ಇಪ್ಟಾ ಕಲಾವಿದ ನಿಧನ; ಸಿಪಿಐ ಶ್ರದ್ಧಾಂಜಲಿ ಸಭೆ

ದಾವಣಗೆರೆ.ಸೆ.೧೭: ಕಳೆದ ರಾತ್ರಿ ಹೃದಯಾಘಾತದಿಂದ ನಿಧನರಾದ ಹರಿಹರ ನಗರದ ಹಿರಿಯ ಇಪ್ಟಾ ಕಲಾವಿದ ಎಸ್.ಬಿ.ವಸಂತಕುಮಾರ್ (56 ವರ್ಷ) ಇವರ ನಿಧನಕ್ಕೆ ದಾವಣಗೆರೆ ಜಿಲ್ಲಾ ಸಿಪಿಐ, ಜಿಲ್ಲೆಯ ಕಲಾವಿದರು ಸೇರಿ ಇತರರು ಸೇರಿ ಶ್ರದ್ದಾಂಜಲಿ ಸಭೆ ನಡೆಸಿದರು.ನಗರದ ಅಶೋಕ ರಸ್ತೆಯಲ್ಲಿ ಕಾಮ್ರೆಡ್ ಪಂಪಾಪತಿ ಭವನದಲ್ಲಿ ಸೇರಿದ ಸಿಪಿಐ, ಕಲಾವಿದರು ತುರ್ತು ಸಭೆ ನಡೆಸಿ ಮೃತರಿಗೆ ನುಡಿ ನಮನ ಸಲ್ಲಿಸಿದರು.ಈ ವೇಳೆ ಮಾತನಾಡಿದ ಸಹಕಾರ್ಯದರ್ಶಿ ಆವರಗೆರೆ ಹೆಚ್.ಜಿ.ಉಮೇಶ್, ಮೃತರಾದ ವಸಂತ್‌ಕುಮಾರ್ ಅವರು 1992-93ರಲ್ಲಿ ಇಪ್ಟಾ ಕಲಾತಂಡದಲ್ಲಿ ಇದ್ದು, ಸಾಕ್ಷಾರತಾ ಆಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಆ ವೇಳೆ ಶೋಷಣೆ ರಹಿತ ಸಮಾಜ ನಿರ್ಮಾಣಕ್ಕೆ ಬೀದಿನಾಟಕ ಮತ್ತು ಜಾಗೃತಿ ಗೀತೆಗಳನ್ನು, ಬಾಲ್ಯ ವಿವಾಹ ಪದ್ದತಿ ವಿರೋಧಿ ಸೇರಿದಂತೆ ಸಮಾಜಕ್ಕೆ ಪಿಡುಗಾಗಿದ್ದ ಹಲವಾರು ಪದ್ದತಿಗಳ ವಿರುದ್ದ ಜಾಗೃತಿ ಮೂಡಿಸುವ ವಿಚಾರದಲ್ಲಿ ಮುಂಚೂಣಿಯಲ್ಲಿ ಇದ್ದರು ಎಂದು ಸ್ಮರಿಸಿದರು.ಇಂತಹ ಕಲಾವಿದರು, ಹಾಡುಗಾರರು, ತಮಟೆ ವಾದ್ಯ ನುಡಿಸುವ ವಾದ್ಯಕರಾಗಿ, ರಂಗಭೂಮಿಯಲ್ಲಿ ಉನ್ನತ ಮಟ್ಟದ ಕಲಾವಂತಿಕೆ ಉಳ್ಳವರಾಗಿದ್ದರು. ಕ್ರೀಡಾ ಸ್ಪೂರ್ತಿ ಆಗುವ ನಿಟ್ಟಿನಲ್ಲಿ ವೀಕ್ಷಕ ವಿವರಣೆಯನ್ನು ಅತ್ಯುತ್ತಮವಾಗಿ ನೀಡುತ್ತಾ ಸಮಾಜದಲ್ಲಿ ನಡೆಯುವ ಅಸ್ಪೃಶ್ಯ ದೌರ್ಜನ್ಯ ತಡೆ ಹೋರಾಟ, ಮಹಿಳೆ, ಮಕ್ಕಳ ಮೇಲೆ ಆಗುವ ದೌರ್ಜನ್ಯಗಳ ವಿರೋಧಿ ಹೋರಾಟದಲ್ಲಿ ಹಾಗೂ ವಿಶ್ವ ಪರಿಸರ ದಿನಾಚರಣೆಗಳಲ್ಲಿ ನಿರಂತರವಾಗಿ ಸಾಮಾಜಿಕವಾಗಿ ಎಲ್ಲಾ ಸ್ತರದ ಹೋರಾಟಗಳಲ್ಲಿ, ಜಾಗೃತಿ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಕಲಾಪ್ರತಿಭಾವಂತರಾಗಿ ಹೊರಹೊಮ್ಮಿದ್ದರು. ಸದಾ ಚಟುವಟಿಕೆಯ ಮುಂಚೂಣಿಯಲ್ಲಿ ಇದ್ದು, ಇಂತಹ ವ್ಯಕ್ತಿ ಅಗಲಿದ್ದು, ತಮ್ಮ ಪತ್ನಿ, ಏಕ ಪತ್ರನನ್ನು ಅಗಲಿದ್ದು, ಕಲಾಕ್ಷೇತ್ರವನ್ನು ಬಡವಾಗಿವೆ ಎಂದು ಕಂಬಿನಿ ಮಿಡಿದರು.ಸಿಪಿಐ ಜಿಲ್ಲಾ ಖಜಾಂಚಿ ಆನಂದ ರಾಜ್ ಉಪಸ್ಥಿತರಿದ್ದರು. ಈ ವೇಳೆ ಜಿಗಳಿ ರಂಗನಾಥ್, ಹೆಚ್.ಕೆ.ಕೊಟ್ರಪ್ಪ. ಎಂ.ಶಿವಕುಮಾರ್, ನೇರ‍್ಲಿಗೆ ಬಿ.ಎಚ್.ಉಮೇಶ್, ಹೆಗ್ಗೆರೆ ರಂಗಪ್ಪ, ಐರಣಿ ಚಂದ್ರು, ಶ್ಯಾಗಲೆ ಶರಣಪ್ಪ. ಆವರಗೆರೆ ಬಾನಪ್ಪ. ಷಣ್ಮುಖಸ್ವಾಮಿ. ಮಲ್ಲಿಕಾರ್ಜುನ ಸ್ವಾಮಿ, ಈ.ಬಿ.ಆಶಾ, ಜಯಣ್ಣ, ರೇವಣ್ಣನಾಯ್ಕ, ಓಬಣ್ಣ, ಎ.ಹೆಚ್.ಸಿದ್ದಲಿಂಗಪ್ಪ, ಎ.ಡಿ. ಕೊಟ್ರಬಸಪ್ಪ ಇತರರು ಇದ್ದರು.