ಇನ್ನುಮುಂದೆ ಮನೆ ಬಾಗಿಲಿಗೆ ಮಹಾನಗರ ಪಾಲಿಕೆ ;ಮೇಯರ್ ಅಜಯ್ ಕುಮಾರ್


ದಾವಣಗೆರೆ.ನ.೬; ಕಳೆದ ಹಲವಾರು ವರ್ಷಗಳಿಂದ ಬನಶಂಕರಿ ಬಡಾವಣೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಕಂಡು ಬರುತ್ತಿದೆ ಈ ಹಿನ್ನೆಲೆಯಲ್ಲಿ ಇಂದು ಬಡಾವಣೆಗೆ ಭೇಟಿ ನೀಡಲಾಗಿದೆ ಎಂದು ಮೇಯರ್ ಬಿ.ಜಿ ಅಜಯ್ ಕುಮಾರ್ ಹೇಳಿದರು.
ಬನಶಂಕರಿ ಬಡಾವಣೆಯಲ್ಲಿ ಇಂದು ಬೆಳಗ್ಗೆ ರಸ್ತೆ, ಯುಜಿಡಿ ಸೇರಿದಂತೆ ವಿವಿಧ ಸಮಸ್ಯೆಗಳ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಡಾವಣೆಯ ಜನರಿಗೆ ಸಾಕಷ್ಟು ತೊಂದರೆಯಾಗಿದೆ ಈ ಬಗ್ಗೆ ಇಲ್ಲಿನ ನಿವಾಸಿಗಳು ಸಮಸ್ಯೆ ನಿವಾರಣೆಗೆ ಮನವಿ ಸಲ್ಲಿಸಿದ್ದಾರೆ.ಅತೀ ಶೀಘ್ರದಲ್ಲಿ ಸೌಲಭ್ಯ ಕಲ್ಪಿಸಲಾಗುವುದು. ಈ ಭಾಗದಲ್ಲಿ ಚಿಕ್ಕಬಡಾವಣೆ ನಿರ್ಮಾಣವಾಗಿದೆ. ಕೆಲ ಸೌಲಭ್ಯಗಳು ಸಮರ್ಪಕವಾಗಿಲ್ಲ ಆದ್ದರಿಂದ ಇಂಜಿನಿಯರ್‌ಗಳನ್ನು ಕರೆಯಿಸಿ ಪರಿಶಿಲನೆ ನಡೆಸಿ ಅಭಿವೃದ್ದಿ ಮಾಡಲಾಗುವುದು. ಬಡಾವಣೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಬೆಳೆದಿದೆ. ಒಂದು ರೀತಿ ೨ ನೇ ದಾವಣಗೆರೆ ಎಂಬ ಹೆಸರು ಪಡೆದುಕೊಂಡಿದೆ.ಸಾಕಷ್ಟು ಅಭಿವೃದಿಯೂ ಆಗಿದೆ. ಮೂರು ಹೈವೆ ರಸ್ತೆ ಈ ಭಾಗಕ್ಕೆ ಸಂಪರ್ಕ ಕಲ್ಪಿಸುತ್ತಿದೆ. ಡಾಂಬರೀಕರದ ಅಗತ್ಯವಿದೆ.ಮೊದಲು ಜನಸಂಖ್ಯೆ ಕಡಿಮೆಯಿದ್ದ ಕಾರಣ ಚಿಕ್ಕ ಯುಜಿಡಿ ಪೈಪ್ ಲೈನ್ ಮಾಡಲಾಗಿದೆ. ನಂತರದ ದಿನಗಳಲ್ಲಿ ಬಡಾವಣೆ ಸಾಕಷ್ಟು ಅಭಿವೃದ್ದಿ ಕಂಡಿದೆ.ಅದಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಯುಜಿಡಿ ಪೈಪ್ ಲೈನ್ ಅಳವಡಿಸುವ ಅಗತ್ಯವಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.ಬಡಾವಣೆಯ ಕೆಲ ಭಾಗಗಳಲ್ಲಿ ರಸ್ತೆಡಾಂಬರೀಕರಣವಾಗದ ಕಾರಣ ಮಳೆಬಂದರೆ ಸಂಚಾರಕ್ಕೆ ತೊಂದರೆಯಾಗುತ್ತಿದೆ. ವಿಶೇಷ ಅನುದಾನದಲ್ಲಿ ಬನಶಂಕರಿ ಬಡಾವಣೆಯ ಅಭಿವೃದ್ದಿಗೆ ಆದ್ಯತೆ ನೀಡಲಾಗುವುದು.ಅತೀ ಶೀಘ್ರದಲ್ಲೇ ಸಂಸದರು ಹಾಗೂ ಶಾಸಕರ ಗಮನಕ್ಕೆ ತಂದು ವಿಶೇಷ ಅನುದಾನ ಕಲ್ಪಿಸುವಂತೆ ಮನವಿ ಮಾಡಲಾಗುವುದು.
