ಇದು ಬಳ್ಳಾರಿಯ ಅಭಿವೃದ್ಧಿ

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.25: ನಗರದ ಕೆಲ ರಸ್ತೆಗಳನ್ನು ಬಿಟ್ಟರೆ ಬಹುತೇಕ  ರಸ್ತೆಗಳ‌ ಪರಿಸ್ಥಿತಿ ಇದಕ್ಕಿಂತ ಭಿನ್ನ‌ಇಲ್ಲ. ಇದು ಅಭಿವೃದ್ಧಿ ಹೊಂದಿದೆ ಬಳ್ಳಾರಿ‌ ನಗರ ಎಂದು ಭಾಷಣ ಬಿಗಿಯುವ ಜನರಿಗೆ ಜನತೆ ತೋರಿಸುವ ಕನ್ನಡಿಯಾಗಿದೆ.
ಇದು ನಗರದ ಕನಕ ದುರ್ಗಮ್ಮ ದೇವಸ್ಥಾನದಿಂದ ಸಂಗನಕಲ್ಲಿಗೆ ತೆರಳುವ ರಸ್ತೆ. ಕಳೆದ ಹತ್ತು ವರ್ಷಗಳ ಹಿಂದೆ ಕಿಲೋ ಮೀಟರ್ ಗೆ ಆರೇಳು ಕೋಟಿ ರೂ ವೆಚ್ಚ‌ ಮಾಡಿ ನಿರ್ಮಿಸಿದ್ದು.
ನಂತರದ ದಿನಗಳಲ್ಲಿ ಜನತೆ ಈ ರಸ್ತೆಯ‌ ಮೂಲಕ ಓಡಾಡುವಾಗ ರಸ್ತೆಯನ್ನು ಚೆನ್ನಾಗಿ ಮಾಡಿದ್ದಾರೆ ಪುಣ್ಯಾತ್ಮರು ಎಂದು ನೆನೆಸಿದ್ದು ಉಂಟು.
ಆದರೆ ಕೆಲ ವರ್ಷಗಳ ಹಿಂದೆ ಕುಡಿಯುವ ನೀರಿನ ಪೈಪ್ ಅಳವಡಿಕೆಯಲ್ಲಿ ಪಾಲಿಕೆಯ ಅಧಿಕಾರಿಗಳು ಆಡಿದ ಕಳ್ಳಾಟದಿಂದ ಈ ರಸ್ತೆಗೆ ಈ ದುಸ್ಥಿತಿ ಬರಲು ಮತ್ತೊಂದು‌ ಕಾರಣ ಆಯ್ತು.
ಕುಡಿಯುವ ನೀರಿನ ಯೋಜನೆಗೆ ಹೊಸ ಪೈಪ್ ಗಳನ್ನೇ ಹಾಕದೇ ಬಿಲ್ ಮಾಡಿದ್ದರು ಅಧಿಕಾರಿಗಳು.
ಈ ಬಗ್ಗೆ ತನಿಖೆಗೆ ಆಗ್ರಹಿಸಿದಾಗ, ಎಸಿಬಿ, ಲೋಕಾಯುಕ್ತಕ್ಕೆ ದೂರು ಹೋದಾಗ ಪಾಲಿಕೆಯ ಇಂಜಿನೀಯರ್ ತಾನು ಮಾಡಿದ ತಪ್ಪು ಎಲ್ಲಿ ಬಯಲಿಗೆ ಬರುತ್ತೆ ಅಂತ ಒಂದೇ ದಿನ ರಾತ್ರೋರಾತ್ರಿ ರಸ್ತೆ ಅಗೆದು ಪೈಪ್ ಹಾಕಿ ಸರಿಯಾಗಿ‌ ಜೋಡಿಸದೇ ಮುಚ್ಚಿಹಾಕಿದೆ.
ಆದರೆ ತನಿಖೆ ಇದ್ದರಿಂದ ತೋಡಿದ ರಸ್ತೆ ದುರಸ್ಥಿ ಮಾಡದೇ ವರ್ಷಗಟ್ಟಲೇ  ಬಿದ್ದಿತ್ತು. ತನಿಖೆ ಮಾಡಿದ ನಂತರ ಒಂದಿಷ್ಟು ಡಾಂಬರೀಕರಣ ಮಾಡಿದೆ ಆದರೆ ಮತ್ತೆ ಹಾಳಾಗುತ್ತಿದೆ.
ಈ ರಸ್ತೆಯಲ್ಲಿ ಈ ಭಾಗವಷ್ಟೇ ಅಲ್ಲದೆ ಇತರೇ ಭಾಗದಲ್ಲೂ ದೊಡ್ಡ ದೊಡ್ಡ ಗುಂಡಿಗಳು‌ಬಿದ್ದಿವೆ. ಸ್ಪೀಡ್ ಬ್ರೇಕರ್ ಗಳ ಸಹ ಹಾಳಾಗಿವೆ, ಕುಣಿಗಳನ್ನು ತಪ್ಪಿಸಿ ವಾಹನ ಚಲಾಯಿಸುಚಾಗ ಸ್ವಲ್ಪ ಎಚ್್ರ ತಪ್ಪಿದರೂ ಕೆಳಗೆ ಬಿದ್ದು ಕೈಕಾಲು ಮುರಿದುಕೊಳ್ಳುವುದು ಖಚಿತವಾಗಿದೆ. ಈ ರೀತಿ ಅನೇಕ ಜನ ಅನುಭವಿಸಿದ್ದಾರೆ.
ಜನ ದಿನಾಲೂ ಹಿಡಿ ಶಾಪ ಹಾಕುತ್ತಲೇ ಓಡಾಡುತ್ತಿದ್ದಾರೆ. ಕನಿಷ್ಟ ಕುಣುಗಳಿಗೆ ಒಂದಿಷ್ಟು ಸಿಮೆಮನಟ್ ಮಿಕ್ಸರ್ ಆದರೂ ಹಾಕಿ ವಾಹನಗಳ ಓಡಾಡಲು ಅನುಕೂಲ‌ ಮಾಡಿಕೊಡಿ ಎಂಬುದು ಜನರ ಅಹವಾಲು ಆಗಿದೆ.
a