ಇಫ್ಕೋ ಕಂಪನಿ ವತಿಯಿಂದ ಬಡ ರೋಗಿಗಳಿಗೆ ನೆರವು

ಕೋಲಾರ, ನ.೨೦- ನವದೆಹಲಿ ಇಫ್ಕೋ ಕಂಪನಿ ವತಿಯಿಂದ ಬಡ ರೋಗಿಗಳಿಗೆ ೨,೦೦,೦೦೦ ಹಾಗೂ ಬಡ ವಿದ್ಯಾರ್ಥಿಗಳಿಗೆ ೬,೬೦,೬೪೪ ರೂಗಳು ಸೇರಿದಂತೆ ಒಟ್ಟು ೮,೬೦,೬೪೪ ರೂಗಳ ಚೆಕ್‌ಗಳನ್ನು ಶಾಸಕರಾದ ಕೆ.ಶ್ರೀನಿವಾಸಗೌಡರು ತಮ್ಮ ಗೃಹ ಕಚೇರಿಯಲ್ಲಿ ಇಂದು ವಿತರಿಸಿದರು.
ಕಾರ್ಯಕ್ರಮದಲ್ಲಿ ಅಣ್ಣಿಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ನಾಗರಾಜ್, ಮುಖಂಡರಾದ ಅಜೀಜ್‌ಬೇಗ್, ವಾಬಣ್ಣ, ಶ್ರೀನಿವಾಸ್, ದೊಡ್ನಹಳ್ಳಿ ವೆಂಕಟೇಶ್‌ಗೌಡ, ವೇಮಗಲ್ ವೆಂಕಟೇಶ್‌ಗೌಡ ಇನ್ನಿತರರು ಉಪಸ್ಥಿತರಿದ್ದರು.