ಇಪಿಎಫ್ ಖಾತೆದಾರರಿಗೆ ಆಧಾರ ಲಿಂಕ್ ಕಡ್ಡಾಯ

ಕಲಬುರಗಿ,ಜೂ.9- ಇಪಿಎಫ್ ಹೋಸ ನಿಯಮಗಳ ಪ್ರಕಾರ ಇದೇ ಜೂನ 01, 2021 ರಿಂದ ಇಪಿಎಫ್ ಖಾತೆದಾರರು ತಮ್ಮ ಪಿ.ಎಪ್ ಖಾತೆಗೆ ಆಧಾರ ಜೊತೆಗೆ ಸಂಪರ್ಕ ಕಲ್ಪಿಸುವುದು ಕಡ್ಡಾಯವಾಗಿರುತ್ತದೆ ಎಂದು ಭವಿಷ್ಯ ನಿಧಿ ಪ್ರಾದೇಶಿಕ ಆಯುಕ್ತ ಡಿ.ಹನುಮಂತಪ್ಪ ತಿಳಿಸಿದ್ದಾರೆ.
ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ ಸಮಾಜಿಕ ಭದ್ರತಾ ಕಾಯಿದೆ 2020ರ 142 ನೇ ಸೆಕ್ಷನ್‍ನ ಅಡಿಯಲ್ಲಿ ಈ ಹೊಸ ನಿಯಮಗಳನ್ನು ಜಾರಿಗೊಳಿಸಿದೆ.
ಹೋಸ ನಿಯಮಗಳ ಪ್ರಕಾರ ಪಿ.ಎಪ್ ಖಾತೆಗಳಿಗೆ ಆಧಾರ ಲಿಂಕ್ ಮಾಡುವುದು ಕಡ್ಡಾಯ ತಪ್ಪಿದರೆ ಉದ್ಯೋಗದಾತರು ನೌಕರರ ಪ್ರತಿ ತಿಂಗಳ ಇ.ಪಿ.ಎಪ್ ವಂತಿಗೆಯನ್ನು ಕಟ್ಟುವುದು ಸ್ಥಗಿತವಾಗುತ್ತದೆ.
ಆದಕಾರಣ ಕಲಬುರಗಿ/ಬೀದರ/ವಿಜಯಪುರ ಮತ್ತು ಯಾದಗಿರಿ ಜಿಲ್ಲೆಯ ಸುರಪುರ ಹಾಗೂ ಶಹಾಪುರ ತಾಲುಕಿನ ನೊಂದಾಯಿತ ಇ.ಪಿ.ಎಪ್ ಉದ್ಯೋಗದಾತರು ತಮ್ಮ ಸಂಸ್ಥೆ/ಕಾರ್ಖಾನೆ/ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬ ಇಪಿಎಪ್ ಸದಸ್ಯರಲ್ಲಿ ಈ ಕುರಿತು ಅರಿವು ಮೂಡಿಸಬೇಕೆಂದು ಭವಿಷ್ಯ ನಿಧಿ ಪ್ರಾದೇಶಿಕ ಆಯುಕ್ತರು ಡಿ.ಹನುಮಂತಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.