ಇದು ನಿಮ್ಮ ವಾಣಿ


18  ಗಿಡ ನೆಟ್ಟು ಪೋಷಿಸಿದ ಪರಿಸರ ಸ್ನೇಹಿ ಪ್ರಭುಸ್ವಾಮಿಗಳು
ಮಾನ್ಯರೇ,
 ಧಾರವಾಡ ವಿಶ್ವವಿದ್ಯಾನಿಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಎಮ.ಎ. ಪದವಿ ಪಡೆದ ಸಂಡೂರಿನ ಶ್ರೀ ಪ್ರಭುದೇವ ಸಂಸ್ಥಾನ ವಿರಕ್ರತಮಠದ ಪರಮಪೂಜ್ಯಶ್ರೀ ಪ್ರಭುಮಹಾಸ್ವಾಮಿಗಳು ವಿರಕ್ತಮಠಕ್ಕೆ ಸೇರಿದ 18 ಎಕರೆ ಹೊಲದಲ್ಲಿ ಸಹಸ್ರಾರು ಹಣ್ಣಿನ ಗಿಡಗಳನ್ನು ನೆಟ್ಟಿರುವುದು ತಮಗೆಲ್ಲಾ ಗೊತ್ತಿರುವ ವಿಚಾರ ರಸಗೊಬ್ಬರ ಕೀಟ ನಾಶಕ ಬಳಸದೇ ಭೂಮಿಯ ಫಲವತ್ತನ್ನು ಕಾಯದ್ದು ಕೊಂಡಿದ್ದಾರೆ. ಶೂನ್ ನಿರ್ವಹಣೆ ವೆಚ್ಚದಲ್ಲಿ ಕೃಷಿ ಮಾಡುತ್ತಿರುವುದು ಒಂದು ಬಗೆಯ ವಿಶೇಷತೆ. ಧಾರ್ಮಿಕ ಕಾಯ್ರಕಮ್ರದಲ್ಲಿ ಭಾಗವಹಿಸುವುದರ ಮೂಲಕ ನಿರಂತರ ಹೊದಲ್ಲಿ ಕೆಲಸ ಮಾಡುವುದರ ಮಾದರಿ ಹಣ್ಣಿನ ತೋಟ ಮಾಡಿದುದು ಒಂದು ವಿಶೇಷತೆ ಅರಸಿಕೇರಿಯ ಕೋಲ ಶಾಂತೇಶ್ವರ ಮಠದ ಶಾಂತ ಲಿಂಗ ದೇಸಿಕೇಂದ್ರ ಸ್ವಾಮಿಜಿಯವರು ಬೆಳಗಾವಿ ಜಿಲ್ಲೆಯ ಚಿಂಚೊಣಿ ಮಠದ ಅಲ್ಲಮ ಪ್ರಭುಸ್ವಾಮಿಗಳು ಸಂಡೂರಿನ ಶ್ರಿ ಪ್ರಭುಮಹಾಸ್ವಾಮಿಗಳು ಈ ಮೂವರು ಗೆಳೆಯರು ಈ ಮೂವರು ಕೃಷಿಕರು. ಕಾಯಕ ಮತ್ತು ದಾಸೋಹ ಪರಿಕಲ್ಪನೆಯನ್ನ ಹೊಂದಿದವರು.
ಹಲವಾರು ಪಟ್ಟಣಗಳಿಗೆ, ಗ್ರಾಮಗಳಿಗೆ ಧಾರ್ಮಿಕ ಕಾರ್ಯಕ್ರಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಎಲ್ಲಿ ಉತ್ತಮ ಜಾತಿಯ ಹಣ್ಣಿನ ಗಿಡಗಳು ಅಲ್ಲಿಂದ ಹಣ್ಣಿನ ಗಿಡಗಳನ್ನು ತರುತ್ತಾರೆ. ಪರಮಪೂಜ್ಯರು ಎಲ್ಲಿಗೆ ಹೋದರೂ ಗಿಡಗಳನ್ನು ತರುವುದು ಮರೆಯುವುದಿಲ್ಲ. ಪ್ರಭುಮಹಾಸ್ವಾಮಿಗಳು ಬಹತೇಕ ಸಮಯವನ್ನು ವೈರ್ಥ ಮಾಡದೇ ಕಾಲಪಾಹರಣ ಮಾಡದೇ ತೋಟದಲಲಿ ಸಮಯವನ್ನು ಕಳೆಯುವುದು ಬಳ್ಳಾರಿ ಜಿಲ್ಲೆಯಲ್ಲೇ ಕನ್ನಡ ಸ್ವಾಮಿಗಳಾದ ಪ್ರಭು ಸ್ವಾಮಿಗಳು ಸಾಹಿತ್ಯದ ಬಗ್ಗೆ ಅಪಾರವಾದ ಆಸಕ್ತ ಉಳ್ಳವರು ಪುಸ್ತಕ ಪ್ರೇಮಿಗಳು ಹೌದು. ಹಲವಾರು ದಾನಿಗಳ ಸಹಕಾರದಿಂದ ಹಲವಾರು ಕೃತಿಗಳನ್ನು ಹೊರ ತಂದಿದ್ದಾರೆ. ಇತರೆ ಮಠಗಳಿಗಿಂತ ಸಂಡೂರಿನಶ್ರೀಮಠ ಭಿನ್ನವಗಿದ್ದು, ವರ್ಷಕ್ಕೊಮ್ಮೆ ಪುಸ್ತಕ ಬಿಡುಗಡೆಯಂಥಹ ಕಾರ್ಯಕ್ರಮ, ಅಕ್ಕನ ಬಳಗ, ಕದಳಿ ವೇದಿಕೆ ಶ್ರೀ ವಿರಭದ್ರೇಶ್ವರ ಮಹಿಳಾ ಭಜನಾ ಮಮಡಳಿಗೊಡಿ ಕಾರ್ಯಕ್ರಮ ನಡೆಸುವುದುಲ್ಲದೇ 301 ಶಿವಾನುಭವಗೋಷ್ಠಿ ಶ್ರೀಮಠದಲ್ಲಿ ನಡೆದವರು. ಇಂದಿಗೂ ಆನ್‍ಲೈನ್‍ನಲ್ಲಿ ಶಿವಾನಭುವಗೋಷ್ಠಿಯು ಜಿಂದಾಲ್ ಬಸವಬಳಗ ಸಮಿತಿಯಿಂದ ನಡೆದುಕೊಂಡು ಬರುವುದು ಒಂದು ವಿಶೇಷವಾಗಿದೆ. ಬಸವ ತತ್ವವನ್ನು ಕಟ್ಟು ನಿಟ್ಟಾಗಿ ಪಾಲಿಸುವುದರ ಜೊತೆಗೆ ಬಳ್ಳಾರಿ ಜಿಲ್ಲೆಯಲ್ಲೇ ಆಶಿರ್ವಚನದ ಸ್ವಾಮಿ ಎಂದೇ ಪ್ರಖ್ಯಾತರಾಗಿದ್ದಾರೆ. ಮಠದಲ್ಲಿ 25 ಸಾವಿರಕ್ಕೂ ಹೆಚ್ಚು ಪುಸ್ತಕಗಳು ಗ್ರಂಥಾಲಯದಲ್ಲಿ ಇವೆ. ಮನೆಯಲ್ಲಿ ಮಹಾಮನೆ ಶ್ರಾವಣ ಮಾಸದಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಜೊತೆಗೆ ಬಸವ ತತ್ವವನ್ನು ಪ್ರತಿಪಾದಿಸುತ್ತಾರೆ. ಒಟ್ಟಾರೆಯಾಗಿ ಬಳ್ಳಾರಿ ಜಿಲ್ಲೆಯಲ್ಲಿ ಸಂಡೂರಿನ ಪರಮಪೂಜ್ಯರು ಸದಾ ಸುದ್ದಿಯಲ್ಲಿರುತ್ತಾರೆ. ಏನಾದರೋಂದು ಸಾಧನೆ ಮಾಡಬೇಕು ಎನ್ನುವ ಛಲಗಾರ ಸ್ವಾಮಿ ಯಾಗಿದ್ದಾರೆ. ಶ್ರೀಮಠದಲ್ಲಿ ನಿರಂತರವಾಗಿ ದೇವಿ ಪುರಾಣ ನಡೆಯುತ್ತಿರುವುದು ಸಂಡೂರಿನಲ್ಲಿ ಮಾತ್ರ. ಸಂಪ್ರದಾಯದಂತೆ ದೇವಿ ಪುರಾಣವನ್ನು ನುರಿತ ಪಠಣ, ಪ್ರವಚನ ಕಾರರಿಂದ ಭಕ್ತರಿಗೆ ಕೆಳಿಸುತ್ತಾರೆ. ಲಿಂಗಪೂಜಾ ನಿಷ್ಠರು ದಾಸೋಹ ಪ್ರೇಮಿಗಳಾದ ಪೂಜ್ಯರು ಮಠದಲ್ಲಿಯೇ ಬಡ ವಿದ್ಯಾರ್ಥಿಗಳಿಗ ಹಾಸ್ಟೆಲ್ ನಿರ್ಮಿಸಿ ಗುಣಮಟ್ಟದ ಶಿಕ್ಷಣ ನೀಡುತ್ತಾರೆ. ಬಡ ವಿದ್ಯಾರ್ಥಿಗಳಿಗಾಗಿಯೇ ಶ್ರೀ ಪ್ರಭುದೇವರ ಪೌಢಶಾಲೆಗೊಳಗೊಂಡು ಶಿಶು ವಿಹಾರ ಎಲ್.ಕೆ.ಜಿ. ಯು.ಕೆ.ಜಿ. ಪ್ರಾರಂಭ ಮಾಡಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾರೆ. ಪರಮಪೂಜ್ಯರ ಶಿಕ್ಷಣ ಪ್ರೇಮಿಗಳು ಸಾಹಿತಿಗಳು ಆಧ್ಯತ್ಮ ಚಿಂತಕರು ಇಲ್ಲಿ ಮತ್ತೊಂದು ವಿಶೇಷವೇನೆಂದರೆ ಮಕ್ಕಳಿಎ ಕನ್ನಡದ ಮೇಸ್ಟ್ರಾಗಿ ಸ್ವತಹ ಥಾವೆ ಬೋದನೆ ಮಾಡುವುದ ರಮೂಲಕ ಮಕ್ಕಳಿಗೆ ವಿಶೇಷವಾಗಿ ಗುರುಗಳಾಗಿ ಮಕ್ಕಳ ಮಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುವುದ ಗಮನಾರ್ಹವಾದ ವಿಷಯವಾಗಿದೆ.
– ಅರಳಿ ಕುಮಾರಸ್ವಾಮಿ, ಸಂಡೂರು.