ಇದು ಸಿನಿಮಾ ಟಿಕೆಟ್ ಗಾಗಿ ನಿಂತ ಸಾಲು ಅಲ್ಲ

module: NormalModule; touch: (-1.0, -1.0); modeInfo: ; sceneMode: Auto; cct_value: 0; AI_Scene: (-1, -1); aec_lux: 120.0;


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.27: ಹೀಗೆ ನೂರಾರು ಜನ ಸಾಲಾಗಿ ನಿಂತು ಮುಗಿ ಬಿದ್ದಿರುವುದು ಯಾವುದೇ ಸಿನಿಮಾದ ಟಿಕೆಟ್ ಗಾಗಿ ಅಲ್ಲ. ಉತ್ತಮ ಮಳೆ ಬಿದ್ದಿರುವುದರಿಂದ ತೊಗರಿ ಬೀಜಕ್ಕಾಗಿ ರೈತರು ನಗರದಲ್ಲಿ  ಅಂಗಡಿಗೆ  ಮುಗಿಬಿದ್ದಿರುವುದು.
ಕಳೆದ ಹಲವು ದಿನಗಳಿಂದ ಮಳೆ ಬೀಳುತ್ತಿದ್ದು ಮುಂಗಾರು ಹಂಗಾಮಿನ ಬಿತ್ತನೆಗೆ ಸಹಕಾರಿಯಾಗಿದೆ. ಇದರಿಂದ ರೈತರು ತೊಗರಿ ಬಿತ್ತನೆಗೆ ಮುಂದಾಗಿದ್ದಾರೆ. ಬಹುತೇಕ ರೈತರು ತೊಗರಿ ಬಿತ್ತನೆಗೆ ಆಸಕ್ತಿ ತೋರಿದ್ದಾರೆ.
ನೆರೆಯ ಆಂದ್ರಪ್ರದೇಶದ ಆಲೂರು, ಉರವಕೊಂಡ, ಗುಂತಕಲ್ಲು, ರಾಯದುರ್ಗಂ, ಆದೋನಿ ತಾಲೂಕಗಳ ರೈತರಿಗೆ ಅಗತ್ಯವಾದ ತಿಗರಿ ಬೀಜ ದೊರೆಯದೇ ಇರುವುದು ಮತ್ತು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದರಿಂದ. ಅಲ್ಲಿನ ರೈತರು ಬಳ್ಳಾರಿ ನಗರಕ್ಕೆ ತೊಗರಿ ಬೀಜ ಖರೀದಿಗೆ ಬಂದಿದ್ದಾರೆ.
ನಗರದ ಕೆ.ಸಿ.ರಸ್ತೆಯಲ್ಲಿರುವ ಬೀಜ ಮಾರಾಟದ ಅಂಗಡಿಗಳ ಮುಂದೆ ಇಂದು ಬೆಳಿಗ್ಗೆ ಆರು ಗಂಟೆ ವೇಳೆಗೆ ಬಂದು ಕುಳಿತಿದ್ದರು.  ಅಂಗಡಿ ಬಾಗಿಲು ತೆರೆಯುವ ವೇಳೆಗೆ ನೂರಾರು ರೈತರು ಸೇರಿದ್ದಾರೆ.
ಒಂದು‌ ಕಿಲೋ ತೊಗರಿ ಬೀಜವನ್ನು ಎರೆಡು ನೂರು ರೂನಂತೆ ಮಾರಾಟ ಮಾಡಲಾಗುತ್ತಿದೆಯಂತೆ.
ನಾಮುಂದು ತಾಮುಂದು ಎಂದು ಮುಗಿ ಬಿದ್ದಿದ್ದರಿಂದ  ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಆಗಿದ್ದರಿಂದ  ಪೊಲೀಸರು ಆಗಮಿಸಿ ರೈತರನ್ನು ಸಾಲಾಗಿ ನಿಲ್ಲಿಸಿದರು.
ನಮ್ಮ ಜಿಲ್ಲೆಯವರಗಿಂತ ಆಂದ್ರ ಪ್ರದೇಶದ ರೈತರೇ ಹೆಚ್ಚಾಗಿ ಬೀಜ ಖರೀದಿ ಮಾಡುತ್ತಿದ್ದಾರೆ. ಬೆಳೆಯ ನಂತರ ಫಸಲನ್ನು ಸಹ ಆಂದ್ರದ ರೈತರು ಮಾಲನ್ನು ಬಳ್ಳಾರಿ ಮಾರುಕಟ್ಟೆಗೆ ತರುವುದು ಸಹ ಸಹಜವಾಗಿದೆ.