ರಾಮ್ ಅಂಡ್ ಕೋ ವೃತ್ತದಲ್ಲಿ ಮರಗಳ ತೆರವು ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ರಾಮ್ ಅಂಡ್ ಕೋ ವೃತ್ತ ಅತೀ ದೊಡ್ಡ ಜಾಗ ಹಿಂದೆ ಸ್ಮಾರ್ಟ್ ಸಿಟಿಯವರು ಪುಟ್‌ಪಾತ್ ದೊಡ್ಡದಾಗಿ ಮಾಡಿದ್ದಾರೆ ಇದರಿಂದಾಗಿ ಜನರಸ್ತೆ ಸಂಚಾರಕ್ಕೆ ಚಿಕ್ಕದಾಗಿದೆ. ಅದನ್ನು ತೆರವು ಮಾಡಿ ಹಿಂದೆ ಹಾಕಬೇಕು ಅಂದರೆ ಫುಟ್ ಪಾತ್ ನ್ನು ಚಿಕ್ಕದಾಗಿ ಮಾಡಿದಾಗ ಸರ್ಕಲ್ ದೊಡ್ಡದಾಗುತ್ತದೆ. ವೃತ್ತದ ಬಳಿ ಮೂರ್‍ನಾಲ್ಕು ಮರಗಳಿವೆ.ಅಲ್ಲಿನ ನಿವಾಸಿಗಳು ಮರ ಕಡಿದು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡುತ್ತಿದ್ದಾರೆ.ಮರ ಕಡಿದಾಗ ಪಕ್ಕದಲ್ಲಿ ಗಿಡನೆಡ ಬೇಕಿದೆ. ಎರಡರಿಂದ ಮೂರು ವರ್ಷದಲ್ಲಿ ಮರ ಬೆಳೆಯುತ್ತದೆ. ಅತ್ಯಂತ ಉತ್ತಮ ತಳಿಯ ಸಸಿಗಳಿವೆ.ಒಳ್ಳೆಯ ಸಸಿಗಳನ್ನೇ ನೆಡಲಾಗುವುದು.ಈಗಿರುವ ಮರಗಳಿಗಿಂತ ಉತ್ತಮವಾದ ಮರಗಳನ್ನು ಬೆಳೆಸಲಾಗುವುದು.ಮರ ಕಡಿಯುವುದು ಬೇಡ ಎಂದು ಎಷ್ಟು ಜನ ಹೇಳುತ್ತಿದ್ದಾರೋ ಅದಕ್ಕಿಂದ ಮೂರುಪಟ್ಟು ಜನರು ಮರ ಕಡಿಯುವಂತೆ ಒತ್ತಾಯಿಸುತ್ತಿದ್ದಾರೆ.ಕೆಲವರು ಮರಕಡಿಯಲು ಬಿಡುವುದಿಲ್ಲ ಎಂದು ಹೇಳುತ್ತಿದ್ದಾರೆ ಪರಿಸರ ಪ್ರೇಮಮಿಗಳು ಈ ರೀತಿ ಹೇಳುವುದು ಸಹಜ ಅವರಂತೆ ನಾನು ಕೂಡ ಸೇವಿಸುವುದು ಆಮ್ಲಜನಕವನ್ನೇ ಅವರಿಗಿರುವಷ್ಟು ಪರಿಸರದ ಕಾಳಜಿ ನಮಗೂ ಇದೆ.ಹಾಗೆಂದು ಜನರಿಗೆ ತೊಂದರೆ ನೀಡುವ ಕೆಲಸ ಎಂದಿಗೂ ಮಾಡುವುದಿಲ್ಲ.ಜನರಿಗೆ ಅನುಕೂಲವಾಗುತ್ತದೆ ಎಂದರೆ ಮರ ಕಡಿದು ಪಕ್ಕದಲ್ಲೇ ಸಸಿನೆಡುವ ಕಾರ್ಯ ಮಾಡಲಾಗುವುದು ಅದರ ನಿರ್ವಹಣೆಯೂ ನನ್ನ ಹೊಣೆ.ಮೈಸೂರು ನಗರದಂತೆ ದಾವಣಗೆರೆಯ ಅಭಿವೃದ್ದಿ ಮಾಡಲಾಗುವುದು ಬಜೆಟ್ ನಲ್ಲಿ ಘೋಷಿಸಿರುವಂತೆ ೧ ಲಕ್ಷಸಸಿ ನೆಡುವ ಕಾರ್ಯಕ್ಕೆ ಮುಖ್ಯಮಂತ್ರಿಗಳಿಂದ ಚಾಲನೆ ಕೋಡುವ ಉದ್ದೇಶವಿದೆ ಅದಕ್ಕಾಗಿ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿದ್ದೇವೆ.ಜನರ ಮನೆಬಾಗಿಲಿಗೆ ಮಹಾನಗರ ಪಾಲಿಕೆ ಉದ್ದೇಶವನ್ನು ಶೀಘ್ರದಲ್ಲೇ ಕಾರ್ಯಗತ ಮಾಡಲಾಗುವುದು ಎಂದರು.ಈ ವೇಳೆ ಉಪಮೇಯರ್ ಸೌಮ್ಯ, ಸ್ಥಾಯಿಸಮಿತಿ ಅಧ್ಯಕ್ಷರುಗಳು ಹಾಗೂ ಪಾಲಿಕೆ ಸದಸ್ಯರು ಇದ್ದರು.