ಇನ್ನರ್ ವೀಲ್ ಕ್ಲಬ್ ನಿಂದ  ವಿಭಿನ್ನ  ಆಚರಣೆ

ಹಿರಿಯೂರು. ಜ.2–ಹಿರಿಯೂರು ಇನ್ನರ್ ವೀಲ್ ಕ್ಲಬ್ ವತಿಯಿಂದ 2023ರ ಹೊಸ ಕ್ಯಾಲೆಂಡರ್ ವರ್ಷವನ್ನು ಜ್ಯೋತಿ ಬೆಳಗಿಸಿ ಕಲ್ಲಂಗಡಿ ಹಣ್ಣನ್ನು ಕತ್ತರಿಸುವ ಮೂಲಕ ವಿಭಿನ್ನ ರೀತಿಯಲ್ಲಿ ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷರಾದ ಸರ್ವಮಂಗಳ ರವರು ಇಂದು ಕಲ್ಪತರು ದಿನ ಜನವರಿ ಒಂದು ಶ್ರೀರಾಮಕೃಷ್ಣ ಪರಮಹಂಸರು ಭಕ್ತರಿಗೆಲ್ಲ ದಿವ್ಯ ದರ್ಶನ ಕೊಟ್ಟು ಇಷ್ಟಾರ್ಥಗಳನ್ನು ಆಶೀರ್ವದಿಸಿದ ದಿನ ಈ ದಿನವನ್ನು ನಾವು ಕಲ್ಪತರು ದಿನವೆಂದು ಆಚರಿಸುತ್ತೇವೆ ಎಂದರು. ಹಾಗೂ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.ಶ್ರೀಮತಿ ಗೀತಾ ರಾಧಾಕೃಷ್ಣರವರು ಮಾತನಾಡಿ ಕಲ್ಪತರು ದಿವಸ ವಿಶಿಷ್ಟ ಆಚರಣೆಯಾಗಿದ್ದು ಈ ದಿನ ನಾವು ಏನೇ ಬೇಡಿದರು ಆ ದೇವರು ನಮಗೆ ನೀಡುತ್ತಾನೆ ಎಂದರು. ಆಧ್ಯಾತ್ಮಿಕ ಜ್ಞಾನವನ್ನು ಜನರಲ್ಲಿ ಜಾಗೃತಿಗೊಳಿಸಿದವರು ರಾಮಕೃಷ್ಣ ಪರಮಹಂಸರು, ಇಂದಿನ ಮಾತೆಯರು ಈಗಿನ ಮಕ್ಕಳಿಗೆ ನಮ್ಮ ಸಂಸ್ಕೃತಿ, ದೇವರನಾಮಗಳು, ಶ್ಲೋಕಗಳ ಬಗ್ಗೆ ತಿಳಿಸಿಕೊಡಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ತ್ರಿವೇಣಿ ಶಶಿಧರ್, ಸುಚಿತ್ರ ಅಮರನಾಥ್,ಸೌಮ್ಯ ಪ್ರಶಾಂತ್, ಇಂಪಾರೀತೇಶ್, ಸ್ವರ್ಣಾ ರೆಡ್ಡಿ , ಹರಿತಾ ರೆಡ್ಡಿ,  ರಚನಾಅನಂತ್,  ಸ್ವಪ್ನ ಸತೀಶ್, ರಾಜೇಶ್ವರಿ,  ಜ್ಞಾನೇಶ್ವರಿ, ಶಕುಂತಲಮ್ಮ, ಶೃತಿ,  ಲತಾ ಅನಿಲ್, ರೇಷ್ಮಾ ಗುಜಾರ್, ಭವಾನಿ ಶ್ರೀನಿವಾಸ್ ಮತ್ತಿತರರು ಪಾಲ್ಗೊಂಡಿದ್ದರು.