ಇನ್ಸ್ ಪೆಕ್ಟರ್ ಆನಂದ್‍ರಿಂದ ಶ್ರೀ ಬಸವನಕಟ್ಟೆ ಮಾರಮ್ಮ ಆಟೋ ಚಾಲಕರ, ಮಾಲೀಕರ ಸಂಘ ಉದ್ಘಾಟನೆ

ಚಾಮರಾಜನಗರ, ನ.16:- ತಾಲ್ಲೂಕಿನ ಜ್ಯೋತಿಗೌಡನಪುರ ಗ್ರಾಮದಲ್ಲಿ ಶ್ರೀ ಬಸವನಕಟ್ಟೆ ಮಾರಮ್ಮ ಆಟೋ ಚಾಲಕರ ಮತ್ತು ಮಾಲೀಕರ ಸಂಘವನ್ನು ರಾಮಸಮುದ್ರ ಪೂರ್ವ ಪೆÇಲೀಸ್ ಠಾಣೆಯ ಪೆÇಲೀಸ್ ಇನ್ಸ್ ಪೆಕ್ಟರ್ ಆನಂದ್ ಅವರು ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಸಂಘದ ನೂತನ ನಾಮಫಲಕ ಸಹ ಅನಾವರಣಗೊಳಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಇನ್ಸ್ ಪೆಕ್ಟರ್ ಆನಂದ್ ಅವರು ಕಾನೂನನ್ನು ನಾವು ಗೌರವಿಸಿದರೆ ಕಾನೂನು ನಮ್ಮನ್ನು ರಕ್ಷಿಸುತ್ತದೆ. ಕನ್ನಡ ರಾಜ್ಯೋತ್ಸವ ಮಾಸಾಚರಣೆ ತಿಂಗಳಿನಲ್ಲಿ ಸದುದ್ದೇಶದಿಂದ ಉದ್ಘಾಟನೆಗೊಂಡ ಆಟೋ ಚಾಲಕರ ಸಂಘವು ಸಮಾಜಮುಖಿ ಕೆಲಸಗಳ ಮೂಲಕ ಹೆಸರು ಮಾಡಲಿ ಎಂದು ಶುಭ ಹಾರೈಸಿದರು.
ಆಟೋ ಚಾಲಕರ ಸಂಘಗಳು ಸಮಾಜದಲ್ಲಿ ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡುತ್ತಿದ್ದು ಬಡವರು, ಸಂಕಷ್ಟದಲ್ಲಿದ್ದವರಿಗೆ ಆಶಾಕಿರಣವಾಗಿ ಸಂಘ ರೂಪುಗೊಳ್ಳಲಿ ಎಂದು ಆಶಿಸಿದರು. ಆಟೋ ಚಾಲಕರು ರಸ್ತೆ ಸುರಕ್ಷತಾ ನಿಯಮಗಳನ್ನು ಚಾಚು ತಪ್ಪದೆ ಪಾಲಿಸಿ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಿ ಎಂದು ಸಲಹೆ ನೀಡಿದರು.
ಶ್ರೀ ಬಸವನಕಟ್ಟೆ ಮಾರಮ್ಮ ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ಅಧ್ಯಕ್ಷ ಕೆಂಪರಾಜು ಮಾತನಾಡಿ ಗ್ರಾಮದ ಮುಖಂಡರು, ಜನಪ್ರತಿನಿಧಿಗಳ ಸಹಕಾರದಿಂದ ಆಟೋ ಚಾಲಕರುಗಳು ಸೇರಿ ಇಂದು ಸಂಘವನ್ನು ಉದ್ಘಾಟಿಸಿದ್ದು ನೊಂದವರ,ಸಂಕಷ್ಟದಲ್ಲಿರುವವರ ಸೇವೆಯೇ ನಮ್ಮ ಗುರಿಯಾಗಿದ್ದು ಎಲ್ಲರ ಸಹಕಾರ ದಿಂದ ಮುಂದಿನ ದಿನಗಳಲ್ಲಿ ಹಲವು ಸಮಾಜಮುಖಿ ಕೆಲಸವನ್ನು ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಜ್ಯೋತಿಗೌಡನಪುರ ಗ್ರಾ.ಪಂ ಅಧ್ಯಕ್ಷೆ ರಾಜಮ್ಮ, ಮುಖಂಡರಾದ ನಲ್ಲೂರು ಡಿ.ನಾರಾಯಣಸ್ವಾಮಿ, ಮಹದೇವಸ್ವಾಮಿ, ಸಂಘದ ಉಪಾಧ್ಯಕ್ಷ ಯೋಗೇಶ್,ಕಾರ್ಯದರ್ಶಿ ಪ್ರಕಾಶ್, ಸೇರಿದಂತೆ ಗ್ರಾಮದ ಯಜಮಾನರು, ಮುಖಂಡರು ಗ್ರಾ.ಪಂ ಸದಸ್ಯರುಗಳು ಹಾಜರಿದ್ದರು.