ಇಫ್ತಾರ್ ಕೂಟದಲ್ಲಿ ಶಾಸಕ ಶಾಸಕ ಖಾಶೆಂಪುರ್ ಭಾಗಿ

ಬೀದರ:ಎ.16: ಜಿಲ್ಲೆಯ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮುಡಬಿ ಗ್ರಾಮದ ಜಾಮೀಯಾ ಮಸೀದಿಯಲ್ಲಿ ನಡೆದ ರೋಜಾ ಇಫ್ತಾರ್ ಕೂಟದಲ್ಲಿ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ಪಾಲ್ಗೊಂಡರು.

ಬಸವಕಲ್ಯಾಣ ಉಪ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಸೈಯದ್ ಯಸ್ರಬ್ ಅಲಿ ಖಾದ್ರಿರವರ ಪರ ಪ್ರಚಾರ ನಡೆಸುವ ಸಂದರ್ಭದಲ್ಲಿ ಮುಡಬಿ ಗ್ರಾಮಕ್ಕೆ ಭೇಟಿ ನೀಡಿದ ಅವರು, ಮಸೀದಿಗೆ ಭೇಟಿ ನೀಡಿ ರೋಜಾ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡು, ರೋಜಾದಲ್ಲಿದ್ದ ಮುಸ್ಲಿಂ ಸಮಾಜದವರಿಗೆ ಹಣ್ಣುಗಳನ್ನು ತಿನಿಸುವ ಮೂಲಕ ಶುಭ ಕೋರಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರು ಮುಸ್ಲಿಂ ಸಮಾಜದ ಮುಖಂಡರು ಸೇರಿದಂತೆ ಅನೇಕರಿದ್ದರು.