ಇಪ್ಪತ್ತೆರಡು ಮನೆಗಳಿಗೆ ಮಳೆಹಾನಿ; ಮೋಹನ್

ವಿಜಯಪುರ,ಸೆ೧೨:ಕಳೆದ ಹತ್ತು ದಿನಗಳಿಂದ ಬೀಳುತ್ತಿರುವ ಮಳೆಯಿಂದ ಪಟ್ಟಣದಲ್ಲಿ ಸಮೀಕ್ಷೆ ನಡೆಸಿರುವ ಪ್ರಕಾರ ೨೨ ಮನೆಗಳಿಗೆ ಹಾನಿ ಆಗಿದ್ದು ಅದರಲ್ಲಿ ಹದಿನೆಂಟು ಮನೆಗಳು ಸಂಪೂರ್ಣ ಕುಸಿದಿದ್ದು ೩ ಮನೆಗಳು ಭಾಗಶಃ ಕುಸಿದಿವೆ ಎಂದು ಪುರಸಭಾ ಮುಖ್ಯಾಧಿಕಾರಿ ಮೋಹನ್ ಕುಮಾರ್ ತಿಳಿಸಿದರು.
ಅವರು ಇಲ್ಲಿನ ಚಿಕ್ಕಬಳ್ಳಾಪುರ ರಸ್ತೆಯ ಅಮಾನಿಕೆರೆಯಲ್ಲಿ ಕೆರೆ ಕೋಡಿ ಹೋದ ಪ್ರಯುಕ್ತ ಪುರಸಭಾ ಸದಸ್ಯರೊಂದಿಗೆ ಬಾಗುಣೆ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾvನಾಡುತ್ತಿದ್ದರು .
ಕಳೆದ ಹತ್ತು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಅಮಾನಿ ಕೆರೆಯಲ್ಲಿನ ಹತ್ತಾರು ಕೊಳವೆಬಾವಿಗಳು ಹಾಗೂ ಬದ್ದಿನ ಕೆರೆಯಲ್ಲಿನ ಸಾಕಷ್ಟು ಕೊಳವೆ ಬಾವಿಗಳು ನೀರಿನಲ್ಲಿ ಮುಳುಗಿದ್ದು, ಕುಡಿಯುವ ನೀರಿನ ತೊಂದರೆಯ ಬಗ್ಗೆ ಪರಿಶೀಲನೆ ನಡೆಸಲು ತಾಂತ್ರಿಕ ಶಾಖೆ ಗೆ ಸೂಚಿಸಲಾಗಿದೆ. ಈಗಾಗಲೇ ವಾರ್ಡ್ ಗಳಲ್ಲಿರುವ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಏರಿದ್ದು ಅದರಿಂದ ನೀರನ್ನು ತೆಗೆದು ಎಲ್ಲ ವಾರ್ಡುಗಳಿಗೂ ಬಿಡುವ ಕೆಲಸ ಮಾಡುತ್ತಿದ್ದು ಯಾವುದೇ ಸಮಸ್ಯೆ ಇದುವರೆಗೂ ಕಂಡುಬಂದಿಲ್ಲವೆಂದು ತಿಳಿಸಿದರು .
ಗಂಗಾತಾಯಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಅಮಾನಿ ಕೆರೆಗೆ ಬಾಗಿನ ನೀಡಿ ಮಾತನಾಡಿದ ಪುರಸಭಾ ಅಧ್ಯಕ್ಷೆ ರಾಜೇಶ್ವರಿ ಎಸ್ ಭಾಸ್ಕರ್ ರವರು ಮೂವತ್ತೆರಡು ವರ್ಷಗಳಿಂದ ತುಂಬದ ಕೆರೆಗೆ ಇದೀಗ ಕಳೆ ಬಂದಿದ್ದು ಸುತ್ತುಮುತ್ತಲ ಪ್ರದೇಶದಲ್ಲಿ ನೀರಾವರಿಗೆ ತುಂಬಾ ಅನುಕೂಲವಾಗಲಿದ್ದು ಪಟ್ಟಣದ ಕುಡಿಯುವ ನೀರಿನ ಸಮಸ್ಯೆಯೂ ನೀಗಲಿದೆ ಎಂದು ಆಶಿಸಿದರು .
