ಇಬ್ಬರು ಕನ್ನಗಳ್ಳರ ಸೆರೆ 5 ಕೆಜಿ ಬೆಳ್ಳಿ ಗಟ್ಟಿ ವಶ

ಬೆಂಗಳೂರು,ಸೆ.೧೯- ಬೀಗ ಹಾಕಿದ ಮನೆಗಳಿಗೆ ನುಗ್ಗಿ ನಗದು, ಚಿನ್ನಾಭರಣ ಕಳವು ಮಾಡುತ್ತಿದ್ದ ಇಬ್ಬರು ಕನ್ನಗಳ್ಳರನ್ನು ಬಂಧಿಸಿರುವ ಚಂದ್ರಾಲೇಔಟ್ ಪೊಲೀಸರು ೩ ಲಕ್ಷ ಮೌಲ್ಯದ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.


ಚಂದ್ರಾಲೇಔಟ್‌ನ ಸಲೀಂ ರಫೀಕ್‌ಶೇಖ್ ಹಾಗೂ ಬಿಲಾಲ್ ಮಂಡಲ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ೩ ಲಕ್ಷ ಮೌಲ್ಯದ ೫ ಕೆಜಿ ಬೆಳ್ಳಿ ಗಟ್ಟಿಗಳು ಹಾಗೂ ಆಭರಣಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಸಂಜೀವ್‌ಪಾಟೀಲ್ ತಿಳಿಸಿದ್ದಾರೆ.
ಬಂಧಿತ ಆರೋಪಿಗಳು ಕಳೆದ ಮೇ ೧ ರಂದು ಚಂದ್ರಾಲೇಔಟ್‌ನ ಮನೆಯೊಂದರ ಕಿಟಕಿ ಗ್ರಿಲ್ ಕಟ್ ಮಾಡಿ ಒಳ ನುಗ್ಗಿ ಬೆಳ್ಳಿ ಗಟ್ಟಿಗಳು, ಆಭರಣಗಳು, ಮೊಬೈಲ್, ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಚಂದ್ರಾಲೇಔಟ್ ಪೊಲೀಸ್ ಇನ್ಸ್‌ಪೆಕ್ಟರ್ ಬ್ರಿಜೇಶ್‌ಮ್ಯಾಥ್ಯು ಮತ್ತವರ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಖಚಿತ ಮಾಹಿತಿಯಾಧರಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ ಯಾಗಿ ದ್ದಾರೆ.
ಬಂಧಿತ ಆರೋಪಿಗಳನ್ನು ಬಸವನಗುಡಿ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಮಾಹಿತಿ ಸಂಗ್ರಹಿಸಿ ವಿಚಾರಣೆ ನಡೆಸಲಾಗಿದೆ ಎಂದು ತಿಳಿಸಿದರು.
ಆರೋಪಿಗಳು ಐಷಾರಾಮಿ ಜೀವನ, ಮೋಜು ಮಸ್ತಿಗಾಗಿ ಮನೆಗಳವು ಮಾಡುತ್ತಿದ್ದರು ಎಂದು ಅವರು ತಿಳಿಸಿದರು.