ಇದು ನಿಮ್ಮ ವಾಣಿ
ವರ್ಣನೆಗೆ ಮೀರಿದ ನದಿಗಳ ಹರಿವು


ಮಾನ್ಯರೇ,
ವೇದ ಪುರಾಣಗಳಲ್ಲಿ ನದಿಗಳ ವರ್ಣನೆ ಕುರಿತು ಓದಿದ್ದೇವೆ.ಆದರೆ ವರ್ಣನೆಗೆ ಮೀರಿ  ಕರ್ನಾಟಕ ಆಂಧ್ರಪ್ರದೇಶ ಗಡಿಯಲ್ಲಿ ವೇದಾವತಿ(ಹಗರಿ) ನದಿ ಇಂದು ಹರಿಯುತ್ತಿದೆ.
ಸೇತುವೆಯ ಮೇಲೆ ಸಂಚರಿಸುತ್ತಿರುವ ಅಂತರ ರಾಜ್ಯ ಪ್ರಯಾಣಿಕರಿಗೆ ಅದ್ಬುತ, ಆಶ್ಚರ್ಯವೆನಿಸಿ ರಸದೌತಣ ನೀಡಿದರೂ, ನದಿ ತಟದ ಜನರಿಗೆ ಆತಂಕಕಾರಿಯೇ ಸರಿ.
ಬಳ್ಳಾರಿ ತಾಲೂಕಿನ ಕುಂಟನಹಾಳು,ಯಾಳ್ಪಿ,ಕಗ್ಗಲ್,ಪರಮದೇವನಹಳ್ಳಿ,ಲಿಂಗದೇವನ ಹಳ್ಳಿ, ಹಗರಿ,ಮೀನಳ್ಳಿ,ಸಿಡಗಿನ ಮೊಳ,ಮೋಕ,ಬ್ಯಾಲಚಿಂತೆ ಇತ್ಯಾದಿ ಹಾಗೂ ಆಂಧ್ರಪ್ರದೇಶ ರಾಜ್ಯದ ಕರ್ನೂಲ್ ಜಿಲ್ಲೆಯ ಹಲವು ಹಳ್ಳಿಗಳು ಮುಳುಗುವ ಹಂತಕ್ಕೆ ಬಂದು ತಲುಪಿವೆ.
ನದಿ ದಂಡೆಯಲ್ಲಿ ರೈತರು ಬೆಳೆದ ಭತ್ತ, ಮೆಕ್ಕೆಜೋಳ, ಮೆಣಸಿನಕಾಯಿ ಹಾಗೂ ಹತ್ತಿ ಬೆಳೆಗಳು ಪೂರ್ಣ ಪ್ರಮಾಣದಲ್ಲಿ ಕೊಚ್ಚಿಕೊಂಡು ಹೋಗಿವೆ. ಲಕ್ಷಾಂತರ ರೂಪಾಯಿ ಬೆಳೆ ನಷ್ಠವಾಗಿದ್ದು ಒಂದು ಕಡೆಯಾದರೆ ರಸ್ತೆ ನಾಶವಾಗಿ ಹಳ್ಳಿಗಳು ಸಂಪರ್ಕ ಕಳೆದುಕೊಂಡಿರುವುದು ಮತ್ತೊಂದೆಡೆಯಾಗಿದೆ.
ಹವಾಮಾನ ಇಲಾಖೆ ಸೂಚನೆಯಂತೆ ಮುಂದಿನ ಎರಡು ದಿನಗಳಲ್ಲಿ ರಾಜ್ಯದಾದ್ಯಂತ ಹೆಚ್ಚಿನ ಮಳೆ ಇದೆ ಎಂಬ ಎಚ್ಚರಿಕೆ ನೀಡಿದ್ದಾರೆ. ಆದ್ದರಿಂದ ಈ ಹಳ್ಳಿಗಳಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸುವುದು ಉತ್ತಮ ಎಂದು ಕಂಡುಬರುತ್ತಿದೆ.
ಕಳೆದ ಐದು ದಶಕಗಳಿಂದ ಇಂತಹ ಮಳೆ ಆಗಿಲ್ಲ, ನದಿಯಲ್ಲಿ ಇಷ್ಟು ನೀರು ಕಂಡಿಲ್ಲ ಎಂದು ನದಿ ತಟದ ಹಳ್ಳಿಗಳ ಹಿರಿಯರು ಹೇಳುತ್ತಿದ್ದಾರೆ.
ಒಟ್ಪಾರೆಯಾಗಿ ಜಿಲ್ಲಾಡಳಿತ ಮುಂಜಾಗ್ರತೆ ತೆಗೆದುಕೊಂಡು ಜನ ಜಾನುವಾರುಗಳ ರಕ್ಷಣೆ ಮಾಡಬೇಕಾಗಿದೆ.ಜನ ಧೈರ್ಯ ತೆಗೆದುಕೊಂಡು ಸಂದರ್ಭ ಎದುರಿಸಬೇಕಾದೆ.
ರವಿಚೇಳ್ಳಗುರ್ಕಿ, ಶಿಕ್ಷಕರು