ಇನ್ನರ್ ವೀಲ್ ಗೆ ಸುವರ್ಣ ಸಂಭ್ರಮ : ರೋಟರಿಯಿಂದ ೬೩ ವರ್ಷಗಳ ಸಾಮಾಜಿಕ ಸೇವೆ

ಸಂಜೆವಾಣಿ ವಾರ್ತೆ
ಹೊಸಪೇಟೆ, ಜು.22: ರೋಟರಿ ಕ್ಲಬ್ ಹಾಗೂ ಇನ್ನರ್ವೀಲ್ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಬುಧವಾರ ಸಂಜೆ ನಗರದ ಖಾಸಗಿ ಹೋಟೆಲ್ ನಲ್ಲಿ  ಅದ್ಧೂರಿಯಾಗಿ  ನಡೆಯಿತು.
ಇನ್ನರ್ ವೀಲ್ ಕ್ಲಬ್ ಜಿಲ್ಲಾಧ್ಯಕ್ಷೆ ಡಾ.ಮಾಧವಿ ದೇವಿ ಅವರು  ಪದಗ್ರಹಣ ನೆರವೇರಿಸಿ ಮಾತನಾಡಿ, ಹೊಸಪೇಟೆ ಇನ್ನರ್ ವೀಲ್ ಸಂಸ್ಥೆಯು ಸಾಮಾಜಿಕ ಕಳಕಳಿಯೊಂದಿಗೆ ಕಳೆದ 49 ವರ್ಷಗಳಿಂದ ನಿರಂತರ ಸೇವೆ ನೀಡುತ್ತಿರುವ ಉತ್ತಮ ಸಂಸ್ಥೆಯಾಗಿದ್ದು, ಈ ಸಂಸ್ಥೆಗೆ ಈಗ ಸುವರ್ಣ ಮಹೋತ್ಸವದ ಸಂಭ್ರಮ, ನಾನೂ ಈ ಕ್ಲಬಿನ ಸದಸ್ಯೆಯಾಗಿರುವುದು ಹೆಮ್ಮೆಯ ಸಂಗತಿ,  ಸುವರ್ಣ ಸಂಭ್ರಮದಲ್ಲಿರುವ ಹೊಸಪೇಟೆ ಸಂಸ್ಥೆಯಿಂದ  ಹೆಚ್ಚಿನ ನಿರೀಕ್ಷೆಯಿದೆ, ಅಲ್ಲದೇ ಜಿಲ್ಲಾಧ್ಯಕ್ಷೆಯಾಗಿರುವ ಈ ನನ್ನ ಮಾತೃ ಕ್ಲಬಿನ ಚಟುವಟಿಕೆ ಬಗ್ಗೆಯೂ ಇಡೀ ಜಿಲ್ಲೆಯ ಅನ್ಯ ಕ್ಲಬ್ ಗಳು ತೀವ್ರ ನಿಗಾ ವಹಿಸಲಿವೆ ಎಂದ ಅವರು, ಕ್ಲಬಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸೌತ್ ಜೋನ್ ಮೀಟ್ ಅನ್ನು ನಗರದಲ್ಲಿ ಆಯೋಜಿಸಿರುವುದು ಮತ್ತೊಂದು ಹೆಗ್ಗಳಿಕೆ ಎಂದು ಹರ್ಷ ವ್ಯಕ್ತಪಡಿಸಿದರು. 
ಹೊಸಪೇಟೆ (ವಿಜಯನಗರ) : ರೋಟರಿ ಕ್ಲಬ್ ಹಾಗೂ ಇನ್ನರ್ವೀಲ್ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಬುಧವಾರ ಸಂಜೆ ನಗರದ ಖಾಸಗಿ ಹೋಟೆಲ್ ನಲ್ಲಿ  ಅದ್ಧೂರಿಯಾಗಿ  ನಡೆಯಿತು.
