( ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.08: ಇನ್ನರ್ ವೀಲ್ ಕ್ಲಬ್ ಬಳ್ಳಾರಿ 50ನೇ ವಾರ್ಷಿಕೋತ್ಸವ ನಿಮಿತ್ಯ, ಸದರಿ ಕ್ಲಬ್ ವತಿಯಿಂದ ಸ್ಪೈನಲ್‍ಕಾರ್ಡ್ ಆಪರೇಷನ್ ವಿಫಲವಾಗಿ, ನರಗಳ ದೌರ್ಬಲ್ಯದಿಂದ ನಡೆಯಲು ಬಾರದ ಹಾಗೂ ನಿತ್ಯದ ಕರ್ಮಕಾರ್ಯಗಳನ್ನು ನಿರ್ವಹಿಸಲು ಅಶಕ್ತನಾದ, ಬಳ್ಳಾರಿ ನಗರದ ನಿವಾಸಿ ಬಿ.ರಾಮಣ್ಣನವರಿಗೆ ಬಟ್ಟೆ-ಸಿಹಿತಿನಿಸುಗಳೊಂದಿಗೆ (ಮೂಲ: ಆಂಧ್ರದ ಆನಂತಪುರದ ಕಣೇಕಲ್ ಮಂಡಲದ ಗರುಡಚೇಡು ಗ್ರಾಮದ ನಿವಾಸಿ) ವೀಲ್‍ಚೇರ್ ವಿತರಿಸಲಾಯಿತು. ವೀಲ್‍ಚೇರ್ ಮತ್ತು ಸಿಹಿತಿನಿಸುಗಳನ್ನು ಸಂತೋಷದಿಂದ ಸ್ವೀಕರಿಸಿದ ಬಿ.ರಾಮಣ್ಣ ಮತ್ತು ಕುಟುಂಭದರು ಕ್ಲಬ್‍ನ ಈ ಸಹಾಯಕ್ಕಾಗಿ ಕ್ಲಬ್‍ನ ಮೆಂಬರ್ಸ್‍ಗೆ ಧನ್ಯವಾದ ಸಲ್ಲಿಸಿದರು. ಈ ಸಂಧರ್ಭದಲ್ಲಿ ಕ್ಲಬ್‍ನ ಅಧ್ಯಕ್ಷರಾದ ಎನ್.ಟಿ. ಲಕ್ಷ್ಮಿಪ್ರಿಯ, ಕಾರ್ಯದರ್ಶಿ ಜಯಂತಿ ಶಿಲ್ಪ, ವೀಲ್ ಚೇರ್ ಸ್ಪಾನ್ಸರ್ ಉಪನ್ಯಾಸಕಿ ಪ್ರಿಯ, ಕ್ಲಬ್‍ನ ಮೆಂಬರ್ಸ್‍ಗಳಾದ ಅನಿತಾಜೈನ್, ಸುಮನ್ ಗುಪ್ತ, ಮತ್ತು ನಾಗವೇಣಿ ರವರು ಉಪಸ್ಥಿತರಿದ್ದರು.
ಇನ್ನರ್ ವೀಲ್ ಕ್ಲಬ್ ಬಳ್ಳಾರಿ 50ನೇ ವಾರ್ಷಿಕೋತ್ಸವ ನಿಮಿತ್ಯ, ವೀಲ್‍ಚೇರ್ ವಿತರಿಸಲಾಯಿತು. ಈ ಸಂಧರ್ಭದಲ್ಲಿ ಕ್ಲಬ್‍ನ ಅಧ್ಯಕ್ಷರಾದ ಎನ್.ಟಿ. ಲಕ್ಷ್ಮಿಪ್ರಿಯ, ಕಾರ್ಯದರ್ಶಿ ಜಯಂತಿ ಶಿಲ್ಪ, ವೀಲ್ ಚೇರ್ ಸ್ಪಾನ್ಸರ್ ಉಪನ್ಯಾಸಕಿ ಪ್ರಿಯ, ಕ್ಲಬ್‍ನ ಮೆಂಬರ್ಸ್‍ಗಳಾದ ಅನಿತಾಜೈನ್, ಸುಮನ್ ಗುಪ್ತ, ಮತ್ತು ನಾಗವೇಣಿ ರವರು ಉಪಸ್ಥಿತರಿದ್ದರು.