ಇದು ಮದ್ಯಪ್ರಿಯರ ಬೈಕ್  ಪಾರ್ಕಿಂಗ್ ರಸ್ತೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಅ.18: ಇದು ಇತ್ತೀಚಗಷ್ಟೇ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿ ಮಾಡಿದ್ದರೂ, ರಸ್ತೆಯ ಒಂದು ಭಾಗ ಮದ್ಯ ಪ್ರಿಯರ ಬೈಕ್ ಪಾರ್ಕಿಂಗ್  ರಸ್ತೆಯಾಗಿ ಪರಿವರ್ತನೆಯಾಗಿದೆ.
ಎಂ.ಜಿ.ಪೆಟ್ರೋಲ್ ಬಂಕ್ ಎದುರಿನ ಲಿಕ್ಕರ್ ಶಾಪ್ ಮತ್ತು ಬಾರ್ ನಿಂದಾಗಿ ಇಲ್ಲಿಗೆ ಬರುವ ಗ್ರಾಹಕರಿಗೆ ಅಗತ್ಯ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಸಂಜೆಯಾದರೆ ರಸ್ತೆಯ ಒಂದು ಭಾಗವನ್ನು ಆಕ್ರಮಿಸಿ ಬೈಕ್ ಗಳನ್ನು ಪಾರ್ಕಿಂಗ್ ಮಾಡಲಾಗುತ್ತದೆ.
ಇತರ ವಾಹನಗಳ, ಜನರ  ಓಡಾಟಕ್ಕೆ ಸಮಸ್ಯೆಯಾದರೂ ಪೊಲೀಸರಿಂದ ಯಾವುದೇ ಕ್ರಮ ಜರುಗಿಸದ ಬಗ್ಗೆ ನಾಗರೀಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇನ್ನು ಅದೇರೀತಿ ಇದೇ ಪ್ರದೇಶದಲ್ಲಿನ ಪಾಸ್ಟ್ ಫುಡ್ ಸೆಂಟರ್ ನಿಂದ ಹಗಲು ವೇಳೆಯಲ್ಲಿ ರಸ್ತೆಯಲ್ಲೂ ಅಡ್ಡ ದಿಡ್ಡಿ ಬೈಕ್ ಪಾರ್ಕಿಂಗ್ ಮಾಡಿ ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ.
ಒಟ್ಟಾರೆ ಎಂ.ಜಿ.ಸರ್ಕಲ್ ನಲ್ಲಿ ಆಟೋ, ಬೈಕ್ ಗಳ    ಅವೈಜ್ಞಾನಿಕ ಪಾರ್ಕಿಂಗ್ ನಿಂದ ಆಗುತ್ತಿರುವ ಸಮಸ್ಯೆ ನಿವಾರಣೆ ಆಗಬೇಕಿದೆ‌