ಇದ್ದೂ ಇಲ್ಲದಂತಾದ ನೀರಿನ ಘಟಕ

ಗುರುಮಠಕಲ್ ನ 24: ತಾಲೂಕಿನ ಚಂಡರಿಕಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಶುದ್ಧ ನೀರಿನ ಘಟಕ ಇದ್ದು ಇಲ್ಲ ದಂತಾಗಿದೆ
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಶುದ್ಧ ಕುಡಿಯುವ ನೀರಿನ ಘಟಕವು ಶಾಸಕರ ಅನುದಾನದಲ್ಲಿ ಕಾಮಗಾರಿ ಪ್ರಾರಂಭ ದಿನಾಂಕ 16-11-2020 ಟೆಂಡರ್ ಮೊತ್ತ ರೂಪಾಯಿ 1296950.ಲಕ್ಷ. ಲೆಕ್ಕ ಶೀರ್ಷಿಕೆ.ಞಞಖಆಃ(ಒiಅಡಿo)2019-2020 ನೇ ಸಾಲಿನ ಯೋಜನೆ ಅಡಿಯಲ್ಲಿ.ಕಾಮಗಾರಿಯ ಹೆಸರು ತಾಲೂಕಿನ ಗ್ರಾಮದ ಸರಕಾರಿ ಪ್ರೌಢಶಾಲೆ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಲಾಗಿತ್ತು. ಈ ನೀರಿನ ಘಟಕ ಬಂದ್ ಆಗಿ ಸುಮಾರು ಆರು ತಿಂಗಳುಗಳಾಯಿತು.ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ವಿದ್ಯಾರ್ಥಿ ಗಳಿಗೆ ಶುದ್ಧವಾದ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.