
ಕಾಂಗ್ರೆಸ್ ಸರಕಾರದ ಈ ಬಜೆಟ್ ರೈತರಿಗೆ, ಬಡವರಿಗೆ, ಶೋಷಿತರಿಗೆ ಉಪಯೋಗವಿಲ್ಲದ ಬಜೆಟ್ ಆಗಿದೆ. ಗ್ಯಾರೆಂಟಿ ಯೋಜನೆಗಳನ್ನು ಜಾರಿ ಮಾಡಲು ಶ್ರೀ ಸಾಮಾನ್ಯನ ಮೇಲೆ ಹೆಚ್ಚಿಗೆ ತೆರಿಗೆ ಹಾಕಲು ಸರಕಾರ ಮುಂದಾಗಿದೆ. ಇನ್ಮುಂದೆ ಮುಟ್ಟಿದ್ದೇಕ್ಕೆಲ್ಲಾ ತೆರಿಗೆ ಕಟ್ಟಬೇಕಾಗಿದೆ. ಗಣಿ-ಭೂ ವಿಜ್ಞಾನ ಇಲಾಖೆಗೆ 9000 ಕೋಟಿ ತೆರಿಗೆ ಸಂಗ್ರಹಿಸಲು ಟಾರ್ಗೆಟ್ ನೀಡಲಾಗಿದೆ. ಇನ್ನು ನೋಂದಣಿ ಇಲಾಖೆಗೆ 25 ಸಾವಿರ ಕೋಟಿ ತೆರಿಗೆ ಸಂಗ್ರಹ ಗುರಿ ನೀಡಲಾಗಿದೆ. ಆಸ್ತಿ ತೆರಿಗೆ ಹೆಚ್ಚಳ ಮಾಡಲಾಗಿದೆ. ಅಲ್ಲದೇ ಅಬಕಾರಿ ಇಲಾಖೆಗೆ 36 ಸಾವಿರ ಕೋಟಿ ತೆರಿಗೆ ಸಂಗ್ರಹ ಗುರಿ ನೀಡಲಾಗಿದ್ದು, ನಗರ ಪ್ರದೇಶ, ಹಳ್ಳಿಗಳಲ್ಲಿ ಮದ್ಯದ ಅಂಗಡಿ ಹೆಚ್ಚಾಗಲಿದ್ದು, ಜನರು ಅಡ್ಡ ದಾರಿ ಹಿಡಿಯುವ ಸಂಭವ ಹೆಚ್ಚಿದೆ. ಎನ್‌ಪಿ ರದ್ದುಗೊಳಿಸಿ ಮಕ್ಕಳನ್ನು ಭಾರತೀಯ ಶಿಕ್ಷಣ ಪದ್ದತಿಯಿಂದ ದೂರ ಮಾಡಿ, ವಿದ್ಯಾರ್ಥಿವೇತನಕ್ಕಾಗಿ ನೀಡುತ್ತಿದ್ದ ವಿದ್ಯಾಸಿರಿಯನ್ನೂ ಕಿತ್ತು ಹಾಕಲಾಗಿದೆ. ಇದರಿಂದ ರೈತರ ಮಕ್ಕಳು ಓದಿಗೆ ಸರಕಾರ ಖನ್ನ ಹಾಕಿದೆ. ಇದರಿಂದ ರೈತರ ಮಕ್ಕಳು ಶಿಕ್ಷಣ ಪಡೆಯದಂತಾಗಿದೆ. ಅಬಕಾರಿ ಸುಂಕ ಶೇ.20ರಷ್ಟು ತೆರಿಗೆ ಹೆಚ್ಚಳ ಮಾಡಿರುವ ಕಾರಣ, ಕಾರು, ಬೈಕ್ ಸೇರಿದಂತೆ ಇತರೆ ಮೋಟಾರ್ ವಾಹನಗಳು ಇನ್ನಷ್ಟು ದುಬಾರಿಯಾಗಲಿದೆ. ಇನ್ನು ಹೈನುಗಾರಿಕೆ ಮಾಡುವ ರೈತರಿಗೆ ಸರಕಾರ ಬಿಗ್ ಶಾಕ್ ನೀಡಿದೆ. ಹೈನುಗಾರಿಕೆ ಸರಕಾರ ಬರೆ ಎಳೆದಿದ್ದು, ಗ್ರಾಹಕರಿಗೆ ನಂದಿನಿ ಹಾಲಿನ ದರ ಏರಿಸಲು ಮುಂದಾಗಿದೆ. ಇನ್ನೊಂದೆಡೆ ರೈತರಿಗೆ ನೀಡುವ ಪ್ರೋತ್ಸಾಹ ಧನ ಕಡಿತಗೊಳಿಸಲು ಮುಂದಾಗಿದೆ. ಜಿಲ್ಲೆಗೊಂದು ಗೋಶಾಲೆ ಯೋಜನೆ ಕೈ ಬಿಟ್ಟಿರುವುದು ರೈತ ವಿರೋಧಿ ಧೋರಣೆಯಾಗಿದೆ.
—
-ಶ್ರೀನಿವಾಸ್ ದಾಸಕರಿಯಪ್ಪ, ಬಿಜೆಪಿ ಮುಖಂಡ