ಇನ್ನರ್‍ವೀಲ್ ಸುವರ್ಣ ಸಂಭ್ರಮಕ್ಕೆ ಬೈಕ್ ಱ್ಯಾಲಿ ಮೂಲಕ ಚಾಲನೆ


ಸಂಜೆವಾಣಿ ವಾರ್ತೆ
ಹೊಸಪೇಟೆ ನ10: ಇಂದಿನಿಂದ ಒಂದು ವಾರಗಳ ಕಾಲ ನಡೆಯುವ ಇನ್ನರ್‍ವೀಲ್ ಸುವರ್ಣ ಸಂಭ್ರಮಕ್ಕೆ ಬೈಕ್ ಱ್ಯಾಲಿ ಮೂಲಕ ಚಾಲನೆ ನೀಡಲಾಯಿತು.
ರೋಟರಿ ಕ್ಲಬ್ ನಿಂದ ಆರಂಭವಾದ ಱ್ಯಾಲಿಯು ನಗರದ ಬಸ್ ನಿಲ್ದಾಣ ಡ್ಯಾಂ ರಸ್ತೆ, ಕಾಲೇಜು ರಸ್ತೆಯ ಮೂಲಕ ಪುನೀತ್‍ರಾಜಕುಮಾರ ವೃತ್ತದ ಮಾರ್ಗವಾಗಿ ಮತ್ತೇ ರೋಟರಿ ಕ್ಲಬ್‍ಗೆ ಅಂತ್ಯವಾಯಿತು.    ಸಂಸ್ಥೆಯ ಅಧ್ಯಕ್ಷೆ ರೇಖಾ ಪ್ರಕಾಶ ಮಾತನಾಡಿ ಇನ್ನರ್‍ವೀಲ್ ಇಂದಿನಿಂದ ವಾರಪೂರ್ತಿ ವೈವಿದ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಸಾರ್ವಜನಿಕರಿಗೆ ತಿಳಿಯಲಿ ಎಂಬ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸದರು.
ಬೆಳಿಗ್ಗೆ ರೋಟರಿ ಕ್ಲಬ್‍ನಿಂದ ಆರಂಭವಾದ ಬೈಕ್ ಱ್ಯಾಲಿಯನ್ನು ಇನ್ನರ್‍ವೀಲ್ ಜಿಲ್ಲಾಧ್ಯಕ್ಷೆ ಡಾ.ಮಾಧವಿದೇವಿ ಚಾಲನೆ ನೀಡಿದರು. ಇನ್ನರ್‍ವೀಲ್ ಅಧ್ಯಕ್ಷೆ ರೇಖಾಪ್ರಕಾಶ, ಕಾರ್ಯದರ್ಶಿ ಅಶ್ವಿನಿ, ವಿಜಯಾ ಅಗ್ನಿಹೋತ್ರಿ, ಸ್ಮೀತಾ ಪ್ರಕಾಶ, ಮಣಿ ವಿಷ್ಣ, ನಂದಿನಿ ಚಿಕ್ಕಮಠ ಹಾಗೂ ಸದಸ್ಯರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.