ಇನಾಂ ರದ್ದತಿ ಅಭಿಯಾನ  ರಾಜ್ಯದಲ್ಲಿಯೇ  ಬಳ್ಳಾರಿ ಜಿಲ್ಲೆ ಪ್ರಥಮ: ಹೇಮಂತ್ ಕುಮಾರ್

(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಆ.16: ಇನಾಂ ರದ್ದತಿ ಅಭಿಯಾನದಲ್ಲಿ ಬಳ್ಳಾರಿ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮವಾಗಿದೆಂದು ಬಳ್ಳಾರಿಯ ಸಹಾಯಕ ಆಯುಕ್ತ  ಹೇಂಮತ್ ಕುಮಾರ್ ಹೇಳಿದ್ದಾರೆ.ಅವರಿಂದು ನೂತನ ಜಿಲ್ಲಾಡಳಿತ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ. ವಾರಕ್ಕೆ ಒಂದು ದಿನದಂತೆ.  ತಿಂಗಳಲ್ಲಿ ನಾಲ್ಕು ದಿನ ಅರ್ಜಿಗಳ ವಿಲೇವಾರಿ ಮಾಡುತ್ತಿದೆ. ಸೆಪ್ಟೆಂಬರ್ ಅಂತ್ಯದೊಳಗೆ ಎಲ್ಲಾ ಅರ್ಜಿ ವಿಲೇವಾರಿ ಮಾಡಲು ಗುರಿ ಹಾಕಿಕೊಂಡಿದೆ.ಜಿಲ್ಲೆಯ ಐದು ತಾಲೂಕಿನಿಂದ 1164 ಅರ್ಜಿಗಳು ಬಂದಿದ್ದು ಅವುಗಳಲ್ಲಿ 3264ಅರ್ಜಿಗಳನ್ನು ವಿಲೇವಾರಿ ಮಾಡಿ ರೈತರಿಗೆ ಪಟ್ಟಾ ನೀಡಲಾಗಿದೆಂದು ತಿಳಿಸಿದ್ದಾರೆ.ಬ್ರಿಟೀಷರು, ಮತ್ತು ರಾಜರ ಕಾಲದ ಅವಧಿಯಲ್ಲಿ ವಯಕ್ತಿಕ ಹಾಗು ದೇವದಾಯಿ ಇನಾಂ ನೀಡಲಾಗಿತ್ತು.ಇದರಿಂದ ಜಮೀನುಗಳು ಕಲಂ ನಂ 6 ರಲ್ಲಿ ಇನಾಂ ಎಂದು ಇರುವುದರಿಂದ ಆ ಜಮೀನುಗಳ ಮಾರಾಟ ಮಾಡಿದರೂ ಹಕ್ಕು ಬದಲಾವಣೆ ಆಗುತ್ತಿರಲಿಲ್ಲ. ಅದಕ್ಕಾಗಿ ಸರ್ಕಾರ1978 ರಲ್ಲಿ ಇನಾಂ ರದ್ದತಿ ಕಾಯ್ದೆ ಜಾರಿಗೆ ತಂದಿತ್ತು. ಆಗ ಮತ್ತು 1988 ರಲ್ಲಿಯೂ ಅರ್ಜಿ ಸಲ್ಲಿಸಿದ ರೈತರಿಗೆ ಇನಾಂ ರದ್ದು‌ಮಾಡಿದ್ದರೂ ಇನ್ನೂ ಅನೇಕರ ಜಮೀನು ಹಾಗೇ ಇದ್ದುದರಿಂದ ಮತ್ತೆ ಸರ್ಕಾರ ಅರ್ಜಿ ಸಲ್ಲಿಸಲು ಕಳೆದ ಜನವರಿ 27 ರ ವರೆಗೆ ಅವಕಾಶ ನೀಡಿತ್ತು ಆಗ ಜಿಲ್ಲೆಯಲ್ಲಿ  11634 ಅರ್ಜಿ ಬಂದಿದ್ದವು. ಅವುಗಳಲ್ಲಿ  3264 ವಿಲೇವಾರಿ ಮಾಡಿದೆ.ಇನಾಂ ರದ್ದತಿಗೆ ಯಾರು  ಮಧ್ಯವರ್ತಿಗಳಿಗೆ ಹಣ ನೀಡಬೇಕಿಲ್ಲ. ಕೇವಲ ಸರ್ಕಾರದ ಶುಲ್ಕ ಪಾವತಿಸಿ ಪಟ್ಟಾ ತೆಗೆದುಕೊಂಡು ಹೋಗಬೇಕೆಂದರು.