ಬಂಗಾರಪೇಟೆ,ಜೂ.೬- ದಕ್ಷ ,ಪ್ರಾಮಾಣಿಕ, ಪೊಲೀಸ್ ಇನ್ಸ್ಪೆಕ್ಟರ್ ಟಿ.ಸಂಜೀವರಾಯಪ್ಪ ರವರು ಸ್ನೇಹಜೀವಿಯಾದ್ದು ಇವರ ಸೇವಾ ಅವಧಿಯಲ್ಲಿ ಅನೇಕ ದರೋಡೆ, ಕಳ್ಳತನ, ಕೊಳೆ ಪ್ರಕರಣಗಳನ್ನು ಅತಿ ಶೀಘ್ರದಲ್ಲಿ ಭೇದಿಸಿದ್ದಾರೆ, ಇವರ ಕಾರ್ಯವೈಖರಿಗೆ ಕರ್ನಾಟಕ ಸರ್ಕಾರ ೨೦೨೩ರಲ್ಲಿ ಗೌರವಯುತ ಮುಖ್ಯಮಂತ್ರಿಗಳ ಪದಕ ನೀಡಿ ಗೌರವಿಸಿತ್ತು, ಬಂಗಾರಪೇಟೆ ಪಟ್ಟಣದ ಪೊಲೀಸ್ ಇನ್ಸ್ಪೆಕ್ಟರ್ ಟಿ. ಸಂಜೀವರಾಯಪ್ಪ ರವರಿಗೆ ಶಾಸಕ ಎಸ್ ಎನ್ ನಾರಾಯಣಸ್ವಾಮಿ, ಪುರಸಭೆಯ ಮುಖ್ಯ ಅಧಿಕಾರಿ ಜಿ.ಎನ್. ಚಲಪತಿ ರವರು ಜನ್ಮದಿನದ ಶುಭಾಶಯಗಳು ಅಭಿನಂದಿಸಿದರು.