ಇನ್ನರ್‌ವ್ಹೀಲ್ ಕ್ಲಬ್‌ಗೆ ಜಿಲ್ಲಾಧ್ಯಕ್ಷರ ಭೇಟಿ : ಚರ್ಚೆ 

ಸಂಜೆವಾಣಿ ವಾರ್ತೆ

ಸಾಗರ, ಜು.30- ಇಲ್ಲಿನ ಇನ್ನರ್‌ವ್ಹೀಲ್ ಕ್ಲಬ್‌ಗೆ ಜಿಲ್ಲೆ 318 ರ ಜಿಲ್ಲಾಧ್ಯಕ್ಷೆ ಪೂರ್ಣಿಮಾ ರವಿ ಭೇಟಿ ನೀಡಿದ್ದರು. ಕ್ಲಬ್‌ನಲ್ಲಿ ನಡೆಸುವ ಚಟುಚಟಿಕೆಗಳು, ಯೋಜನೆಗಳ ಕುರಿತು ಚರ್ಚಿಸಿದರು. ಸಮಾಜಸೇವೆಯ ಮೂಲಕ ಸಂಸ್ಥೆಯನ್ನು ಮುನ್ನಡೆಸುವ ಹಾಗೂ ಸ್ವಸ್ಥ ಸಮಾಜ ನಿರ್ಮಾಣದ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಉಷಾ ರಮಣ, ಕಾರ್ಯದರ್ಶಿ ರಾಜೇಶ್ವರಿ ಅಂಕದ, ಉಪಾಧ್ಯಕ್ಷೆ ಪ್ರವೀಣಾ ವೆಂಕಟ್, ನಿಕಟಪೂರ್ವ ಅಧ್ಯಕ್ಷೆ ಪೂರ್ಣಿಮಾ ಗುರುಪ್ರಸಾದ್ ಹಾಗೂ ಸದಸ್ಯೆಯರು ಹಾಜರಿದ್ದರು.