ವ್ಯಕ್ತಿ ಇನಾಂನ್ನು ಇಲಾಖೆಯಿಂದ ನಡೆಸಿದ್ದು. ದೇವದಾಯಿ ಇನಾಂ ರದ್ದತಿ ಭೂನ್ಯಾಯ ಮಂಡಳಿ ತೀರ್ಮಾನ ತೆಗೆದುಕೊಳ್ಳುತ್ತದೆ.1974 ರ ಹಿಂದಿನಿಂದಲೂ ಉಳುಮೆ ಮಾಡುತ್ತಿರುವವರಿಗೆ ಮಾತ್ರ ಪಟ್ಟಾ ನೀಡಲಿದೆ.ದೇವದಾಯಿ ಇನಾಂ ಜಮೀನು ಪಟ್ಟ ಪಡೆದರೂ 15 ವರ್ಷದ ವರೆಗೆ ಮಾರಾಟ ಮಾಡುವಂತೆ ಇಲ್ಲ ಎಂದು ಮಾಹಿತಿ‌ ನೀಡಿದರು. ದೇವದಾಯಿ ಇನಾಂ ರದ್ದತಿ‌ಕೋರಿ  280 ಅರ್ಜಿ ಬಂದಿವೆಂದರು. ಪ್ರಮಾಣ ಪತ್ರ:ಕಳೆದ ವರ್ಷದಂತೆ ಈ ವರ್ಷವೂ ಜಿಲ್ಲೆಯಲ್ಲಿ 371 ಜೆ  ಪ್ರಮಾಣ ಪತ್ರ ಸರ್ಕಾರಿ ಮತ್ತು ಅನುದಾನಿತಕಾಲೇಜುಗಳಿಂದ  ನೇರವಾಗಿ 6900 ಅರ್ಜಿ ಪಡೆದು ನೀಡುತ್ತಿದೆ.  ಈ ಪ್ರಕ್ರಿಯೆ ನಡೆದಿದೆ‌ ಸಧ್ಯದಲ್ಲೇ ಪೂರ್ಣಗೊಳ್ಳಲಿದೆ.ಕಳೆದ ವರ್ಷ ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳಿಗೂ ನೀಡಿತ್ತು. ಆದರೆ ಖಾಸಗಿ ಕಾಲೇಜಿನವರು ಅಗತ್ಯ  ದಾಖಲೆಗಳನ್ನು ನೀಡಲು ವಿಳಂಬ ಮಾಡುತ್ತಿರುವುದರಿಂದ ಈ ವರ್ಷ ಕೈ ಬಿಡಲಾಗಿದೆಂದರು. ಈಗಲೂ ಅವರು ಅಗತ್ಯ ದಾಖಲೆಗಳೊಂದಿಗೆ ಮದರೆ ಪರಿಶೀಲನೆ ಮಾಡಿ ನೀಡಲಿದೆಂದರು.ಪಿಂಚಣಿ ಬಾಕಿ‌ ಇಲ್ಲ:ವೃದ್ಯಾಪ್ಯ, ವಿಧವ, ವಿಕಲಚೇತನ ಸೇರಿದಂತೆ ವಿವಿಧ ಮಾಶಾಸನದ ಪಿಂಚಣಿ ಬಿಡುಗಡೆಯಲ್ಲಿ ವಿಳಂಬ ಇಲ್ಲ. ಇದರಡಿ 3500 ವೇತನಗಳು ಅಮಾನತ್ ಮಾಡಿತ್ತು. ಅವುಗಳ ಪರಿಶೀಲನೆ ಮಾಡಿ ಮಂಜೂರಾತಿ‌ ನೀಡಿದ್ದು. ಈಗ ಕೇವಲ 75 ಮಾತ್ರ  ಪೆಂಡಿಗೆ ಇವೆಂದು ಹೇಳಿದರು.ಪಿಂಚಣಿ ಹಣ ನೀಡಲು ಅಂಚೆ ಇಲಾಖೆಯವರು ಸೇರಿದಂತೆ ಯಾರೇ ಆಗಲಿ ಹಣ ಕೇಳಿದರೆ ದಾಖಲೆ ಸಮೇತ ದೂರು‌ ನೀಡಿದರೆ ಕ್ರಮ ಜರುಗಿಸಲಿದೆಂದು ಹೇಳಿದರು.‌ ಉನ್ನತಿ ಯೋಜನೆ:ಆದಾಯ ಪ್ರಮಾಣ ಪತ್ರವನ್ನು 1 ರಿಂದ 10 ನೇ ತರಗತಿವರೆಗಿನ ಸರಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ನೀಡುವ  ಉನ್ನತಿ ಯೋಜನೆ ಜಾರಿಗೆ ತಂದಿದೆ. ಇದರಡಿ ಈ ವರ್ಷ  41568 ಮಕ್ಕಳಿಗೆ  ಬರುವ ಸೆ. ಅಂತ್ಯದೊಳಗೆ  ಜಾತಿ‌ ಮತ್ತು ಆದಾಯ ಪ್ರಮಾಣ ಪತ್ರ ನೀಡಲಿದೆಂದು ಎಸಿ ಹೇಮಂತ್ ಕುಮಾರ್ ತಿಳಿಸಿದ್ದಾರೆ.