ರೋಟರಿ ಕ್ಲಬ್ನ ನೂತನ ಅಧ್ಯಕ್ಷರಾಗಿ ಅಧಿಕಾರಿ ವಹಿಸಿಕೊಂಡ ಸಜ್ಜನ್ ಖಯಾಲ್  ಅವರು ಮಾತನಾಡಿ. ಕಳೆದ 63 ವರ್ಷಗಳಿಂದ ಸಂಸ್ಥೆಯ ಮೂಲಕ ಸಾಮಾಜಿಕ ಸೇವೆ ಕೈಗೊಳ್ಳುತ್ತಾ ಬರಲಾಗುತ್ತಿದೆ. ಎಲ್ಲಾ ಸದಸ್ಯರು ಸಹಕಾರದೊಂದಿಗೆ ಸಾಮಾಜಿಕ ಸೇವಾ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗಲಾಗುತ್ತದೆ  ಎಂದರು.
ಜಿಲ್ಲಾ ಮಾಜಿ ಗವರ್ನರ್ ಆರ್.ಗೋಪಿನಾಥ್ ಅವರು ಮಾತನಾಡಿ, ಸಾಮಾಜಿಕ ಸೇವಾ ಸಂಸ್ಥೆಗಳಲ್ಲಿ ಸದಸ್ಯರ ಸಹಕಾರ ಪದಾಧಿಕಾರಿಗಳಿಗೆ ಸಿಕ್ಕಾಗ ಹೆಚ್ಚಿನ ಮಟ್ಟದಲ್ಲಿ ಸೇವೆ ಸಲ್ಲಿಸಬಹುದಾಗಿದೆ. ಆ ನಿಟ್ಟಿನಲ್ಲಿ ನೂತನ ಪದಾಧಿಕಾರಿಗಳಿಗೆ ಸಹಕಾರ ಅತ್ಯವಶ್ಯಕವಾಗಿ ನೀಡಬೇಕು ಎಂದರು.
ರೋಟರಿ ಕ್ಲಬ್ನ ಕಾರ್ಯದರ್ಶಿಯಾಗಿ ಸತ್ಯನಾರಾಯಣ, ಇನ್ನರ್ವೀಲ್ ಸಂಸ್ಥೆಯ ಅಧ್ಯಕ್ಷೆಯಾಗಿ ರೇಖಾ ಪ್ರಕಾಶ್, ಕಾರ್ಯದರ್ಶಿಯಾಗಿ ಅಶ್ವಿನಿ ವೈ. ಅಧಿಕಾರ ವಹಿಸಿಕೊಂಡರು.
ರೋಟರಿ : ಪ್ರಹ್ಲಾದ್ ಭೂಪಾಳ್( ಖಜಾಂಚಿ), ತಿಪ್ಪೇರುದ್ರ, ದೀಪಕ್ ಕೊಳಗದ (ಉಪಾಧ್ಯಕ್ಷರು) ಮಂಜುನಾಥ್, ಡಾ.ಕೇದಾರೇಶ್ವರ (ಸಹ ಕಾರ್ಯದರ್ಶಿ) ಮಂಜುನಾಥ ಅಂಗಡಿ (ಸಾರ್ಜಂಟ್ ಆಮ್).
ಇನ್ನರ್ ವೀಲ್  : ನೈಮಿಷಾ (ಖಜಾಂಚಿ), ಸುಜಾತ ಪತ್ತಿಕೊಂಡ ( ಐಎಸ್ ಓ) ಸಹನಾ ( ಎಡಿಟರ್), ವಿಜಯ ಅಗ್ನಿಹೋತ್ರಿ, ಮಣಿ ವಿಷ್ಣು, ಅನುರೆಡ್ಡಿ, ಬಿಂದೂ ಮಲ್ಲಿಕಾರ್ಜುನ, ನಂದಿನಿ ಚಿಕ್ಕಮಠ್, ಮೇಘನಾ ಮಂಜುನಾಥ್  ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದರು.
ಇನ್ನರ್ ವೀಲ್  : ನೈಮಿಷಾ (ಖಜಾಂಚಿ), ಸುಜಾತ ಪತ್ತಿಕೊಂಡ ( ಐಎಸ್ ಓ) ಸಹನಾ ( ಎಡಿಟರ್), ವಿಜಯ ಅಗ್ನಿಹೋತ್ರಿ, ಮಣಿ ವಿಷ್ಣು, ಅನುರೆಡ್ಡಿ, ಬಿಂದೂ ಮಲ್ಲಿಕಾರ್ಜುನ, ನಂದಿನಿ ಚಿಕ್ಕಮಠ್, ಮೇಘನಾ ಮಂಜುನಾಥ್  ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದರು.