ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ಶಾಲಾ ಮಕ್ಕಳಿಗೆ ನೊಟ್ ಬುಕ್, ಪೆನ್ ವಿತರಣೆ

ಲಿಂಗಸುಗೂರು,ಆ.೦೬-ತಾಲೂಕಿನ ಕಾಳಪೂರ ಗ್ರಾಮದಲ್ಲಿ ಇನ್ನರ್ ವೀಲ್ ಕ್ಲಬ್ ವತಿಯಿಂದ ಕುಷ್ಟಗಿ ತಾಲೂಕ ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷರು ಶಾರದಾ ಎ ಶೆಟ್ಟರ್ ಹುಟ್ಟು ಹಬ್ಬದ ಅಂಗವಾಗಿ ಕಾಳಪೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ನೋಟ್ , ಬುಕ್ , ಪೆನ್ನುಗಳನ್ನು , ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಇನ್ನರ್ ವ್ಹೀಲ್ ಕ್ಲಬ್ ತಾಲೂಕ ಅಧ್ಯಕ್ಷರಾದ ನಾಗವೇಣಿ ಎಸ್ ಪಾಟೀಲ ಮಾತನಾಡಿ ಇನ್ನರ್ ವ್ಹೀಲ್ ಕ್ಲಬ್ ಸ್ನೇಹ ಹಾಗೂ ಸೇವೆಯನ್ನು ಒಳಗೊಂಡಿದೆ. ಎಲ್ಲಾ ಸಖಿಯರ ಬೆಂಬಲವು ಇದೆ ಎಲ್ಲರ ಸಹಾಯ ಸಹಕಾರ ಹಸ್ತವನ್ನು ಕೋರಿ ಮಾತನಾಡಿದರು. ಶಾಲೆಯ ಮುಖ್ಯಗುರುಗಳು ಅಮರಪ್ಪ ಸಾಲಿ ಮಾತನಾಡಿ ಮಹಿಳೆಯರ ಪ್ರಯತ್ನ ಮತ್ತು ಇನ್ನರ್ ವ್ಹೀಲ್ ಕ್ಲಬ್ ಪಧಾದಿಕಾರಿಗಳ ಸಾಧನೆಯನ್ನು ಮೇಚ್ಚುವಂತ ಕೆಲಸ ಮಾಡುತ್ತಿದ್ದಾರೆ.ಮುಂದಿನ ದಿನಗಳಲ್ಲಿ ತಮ್ಮಿಂದ ಯಾವುದೇ ಸಹಾಯ ,ಸೇವೆ , ಮಾಡುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ. ಇನ್ನರ್ ವ್ಹೀಲ್ ಕ್ಲಬ್ ತಾಲೂಕ ಅಧ್ಯಕ್ಷರು ನಾಗವೇಣಿ ಎಸ್. ಪಾಟೀಲ,ಇನ್ನರ್ ವ್ಹೀಲ್ ಕ್ಲಬ್ ಖಜಾಂಚಿ ಎಸ್. ಜೆ.ಗಿರಿಜಾ ,ಐಎಸ್‌ಓ ಪಾರ್ವತಿ ಭೂಸೂರ , ಜಯಶ್ರೀ , ಶಾಂತ, ವಿಜಯಲಕ್ಷ್ಮಿ ಗಡದಮಠ, ಪದ್ಮಾವತಿ ,ಕಾರ್ಯಕ್ರಮದಲ್ಲಿ ಇದ್ದರು.