ಇನ್ಸಪೆಕ್ಟರ್ ನಾರಾಯಣ ಸ್ವಾಮಿ ವಿರುದ್ಧ ಎಫ್.ಐ.ಆರ್ ದಾಖಲು

ಮೈಸೂರು,ಜೂ.10:- ಮೈಸೂರು ವಿಶ್ವವಿದ್ಯಾಲಯದ ವತಿಯಿಂದ ಏ.15ಮತ್ತು 17ರಂದು ನಡೆದ ಬಿಎಸ್ಸಿ ರಸಾಯನ ವಿಜ್ಞಾನದ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ತಿಳಿದು ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡಿ ಠಾಣೆ ಇನ್ಸಪೆಕ್ಟರ್ ನಾರಾಯಣ ಸ್ವಾಮಿ ಸೇರಿದಂತೆ 6 ಮಂದಿ ವಿರುದ್ಧ ಮಂಡಿ ಠಾಣೆಯಲ್ಲಿ ಎಫ್.ಐ.ಆರ್.ದಾಖಲಾಗಿದೆ.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಂಟಿ ಕಾರ್ಯದರ್ಶಿ ಸೋಮಸುಂದರ್ ಎಂಬವರು ಈ ಕುರಿತು ದೂರು ನೀಡಿದ್ದಾರೆ. ಮೈಸೂರು ವಿವಿ ಮೈಸೂರು ಮಹಾರಾಜರ ದೂರದೃಷ್ಟಿಯಿಂದ ಸ್ಥಾಪಿಸಲ್ಪಟ್ಟು ಉತ್ತಮ ಶಿಕ್ಷಣಕ್ಕಾಗಿ ಇಡೀ ಭಾರತ ದೇಶದಲ್ಲಿಯೇ ಅತ್ಯುತ್ತಮ ವಿವಿ ಎಂದು ಹೆಸರುವಾಸಿಯಾಗಿದೆ. ಇಂತಹ ಪ್ರತಿಷ್ಠಿತ ವಿವಿಯಲ್ಲಿ 2021ರ ಏಪ್ರೀಲ್ 15ಮತ್ತು 17ರಂದು ಬಿಎಸ್ ಸಿ ಕೆಮೆಸ್ಟ್ರಿ ವಿಷಯದ ಪರೀಕ್ಷೆ ನಡೆದಿದೆ.
ಪರೀಕ್ಷೆಯ ನಂತರದ ದಿನಗಳಲ್ಲಿ ವಿವಿಯ ಕೆಲವು ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಸೇರಿಕೊಂಡು ಉತ್ತರ ಪತ್ರಿಕೆಗಳ ಬದಲಿಗೆ ಬೇರೆ ಉತ್ತರ ಪತ್ರಿಕೆಗಳನ್ನು ಲಾಡ್ಜ್ ಒಂದರಲ್ಲಿ ಸಿದ್ಧಪಡಿಸುತ್ತಿರುವ ಬಗ್ಗೆ ಮೈಸೂರು ನಗರದ ಮಂಡಿ ಪೆÇಲೀಸ್ ಠಾಣೆಯ ಪೆÇಲೀಸ್ ರಿಗೆ ಮಾಹಿತಿ ದೊರಕಿರುತ್ತದೆ. ಮಾಹಿತಿ ಆಧಾರದ ಮೇಲೆ ಮಂಡಿ ಪೆÇಲೀಸ್ ಠಾಣೆಯ ಇನ್ಸಪೆಕ್ಟರ್ ನಾರಾಯಣಸ್ವಾಮಿ ಹಾಗೂ ಸಿಬ್ಬಂದಿಗಳು ಏ.21ರಂದು ರಾತ್ರಿ ಮೈಸೂರು ನಗರದ ಬಿಎನ್ ರಸ್ತೆಯಲ್ಲಿರುವ ಬ್ಲ್ಯೂ ಡೈಮಂಡ್ ಲಾಡ್ಜ್ ಮೇಲೆ ದಾಳಿ ನಡೆಸಿ ವಿವಿ ಸಿಬ್ಬಂದಿ ಮಹಮ್ಮದ್ ನಿಸಾರ್, ಗುತ್ತಿಗೆ ನೌಕರ ರಾಕೇಶ್, ಲಾಡ್ಜ್ ಸಿಬ್ಬಂದಿಗಳು ವಿದ್ಯಾರ್ಥಿಗಳಾದ ಚಂದನ್, ಚೇತನ್ ಹಾಗೂ ಇತರ ವಿದ್ಯಾರ್ಥಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡು ಅಲ್ಲಿ ದೊರಕಿದ ನೂರಾರು ಉತ್ತರ ಪತ್ರಿಕೆಗಳು, ಕೃತ್ಯಕ್ಕೆ ಬಳಸಿದ ಇತರೆ ವಸ್ತುಗಳೊಂದಿಗೆ ಪೆÇಲೀಸ್ ಠಾಣೆಗೆ ಕರೆದೊಯ್ದ ಇನ್ಸಪೆಕ್ಟರ್ ನಾರಾಯಣಸ್ವಾಮಿ ಉತ್ತರಪತ್ರಿಕೆಗಳ ಹಗರಣದಲ್ಲಿ ತೊಡಗಿದ್ದ ಇವರುಗಳ ವಿರುದ್ಧ ಯಾವುದೇ ಕಾನೂನು ಕ್ರಮ ಅಂದರೆ ಕ್ರಿಮಿನಲ್ ಪ್ರಕರಣ ದಾಖಲಿಸದೆ ಇಂತಹ ಗಂಭೀರವಾದ ಘಟನೆಯನ್ನು ಮೈಸೂರು ವಿವಿ ಹಾಗೂ ಪೆÇಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೂ ತಾರದೇ ಇವರುಗಳೊಂದಿಗೆ ಶಾಮೀಲಾಗಿ ಹಣಪಡೆದು ಕೇವಲ ಹೇಳಿಕೆಗಳನ್ನು ದಾಖಲಿಸಿಕೊಂಡು ಅವರುಗಳನ್ನು ಬಿಟ್ಟು ಕಳುಹಿಸಿಕೊಟ್ಟಿರುವುದಾಗಿ ನಮ್ಮ ಪಕ್ಷದ ವಿದ್ಯಾರ್ಥಿ ಘಟಕದಿಂದ ತಿಳಿದು ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಲಾಡ್ಜ್ ನಲ್ಲಿ ಬರೆದ ಕೆಲವು ಅಸಲಿ ಉತ್ತರ ಪತ್ರಿಕೆ ಹಾಗೂ ಪೆÇಲೀಸರು ದಾಖಲಿಸಿಕೊಂಡಿದ್ದ ಹೇಳಿಕೆಗಳ ಪ್ರತಿ ಮತ್ತು ಇತರೆ ಸಾಕ್ಷ್ಯಗಳು ದೊರಕಿದ್ದು ಇವುಗಳನ್ನು ಪರಿಶೀಲಿಸಿ ಕೃತ್ಯ ನಡೆಸಿರುವುದು ಕಂಡು ಬಂದಿದೆ.
ವಿವಿ ಪರೀಕ್ಷೆ ಮುಗಿದ ನಂತರ ಉತ್ತರ ಪತ್ರಿಕೆಗಳನ್ನು ಸಂರಕ್ಷಿಸುವ ಹೊಣೆಗಾರಿಕೆ ವಿವಿಯದ್ದಾಗಿರುತ್ತದೆ. ಆದರೆ ವಿವಿಯ ಸಿಬ್ಬಂದಿಗಳು ವಿದ್ಯಾರ್ಥಿಗಳಿಂದ ಹಣ ಪಡೆದು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆದ ಅಸಲಿ ಉತ್ತರ ಪತ್ರಿಕೆಗಳ ಬದಲಿಗೆ ವಿದ್ಯಾರ್ಥಿಗಳು ಲಾಡ್ಜ್ ನಲ್ಲಿ ಬರೆದು ನೀಡಿದ ಉತ್ತರ ಪತ್ರಿಕೆಗಳನ್ನು ಅಸಲಿ ಉತ್ತರ ಪತ್ರಿಕೆಗಳ ಜಾಗದಲ್ಲಿರಿಸಲು ಅಕ್ರಮವೆಸಗಿರುವುದು ಕಂಡು ಬಂದಿದೆ. ಈ ರೀತಿಯ ಕೃತ್ಯ ಹಿಂದಿನಿಂದಲೂ ವಿವಿಯ ಉನ್ನತಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಶಾಮೀಲಾಗಿರುವ ಸಾಧ್ಯತೆ ಇದ್ದು ಈ ಬಾರಿ ನೂರಾರು ವಿದ್ಯಾರ್ಥಿಗಳು ಈ ರೀತಿಯಾಗಿ ಅಕ್ರಮದಲ್ಲಿ ಪಾಲ್ಗೊಂಡಿರುವ ಮಾಹಿತಿ ಇದೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ವಿವಿ ಸಿಬ್ಬಂದಿ ಮೊಹಮ್ಮದ್ ನಿಸಾರ್, ಗುತ್ತಿಗೆ ನೌಕರ ರಾಕೇಶ್, ವಿದ್ಯಾರ್ಥಿಗಳಾದ ಚಂದನ್, ಚೇತನ್ ಹಾಗೂ ಬ್ಲ್ಯೂ ಡೈಮಂಡ್ ಲಾಡ್ಜ್ ಮಾಲೀಕ ಮತ್ತು ಇತರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.
ಇದೀಗ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಮಂಡಿ ಪೆÇಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಸೆಕ್ಷನ್ 420 406, 408, 470 471 472 473 474 ಸೇರಿ ಹಲವು ಸೆಕ್ಷನ್ ಅಡಿ ಪ್ರಕರಣ ದಾಖಲು ಮಾಡಲಾಗಿದೆ.