ಇದೇ 29 ರಿಂದ ಸಂಸತ್ ಅಧಿವೇಶನ: ಭಾನುವಾರ ಸರ್ವ ಪಕ್ಷ ಸಭೆ ಕರೆದ ಪ್ರಧಾನಿ

ನವದೆಹಲಿ, ನ.22- ಸಂಸತ್ತಿನ ಚಳಿಗಾಲದ ಅಧಿವೇಶನ ನವಂಬರ್ 29 ರಿಂದ ಡಿಸೆಂಬರ್ 23 ರ ವರೆಗೆ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ನ. 28 ಪ್ರಧಾನಿ ನರಂದ್ರ ಮೋದಿ ಅವರು ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡುವಂತೆ ಮುಂದಿನ ಭಾನುವಾರ ಸರ್ವಪಕ್ಷಗಳ ನಾಯಕರ ಸಭೆ ಕರದಿದ್ದಾರೆ.

ಈ ಸಭೆಯಲ್ಲಿ ಸುಗಮ ಕಲಾಪಕ್ಕೆ ಸಹಕಾರ ನೀಡುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಯುವ ಸಾದ್ಯತೆಗಳಿವೆ.

ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ಕಳೆದ 1 ವರ್ಷದಿಂದ ರೈತರು ನಡೆಸುತ್ತಿದ್ದ ಪ್ರತಿಭಟನೆಗೆ ಮಣಿದಿರುವ ಕೇಂದ್ರ ಸರ್ಕಾರ ,ಅದರಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಿನ್ನೆಡೆಯಾಗಿದೆ‌.

ಸಂಸತ್ ಅಧಿವೇಶನಲ್ಲಿ ಅಂಗೀಕಾರ ಮಾಡಿರುವ ಕೃಷಿ ಕಾಯ್ದೆಗಳನ್ನು ಸಂಸತ್ ಅಧಿವೇಶನಲ್ಲಿ ಹಿಂದಕ್ಕ ಪಡೆಯುಗ ಅಂಗೀಕಾರ ಮಾಡುವ ಎಲ್ಲಾ ಸಾದ್ಯತೆಗಳು ಇವೆ.

ಈ ಹಿನ್ನೆಲೆಯಲ್ಲಿ ಮುಂದರ ಅನುಸರಿಸಬೇಕಾದ ನಡೆ ಸೇರಿದಂತೆ ಹಲವು ವಿಷಯಗಳ ಕುರಿತು ಸರ್ವ ಪಕ್ಷಗಳ ನಾಯಕರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚರ್ಚೆ ನಡೆಸುವ ಎಲ್ಲಾ ಸಾದ್ಯತೆಗಳಿವೆ.

ಕಳೆದ ಬಾರಿಯ ಸಂಸತ್ ಅಧಿವೇಶನ ನಡೆದಾಗ ರೈತರ ಸಮಸ್ಯೆ ಸೇರಿದಂತೆ ಮತ್ತಿತರ ವಿಷಯಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಸೇರಿದಂತೆ ವಿರೋದ ಪಕ್ಷಗಳು ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಹೊರಾಟ ನಡೆಸಿದ್ದರು.