ಪುರಸಭಾ ಉಪಾಧ್ಯಕ್ಷ ಕೇಶವಪ್ಪ ರವರು ಮಾತನಾಡಿ ಕಳೆದ ಬಾರಿ ೧೨೪ಮನೆಗಳು ಹಾನಿಗೀಡಾಗಿದ್ದು ಅದರಲ್ಲಿ ೮೫ಮನೆಗಳಿಗೆ ಪರಿಹಾರ ದೊರಕಿದ್ದು ಈ ಬಾರಿ ತೊಂದರೆಗೊಳಗಾದ ಮನೆಗಳವರೊಂದಿಗೆ ಹಿಂದಿನ ಬಾರಿ ತೊಂದರೆಗೊಳಗಾದವರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎನ್ ನಾರಾಯಣಸ್ವಾಮಿ ರವರು ಮಾತನಾಡಿ ಸಾಕಷ್ಟು ದೀರ್ಘಕಾಲದ ನಂತರ ಕೆರೆ ಕೋಡಿ ಹರಿಯುತ್ತಿರುವುದು ಪಟ್ಟಣದ ಜನತೆಯಲ್ಲಿ ಹರ್ಷದಾಯಕವಾಗಿದ್ದು ಪ್ರತಿ ವರ್ಷವೂ ಇದೇ ರೀತಿ ಕೆರೆ ತುಂಬಿ ಕೋಡಿ ಹರಿಯುವ ಅಂತಾಗಲೆಂದು ಆಶಿಸಿದರು .
ಈ ಸಂದರ್ಭದಲ್ಲಿ ಜೆಡಿಎಸ್ ಟೌನ್ ಅಧ್ಯಕ್ಷ ಎಸ್ ಭಾಸ್ಕರ್, ಪುರಸಭಾ ಸದಸ್ಯರುಗಳಾದ ಬೈರೇಗೌq, ವಿಮಲಾ ಬಸವರಾಜು, ಸಿ ಎಂ ರಾಮು, ತಾಜ್ ಉನ್ನೀಸಾ, ಮಹಮೂದ್ ಪಾಷಾ, ರಾಧಮ್ಮ ಪ್ರಕಾಶ್, ಕವಿತಾ, ಮುನಿಆಂಜನಪ್ಪ, ರವಿ, ಶಿಲ್ಪ ಅಜಿತ್, ಹಾಗೂ ಪುರಸಭಾ ಸಿಬ್ಬಂದಿ ವರ್ಗದವರುಗಳು ಮತ್ತು ಗಂಗಾತಾಯಿ ದೇವಾಲಯ ಜಾತ್ರಾ ಮಹೋತ್ಸವದ ಪದಾಧಿಕಾರಿಗಳು, ಪತಂಜಲಿ ಯೋಗ ಶಿಕ್ಷಣ ಸಮಿತಿಯ ಭಾರತಿ ಪ್ರಭುದೇವ್, ಉಪಸ್ಥಿತರಿದ್ದರು.
೪ದಿನಗಳ ಹಿಂದೆಯೇ ಅಮಾನೀಕೆರೆಗೆ ಪುರಸಭೆ ವತಿಯಿಂದ ಬಾಗಿನ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಶಾಸಕ ನಿಸರ್ಗ ನಾರಾಯಣಸ್ವಾಮಿ ರವರು ಭಾಗವಹಿಸಬೇಕಾಗಿದ್ದು ಸಚಿವ ಉಮೇಶ್ ಕತ್ತಿ ರವರ ನಿಧನದಿಂದ ಬಾಗುಣೆ ನೀಡುವ ಕಾರ್ಯಕ್ರಮವನ್ನು ಮುಂದೂಡಲಾಗಿದ್ದು, ಇಂದು ನೆರವೇರಿಸಲಾಯಿತು.