ಇನ್ಫೋಸಿಸ್ ಷೇರು ಕುಸಿತ ಸುನಕ್ ಪತ್ನಿಗೆ ೬೧ದಶಲಕ್ಷ ನಷ್ಟ

ಲಂಡನ್ ಏ.೧೮- ಇನ್ಫೋಸಿಸ್ ಷೇರು ಕುಸಿತದ ನಂತರ ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ ಅವರು ೬೧ ದಶಲಕ್ಷ ಡಾಲರ್ ಮೊತ್ತವನ್ನು ಕಳೆದುಕೊಂಡಿದ್ದಾರೆ. ಇನ್ಫೋಸಿಸ್ ಷೇರುಗಳು ಶೇ.೯,೪ ರಷ್ಟು ಷೇರು ಕುಸಿತದಿಂದ ದೊಡ್ಡ ಮೊತ್ತದ ನಷ್ಟ ಎದುರಿಸುವಂತಾಗಿದೆ. ೨೦೨೦ರ ನಂತರ ಎದುರಿಸಿದ ದೊಡ್ಡ ನಷ್ಟ ಎಂದು ಹೇಳಲಾಗಿದೆ. ಅಕ್ಷತಾ ಮೂರ್ತಿ ಅವರ ತಂದೆ ನಾರಾಯಣ ಮೂರ್ತಿ ಭಾರತೀಯ ಸಾಫ್ಟ್‌ವೇರ್ ದೈತ್ಯ ಸಂಸ್ಥೆ ಇನ್ಫೋಸಿಸ್ ಸ್ಥಾಪಿಸಿದ್ದರು. ಅಕ್ಷತಾ ಮೂರ್ತಿ ಶೇ. ೦.೯೪ ರಷ್ಟು ಪಾಲು ಹೊಂದಿದ್ಧಾರೆ.
ನಿರಾಕಣೆ: ಇನ್ಪೋಸಿಸ್ ಷೇರು ಮೌಲ್ಯ ಕುಸಿದ ಹಿನ್ನೆಲೆಯಲ್ಲಿ ನಷ್ಟ ಎದುರಿಸಿರುವ ಅಕ್ಷತಾ ಮೂರ್ತಿ ಅವರ ಬಗ್ಗೆ ಮಾಹಿತಿ ನೀಡಲು ಪ್ರಧಾನಿ ರಿಷಿ ಸುನಕ್ ಅವರ ಕಚೇರಿ ನಿರಾಕರಿಸಿದೆ. ಇದು ಪತಿ ಪತ್ನಿಯರ ವಿಷಯವಲ್ಲ. ಷೇರು ವ್ಯವ್ಯಹಾರ.ಇದರಲ್ಲಿ ನಾವು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದೆ.
ಸಂಸದೀಯ ಕಮಿಷನರ್ ಫಾರ್ ಸ್ಟ್ಯಾಂಡಡ್ರ್ಸ್ ಡೇನಿಯಲ್ ಗ್ರೀನ್‌ಬರ್ಗ್ ಅವರು ಶಿಶುಪಾಲನಾ ಕಂಪನಿಯಲ್ಲಿ ಅವರ ಪ್ರಧಾನಿ ರಿಷಿ ಸುನಕ್ ಅವರ ಪತ್ನಿ ಒಡೆತನದ ಅಲ್ಪಸಂಖ್ಯಾತ ಪಾಲನ್ನು ಸಂಬಂಧಿತ ಆಸಕ್ತಿ ಘೋಷಿಸಲು ಸುನಕ್ ವಿಫಲರಾಗಿದ್ದಾರೆಯೇ ಎಂಬುದರ ಕುರಿತು ವಿಚಾರಣೆ ಕೈಗೆತ್ತಿಕೊಂಡಿದ್ದಾರೆ.
ಗ್ರೀನ್ ಬರ್ಗ್ ಕೈಗೆತ್ತಿಕೊಂಡಿರುವ ತನಿಖೆಗೆ ಪ್ರಧಾನ ಮಂತ್ರಿ ರಿಷಿ ಸುನಕ್ ಅವರು “ಪಾರದರ್ಶಕವಾಗಿ ಕೆಲಸ ಮಾಡಲಿದ್ದಾರೆ. ಜೊತೆಗೆ ಗ್ರೀನ್‌ಬರ್ಗ್‌ಗೆ ಸಹಕರಿಸುತ್ತಾರೆ ಎಂದು ಅವರ ಕಚೇರಿ ಹೇಳಿದೆ. ಕಳೆದ ಮೂರು ವರ್ಷಗಳಲ್ಲಿ ಅವರು ಇಂಗ್ಲೆಂಡ್‌ನಲ್ಲಿ ೧ ದಶಲಕ್ಷಕ್ಕೂ ಅಧಿಕ ಪೌಂಡ್‌ಗಿಂತಲೂ ಹೆಚ್ಚು ತೆರಿಗೆ ಪಾವತಿಸಿದ್ದಾರೆಂದು ಅವರ ಕಚೇರಿ ಮೂಲಗಳು ಮಾಹಿತಿ ನೀಡಿವೆ.