬಂಧಿಸಿ 3.25 ಲಕ್ಷ ರೂ.ಮೌಲ್ಯದ 9 ಬೈಕ್‍ಗಳನ್ನು ಜಪ್ತಿ ಮಾಡಿ ಆರೋಪಿಗಳಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ನಗರದ ಲಾಲ್ ಬಹಾದ್ದೂರ ಶಾಸ್ತ್ರಿ ನಗರದ ಅನಿಲಗೌಡ ಪಾಟೀಲ ಎಂಬುವವರು ದರ್ಗಾ ರಸ್ತೆಯ ಮೇಹಕ್ ಬ್ಯೂಟಿ ಪಾರ್ಲರ್ ಎದರುಗಡೆ ನಿಲ್ಲಿಸಿದ್ದ 45 ಸಾವಿರ ರೂ.ಮೌಲ್ಯದ ಬೈಕ್ ಕಳವಾದ ಬಗ್ಗೆ ರೋಜಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಈ ದೂರಿನ ಅನ್ವಯ ಕಲಬುರಗಿ ಉತ್ತರ ಉಪ ವಿಭಾಗದ ಎಸಿಪಿ ಚಂದ್ರಶೇಖರ ಅವರ ಮಾರ್ಗದರ್ಶನದಲ್ಲಿ ರೋಜಾ ಪೊಲೀಸ್ ಠಾಣೆಯ ಪಿಐ ಅನೀಸ್ ಅಹ್ಮದ್ ಎ.ಮುಜಾವರ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ರಫೀಯೋದ್ದಿನ್, ಹಮೀದೊದ್ದಿನ್, ಕಾಶಿನಾಥ, ದೇವರಾಜ ಮತ್ತು ನಾಸೀರ್ ಅವರು ತನಿಖೆ ನಡೆಸಿ ಬೈಕ್ ಕಳ್ಳರನ್ನು ಬಂಧಿಸಿ, ನಗರದ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ 3.25 ಲಕ್ಷ ರೂ.ಮೌಲ್ಯದ 9 ಬೈಕ್‍ಗಳನ್ನು ಜಪ್ತಿ ಮಾಡಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.