ಇದೇ ವರ್ಷ ಕಾಂತಾರ ೨ ಸಿನಿಮಾ ಬಿಡುಗಡೆ

ಬೆಂಗಳೂರು,ಜು.೮-ಕಾಂತಾರ ಸಿನಿಮಾ ಮೂಲಕ ಹೆಚ್ಚಿನ ಮನ್ನಣೆ ಪಡೆದ ನಟ ರಿಷಬ್ ಶೆಟ್ಟಿ ನಿನ್ನೆ ಅಭಿಮಾನಿಗಳ ಜೊತೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದು, ಕಾಂತಾರ ೨ ಸಿನಿಮಾ ರಿಲೀಸ್ ಯಾವಾಗ ಎಂದು ಹೇಳಿದ್ದಾರೆ.

ಕಾಂತಾರ ಸಕ್ಸಸ್ ಬಳಿಕ ಕಾಂತಾರ ೨ ಯಾವಾಗ ಎಂಬ ಪ್ರಶ್ನೆಗಳು ಕೇಳಿ ಬರುತ್ತಿತ್ತು. ಸದ್ಯ ಇದಕ್ಕೆಲ್ಲಾ ರಿಷಬ್ ಉತ್ತರ ಕೊಟ್ಟಿದ್ದಾರೆ.

ಕಾಂತಾರ ೨ ಸಿನಿಮಾ ಬಗ್ಗೆ ಮಾತನಾಡಿರುವ ರಿಷಬ್ ಈಗಾಗಲೇ ಸಂಭಾಷಣೆ ಮುಗಿಸಿದ್ದೇವೆ. ಸಿನಿಮಾ ಕೆಲಸಗಳು ನಡೆಯುತ್ತಿವೆ. ಸಿನಿಮಾ ಮಾಡಲು ಸ್ಥಳ ಮತ್ತು ಕಲಾವಿದರನ್ನು ಆಯ್ಕೆ ಮಾಡಬೇಕಿದೆ. ನಂತರ ಹೊಂಬಾಳೆ ಫಿಲಮ್ಸ್ ಅವರು ಅಧಿಕೃತವಾಗಿ ಸಿನಿಮಾದ ಚಿತ್ರೀಕರಣದ ಬಗ್ಗೆ ಘೋಷಣೆ ಮಾಡಲಿದ್ದಾರೆ ಎಂದು ರಿಷಬ್ ಹೇಳಿದ್ದಾರೆ.

ಅಲ್ಲದೆ, ಮಳೆಯಲ್ಲೇ ಸಿನಿಮಾ ಚಿತ್ರೀಕರಣವನ್ನು ಮಾಡುತ್ತೇವೆ. ಫಿಲ್ಮ್ ಗಾಗಿ ಮಾರುದ್ದ ಗಡ್ಡ ಬಿಡುತ್ತೀನಿ. ವಿಶೇಷ ಕಸರತ್ತುಗಳನ್ನು ಕಲಿಯುತ್ತಿದ್ದೇನೆ ಎಂದು ಹೇಳಿದ್ದಾರೆ.

ಇದೇ ವರ್ಷ ಸಿನಿಮಾದ ಚಿತ್ರೀಕರಣ ಹಾಗೂ ಬಿಡುಗಡೆಯಾಗಲಿದೆ ಎಂದು ರಿಷಬ್ ಹೇಳಿದ ಬಳಿಕ ಕಾಂತಾರ ೨ ಸಿನಿಮಾ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.